ಹುಟ್ಟುಹಬ್ಬದ ದಿನ ಭಾರತಕ್ಕೆ ಗಿಫ್ಟ್ ಕೊಟ್ಟ ಗೂಗಲ್!

Posted By:
Subscribe to Oneindia Kannada

ಬೆಂಗಳೂರು, ಸೆ.27: ಸರ್ಚ್ ಇಂಜಿನ್ ಲೋಕದ ದಿಗ್ಗಜ ಗೂಗಲ್ ಸಂಸ್ಥೆ ಇಂದು (ಸೆ.27) ತನ್ನ 18ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಅಂತರ್ಜಾಲ ಸಂಬಂಧಿತ ಅನೇಕಾನೇಕ ಸೇವೆ ಹಾಗೂ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಕೀರ್ತಿ ಗೂಗಲ್ ಗೆ ಸಲ್ಲುತ್ತದೆ. ತನ್ನ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ವಿಶೇಷವಾಗಿ ಭಾರತದ ಗ್ರಾಹಕರಿಗೆ ಗಿಫ್ಟ್ ನೀಡಿದೆ.

ಭಾರತದ ಇಂಟರ್ನೆಟ್ ಸ್ಪೀಡಿಗೆ ತಕ್ಕಂತೆ ನಿರ್ವಹಿಸಬಲ್ಲ ಉತ್ಪನ್ನಗಳನ್ನು ಗೂಗಲ್ ಘೋಷಿಸಿದೆ. ಇವುಗಳಲ್ಲಿ ವೈಫೈ ಪ್ಲಾಟ್ ಫಾರ್ಮ್ ಗೂಗಲ್ ಸ್ಟೇಷನ್, ಯೂಟ್ಯೂಬ್ ಗೋ ಎಂಬ ಅಪ್ಲಿಕೇಷನ್(ಆಫ್ ಲೈನ್ ಕ್ರೋಮ್ ವೆಬ್ ಬ್ರೌಸರ್ ಗಾಗಿ), 2ಜಿ ನೆಟ್ವರ್ಕ್ ನಲ್ಲಿ ಗೂಗಲ್ ಪ್ಲೇ ತ್ವರಿತವಾಗಿ ಲೋಡ್ ಆಗುವಂತೆ ಮಾಡಲಾಗುವುದು ಎಂದು ಗೂಗಲ್ ಉಪಾಧ್ಯಕ್ಷ ಸೀಸರ್ ಸೇನ್ ಗುಪ್ತ ಹೇಳಿದರು.

Google’s bonanza for India: light YouTube, Allo in Hindi

ಉಳಿದಂತೆ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಅಳವಡಿಕೆ ಯೋಜನೆ ಜಾರಿಯಲ್ಲಿದೆ. ಹೊಸದಾಗಿ ರಿಲೀಸ್ ಮಾಡಿರುವ 'Allo' ಶೀಘ್ರದಲ್ಲೇ ಹಿಂದಿಭಾಷೆಯಲ್ಲೂ ಲಭ್ಯವಾಗಲಿದೆ. ನಂತರ ಇತರೆ ಭಾರತೀಯ ಭಾಷೆಗಳಿಗೂ ವಿಸ್ತರಿಸಲಾಗುವುದು ಎಂದರು. 2020ರ ವೇಳೆಗೆ 650ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿ ಹೊಂದಿದೆ.

ಗೂಗಲ್ ಹುಟ್ಟುಹಬ್ಬದ ದಿನಾಂಕವೂ ಕುತೂಹಲಕಾರಿಯಾಗಿದೆ. 2005ರ ತನಕ ಸೆ.7ರಂದು ಗೂಗಲ್ ತನ್ನ ಹುಟ್ಟುಹಬ್ಬ ದಿನವನ್ನಾಗಿ ಆಚರಿಸುತ್ತಾ ಬಂದಿತ್ತು. ನಂತರ ಸೆ.27ಕ್ಕೆ ಇದು ಬದಲಾಯಿತು.

ಸೆ.4, 1998ರಲ್ಲಿ ಸ್ಟಾಡ್ ಫೋರ್ಡ್ ನ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಹಾಗೂ ಸರ್ಗೆಬ್ರಿನ್ ಅವರು ಇಂಟೆರ್ ನೆಟ್ ನಲ್ಲಿ ಹುಡುಕುವಿಕೆಯನ್ನು ಸುಧಾರಣೆಗೊಳಿಸಲು ಗೂಗಲ್ ಎಂಬ ಹೊಸ ಸಂಸ್ಥೆ ಹುಟ್ಟುಹಾಕಿದರು. ಹೊಸ ಡೂಡ್ಲ್ ಚಿತ್ರದೊಂದಿಗೆ ಸೆ.27 ರಂದು ತನ್ನ ವಾರ್ಷಿಕೋತ್ಸವ ಗೂಗಲ್ ಆಚರಿಸುತ್ತದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Google on Tuesday announced a bouquet of new products for the Indian market that are suited to work with low Internet speeds. These include a new Wi-Fi platform called Google Station, a video app called ‘YouTube Go’ and an offline feature for Chrome web browser and faster loading in Google Play on 2G network.
Please Wait while comments are loading...