ಮಂಗಳವಾರದಂದು ಚಿನ್ನದ ಬೆಲೆ ಸ್ಥಿರ, ಪೇಟೆ ಧಾರಣೆ ಎಷ್ಟಿದೆ?
ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಸತತವಾಗಿ ಮೂರು ದಿನಗಳಿಂದ ಕುಸಿತ ಕಂಡಿತ್ತು. ಆದರೆ, ಮಂಗಳವಾರ(ಏ.27)ದಂದು ಚಿನ್ನದ ಬೆಲೆ ಸ್ಥಿರವಾಗಿದೆ. ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಳಿತ ಕಂಡಿದೆ.
ಕಳೆದ ವಾರ ಪ್ರತಿ 100 ಗ್ರಾಂಗೆ 3,000 ರು ಕಳೆದುಕೊಂಡು ಖರೀದಿದಾರರಿಗೆ ಸಂತಸ ತಂದಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಶೇ ಪ್ರತಿ ಔನ್ಸ್‌ಗೆ 1,780.76 ಯುಎಸ್ ಡಾಲರ್‌ನಷ್ಟಿತ್ತು. ಬೆಳ್ಳಿ ಪ್ರತಿ ಔನ್ಸ್ ಬೆಲೆ 26.18 ಯುಎಸ್ ಡಾಲರ್ ಆಗಿದೆ.
ನಿಮ್ಮ ನಗರದಲ್ಲಿ ಚಿನ್ನ- ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ಇಲ್ಲಿ ಒಂದೇ ಕಡೆ ಸಿಗುತ್ತದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ, ಕಳೆದ 5 ದಿನಗಳಲ್ಲಿ ಏರಿಳಿತ ಕಂಡಿರುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 27: 44,450 (140 ರು ಇಳಿಕೆ) 48,650 (190 ರು ಇಳಿಕೆ)
ಏಪ್ರಿಲ್ 26: 44,590 (--) 48,650 (--)
ಏಪ್ರಿಲ್ 25: 44,590 (-10) 48,650 (-10)
ಏಪ್ರಿಲ್ 24: 44,600 (-200) 48,660 (-210)
ಏಪ್ರಿಲ್ 23: 44,800 (-300) 48,870 (-330)
ಬೆಳ್ಳಿ: 1 ಕೆ.ಜಿಗೆ 68,800ರುಪಾಯಿ

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 27: 46,200 (40 ರು ಇಳಿಕೆ) 50,420 (40 ರು ಇಳಿಕೆ)
ಏಪ್ರಿಲ್ 26: 46,200 (--) 50,420 (--)
ಏಪ್ರಿಲ್ 25: 46,200 (-10) 50,420 (-10)
ಏಪ್ರಿಲ್ 24: 46,250 (-110) 50,470 (-110)
ಏಪ್ರಿಲ್ 23: 46,360 (-290) 50,580 (-270)
ಬೆಳ್ಳಿ: 1 ಕೆ.ಜಿಗೆ 68,800ರುಪಾಯಿ

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 27: 44,630 (-70) 48,690 (-80)
ಏಪ್ರಿಲ್ 26: 46,700 (-60) 48,770 (-60)
ಏಪ್ರಿಲ್ 25: 44,760 (-60) 48,830 (-10)
ಏಪ್ರಿಲ್ 24: 44,770 (-180) 48,840 (-200)
ಏಪ್ರಿಲ್ 23: 44,950 (-420) 49,040 (-460)
ಬೆಳ್ಳಿ: 1 ಕೆ.ಜಿಗೆ 74,000 ರುಪಾಯಿ

ಮುಂಬೈ ಚಿನ್ನದ ಬೆಲೆ
22 ಕ್ಯಾರೆಟ್24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 27: 44,900 (-40) 45,900 (-40)
ಏಪ್ರಿಲ್ 26: 44,940 (--) 45,940 (--)
ಏಪ್ರಿಲ್ 25: 44,940 (-10) 45,940 (-10)
ಏಪ್ರಿಲ್ 24: 44,950 (-110) 45,950 (-110)
ಏಪ್ರಿಲ್ 23: 45,060 (-190) 46,060 (-190)
ಬೆಳ್ಳಿ: 1 ಕೆ.ಜಿಗೆ 68,600ರುಪಾಯಿ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರು ಗಳಲ್ಲಿ)
ಏಪ್ರಿಲ್ 27: 44,450 (-140) 48,460 (-190)
ಏಪ್ರಿಲ್ 26: 44,590 (--) 48,650 (--)
ಏಪ್ರಿಲ್ 25: 44,590 (-10) 48,650 (-10)
ಏಪ್ರಿಲ್ 24: 44,600 (-200) 48,660 (-210)
ಏಪ್ರಿಲ್ 23: 44,800 (-300) 48,870 (-330)
ಬೆಳ್ಳಿ: 1 ಕೆ.ಜಿಗೆ 74,000 ರುಪಾಯಿ











Click it and Unblock the Notifications