ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ನಿಂದ ಪೇಮೆಂಟ್ ಆ್ಯಪ್ 'ಗೂಗಲ್ ತೇಜ್' ಬಿಡುಗಡೆ

ಗೂಗಲ್ ನಿಂದ ಡಿಜಿಟಲ್ ಪೇಮೆಂಟ್ ಆ್ಯಪ್ ಬಿಡುಗಡೆ. ಏಳು ಭಾರತೀಯ ಭಾಷೆಗಳಲ್ಲಿ ಆ್ಯಪ್ ಲಭ್ಯ.

|
Google Oneindia Kannada News

ನವದಹೆಲಿ, ಸೆಪ್ಟೆಂಬರ್ 18: ಅಂತರ್ಜಾಲ ಕ್ಷೇತ್ರದ ಖ್ಯಾತ ಸರ್ಚ್ ಇಂಜಿನ್ ಸಂಸ್ಥೆಯಾದ ಗೂಗಲ್, ಭಾರತದಲ್ಲಿ ತನ್ನದೇ ಆದ ಡಿಜಿಟಲ್ ಪೇಮೆಂಟ್ ನ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಯುಪಿಐ (ಯೂನಿಫೈಡ್ ಪೇಮೆಂಟ್ ಇಂಟರ್ ಫೇಸ್) ವ್ಯವಸ್ಥೆಯೊಂದಿಗೆ ಕೈ ಜೋಡಿಸಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ.

ಸಾಮಾನ್ಯವಾಗಿ ಇತರ ಪೇಮೆಂಟ್ ಬ್ಯಾಂಕ್ ಗಳಂತೆಯೇ, ಗೂಗಲ್ ತೇಜ್ ಮೂಲಕ ಗ್ರಾಹಕರು ಖರೀದಿ, ಸೇವಾ ಶುಲ್ಕ ಭರ್ತಿ, ಬಿಲ್ ಪಾವತಿ ಮುಂತಾದ ಚಟುವಟಿಕೆ ನಡೆಸಬಹುದು. ಅಲ್ಲದೆ, ವ್ಯಕ್ತಿಯಿಂದ ವ್ಯಕ್ತಿಗೆ ಹಣವನ್ನೂ ವರ್ಗಾಯಿಸಬಹುದು.

Google Tez wallet and payments app launched in India

ಇದರ ವಿಶೇಷತೆಯೆಂದರೆ, ಇದನ್ನು ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲೂ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಕೇಂದ್ರ ಸರ್ಕಾರದ ಭೀಮ್ ಗ್ರಾಹಕರೂ ಗೂಗಲ್ ತೇಜ್ ಮೂಲಕ ವ್ಯವಹಾರ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.

Google Tez wallet and payments app launched in India

ಕನ್ನಡದಲ್ಲೂ ಇದೆ ಈ ಆ್ಯಪ್: ಇಂಗ್ಲೀಷ್ ಸೇರಿದಂತೆ, ಏಳು ಭಾರತೀಯ ಭಾಷೆಗಳಲ್ಲಿ ಈ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಕನ್ನಡದಲ್ಲೂ ಇದರ ಆ್ಯಪ್ ಇರುವುದು ವಿಶೇಷ. ಇಂಗ್ಲೀಷ್, ಕನ್ನಡವಲ್ಲದೆ, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ, ತಮಿಳು ಹಾಗೂ ತೆಲುಗುಗಳಲ್ಲಿ ಈ ಆ್ಯಪ್ ಬಿಡುಗಡೆಗೊಳಿಸಲಾಗಿದೆ.

English summary
Google on Monday finally launched in India its UPI-backed payments application, Tez, which will allow you to securely pay for goods and services both online and offline and also make person-to-person transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X