• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿ 10 ಗ್ರಾಮ್ ಚಿನ್ನದ ಬೆಲೆ 350 ರುಪಾಯಿ ಏರಿಕೆ, ಬೆಳ್ಳಿಯೂ ಏರಿತು

|

ಮತ್ತೆ ಚಿನ್ನದ ಬೆಲೆ ಏರಿಕೆ ಕಂಡಿದೆ. ಚಿನಿವಾರ ಪೇಟೆಯಲ್ಲಿ 10 ಗ್ರಾಮ್ ನ ಚಿನ್ನದ ಬೆಲೆ 350 ರುಪಾಯಿ ಏರಿಕೆಯಾಗಿ, 32,250 ರುಪಾಯಿ ತಲುಪಿತು. ಸ್ಥಳೀಯ ಆಭರಣ ವರ್ತಕರಿಂದ ಹೆಚ್ಚಾದ ಬೇಡಿಕೆ ಹಾಗೂ ವಿದೇಶಗಳಲ್ಲಿ ಸ್ಥಿರವಾದ ಬೇಡಿಕೆ ಕಂಡುಬಂದ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಅದೇ ರೀತಿ ಬೆಳ್ಳಿ ಬೆಲೆಯಲ್ಲೂ ಏರಿಕೆ ಆಗಿದೆ. ಪ್ರತಿ ಕೇಜಿಗೆ 450 ರುಪಾಯಿ ಹೆಚ್ಚಳ ಕಂಡು, 37,900 ರುಪಾಯಿಯನ್ನು ತಲುಪಿದೆ. ಕೈಗಾರಿಕೆಗಳಿಂದ ಬೇಡಿಕೆ ಕಂಡುಬಂದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಹದಿನಾರು ತಿಂಗಳ ಎತ್ತರದಲ್ಲಿ ಇದ್ದ ಡಾಲರ್ ಮೌಲ್ಯದ ಕುಸಿತ ಹಾಗೂ ಬೆಲೆ ಬಾಳುವ ಲೋಹಕ್ಕೆ ಹೆಚ್ಚಿನ ಬೇಡಿಕೆ ಇತರ ಜಾಗತಿಕ ಕಾರಣಗಳಿಗೆ ಬೆಲೆ ಏರಿಕೆ ಆಗಿದೆ.

ದೀಪಾವಳಿ ನಂತರ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ

ಸ್ಥಳೀಯ ಆಭರಣ ವರ್ತಕರು ಹೊಸದಾಗಿ ಖರೀದಿ ಆರಂಭಿಸಿದ್ದಾರೆ. ಇದು ಕೂಡ ಚಿನ್ನವು ಏರು ಮುಖದಲ್ಲಿ ಸಾಗಲು ಕಾರಣ ಆಗಿದೆ. ನವದೆಹಲಿಯಲ್ಲಿ 99.9% ಹಾಗೂ 99.5% ಶುದ್ಧತೆ ಇರುವ ಚಿನ್ನದ ಬೆಲೆಯು ತಲಾ 350 ರುಪಾಯಿ ಏರಿಕೆ ಕಂಡು, ಕ್ರಮವಾಗಿ ಹತ್ತು ಗ್ರಾಮ್ ಬೆಲೆ 32250 ಹಾಗೂ 32100 ಆಗಿದೆ.

ಕಳೆದ ಎರಡು ಅವಧಿಯಲ್ಲಿ ಚಿನ್ನವು 250 ರುಪಾಯಿಗಳ ಇಳಿಕೆ ಕಂಡಿತ್ತು. ಇನ್ನ ಸವರನ್ ಚಿನ್ನಕ್ಕೆ, ಅಂದರೆ 8 ಗ್ರಾಮ್ ಚಿನ್ನದ ಬೆಲೆ 24800 ರುಪಾಯಿ ಇದೆ.

English summary
Gold regained its sheen with prices climbing by ₹350 to ₹32,250 per 10 gram at the bullion market on increased buying by local jewellers coupled with a firming trend overseas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X