Gold Price Today: ಬಂಗಾರದ ಬೆಲೆ ನಿರಂತರ ಏರಿಕೆ, ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬಂಗಾರ ದಿನೇ ದಿನೇ ದುಬಾರಿಯಾಗುತ್ತಿದೆ. ಚಿನ್ನದ ದರಗಳು ಕಳೆದ ಎರಡು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ಬುಧವಾರದಂದು ಪ್ರತಿ ಗ್ರಾಂ ಚಿನ್ನದ ಮೇಲೆ 65 ರೂಪಾಯಿವರೆಗೆ ಏರಿಕೆ ಕಂಡಿತ್ತು. ಗುರುವಾರ ಕೂಡ ಗ್ರಾಂ ಮೇಲೆ 33 ರೂಪಾಯಿ ಏರಿಕೆ ಕಂಡಿತ್ತು. ಇಂದು ಶುಕ್ರವಾರ ಕೂಡ ದರಗಳು ಹೆಚ್ಚಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಈಗ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನದ ದರ ಹಾಗೂ ಬೆಳ್ಳಿಯ ದರಗಳ ಮಾಹಿತಿ ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಈಗ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,485, 22 ಕ್ಯಾರೆಟ್ ಚಿನ್ನಕ್ಕೆ ₹12,361 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹10,114 ಇದೆ. ಬೆಂಗಳೂರಿನಲ್ಲಿ ಪ್ರಸ್ತುತ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂ.ಗೆ ₹13,485, 8 ಗ್ರಾಂ.ಚಿನ್ನದ ದರ ₹1,07,880, 10 ಗ್ರಾಂ ಚಿನ್ನದ ದರ ₹1,34,850, 100 ಗ್ರಾಂ.ಚಿನ್ನದ ದರ ₹13,48,500 ಇದ್ದು, ಕಳೆದ ಎರಡು ದಿನಗಳಿಂದ ದರ ನಿರಂತರವಾಗಿ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,361, 8 ಗ್ರಾಂ.ಚಿನ್ನದ ದರ ₹98,888, 10 ಗ್ರಾಂ ಚಿನ್ನದ ದರ ₹1,23,610, 100 ಗ್ರಾಂ.ಚಿನ್ನದ ಬೆಲೆ ₹12,36,100 ಇದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹10,114, 8 ಗ್ರಾಂ.ಚಿನ್ನದ ದರ ₹80,912, 10 ಗ್ರಾಂ.ಚಿನ್ನದ ದರ ₹1,01,140, 100 ಗ್ರಾಂ ಚಿನ್ನದ ದರ ₹10,11,400.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ : 24 ಕ್ಯಾರೆಟ್ ಚಿನ್ನ ; 22 ಕ್ಯಾರೆಟ್ ಚಿನ್ನ (₹)
ಡಿಸೆಂಬರ್ 19: 13,485 ; 12,361
ಡಿಸೆಂಬರ್ 18: 13,484 ; 12,360
ಡಿಸೆಂಬರ್ 17: 13,386 ; 12,270
ಡಿಸೆಂಬರ್ 16: 13,539 ; 12,411
ಡಿಸೆಂಬರ್ 15: 13,538 ; 12,410
ಡಿಸೆಂಬರ್ 14: 13,391 ; 12,275
ಡಿಸೆಂಬರ್ 13: 13,391 ; 12,275
ಡಿಸೆಂಬರ್ 12: 13,418 ; 12,300
ಡಿಸೆಂಬರ್ 11: 13,075 ; 11,985
ಡಿಸೆಂಬರ್ 10: 13,031 ; 11,945
ಡಿಸೆಂಬರ್ 09: 12,944 ; 11,865
ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?
ಬೆಳ್ಳಿ ಹಾಗೂ ಪ್ಲಾಟಿನಂ ದರಗಳಲ್ಲಿ ಕೂಡ ನಿರಂತರ ಏರಿಕೆ ಕಾಣುತ್ತಿದೆ. ಗುರುವಾರದಂದು ಬೆಳ್ಳಿಯ ದರ ಕೂಡ ಹೆಚ್ಚಾಗಿತ್ತು. ಬೆಂಗಳೂರಿನಲ್ಲಿ ಈಗ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹211.10 ಮತ್ತು ಪ್ರತಿ ಕಿಲೋಗ್ರಾಂಗೆ ₹2,11,100 ಆಗಿದೆ. ಬೆಂಗಳೂರಿನಲ್ಲಿ ಈಗ ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹5,688 ಮತ್ತು 10 ಗ್ರಾಂ.ಗೆ ₹56,880 ಆಗಿದೆ.












Click it and Unblock the Notifications