ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿಗೂ ಮುನ್ನವೇ ಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ನವರಾತ್ರಿ ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ, ಬೆಳ್ಳಿಯ ಬೇಡಿಕೆ ತಗ್ಗಿದ್ದರಿಂದ ಚಿನ್ನ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿತ್ತು. ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹಾಗೂ ನಾಣ್ಯ ತಯಾರಿಕರಿಂದ ಬೇಡಿಕೆ ಹೆಚ್ಚಾದ ಕಾರಣ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳವಾಗಿದೆ.

Gold Rate Today: Gold, silver trade higher

ಚಿನಿವಾರಪೇಟೆಯಲ್ಲಿ ಬುಧವಾರದಂದು ಬಂಗಾರದ ಬೆಲೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳವಾಗಿದೆ. ಎಂಸಿಎಕ್ಸ್ ನಲ್ಲಿ ಬಂಗಾರದ ಬೆಲೆ 27 ರೂಪಾಯಿ ಹೆಚ್ಚಳವಾಗಿದೆ. ಶೇಕಡಾ 0.08 ರಷ್ಟು ಹೆಚ್ಚಳ ಕಂಡಿದ್ದು, ಚಿನ್ನದ ಬೆಲೆ 10 ಗ್ರಾಂಗೆ 31,884 ರೂಪಾಯಿಯಾಗಿದೆ.

ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ?ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ?

ಎಂಸಿಎಕ್ಸ್ ನಲ್ಲಿ ಬೆಳ್ಳಿ ಬೆಲೆ ಬುಧವಾರದಂದು 52 ರೂಪಾಯಿ ಹೆಚ್ಚಳ ಕಂಡಿದೆ. ಶೇಕಡಾ 0.14ರಷ್ಟು ಹೆಚ್ಚಾದ ಬೆಳ್ಳಿ ಕೆ.ಜಿ. ಗೆ 38,380 ರೂಪಾಯಿಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯದ ಚೇತರಿಕೆ ಕಂಡಿದೆ. ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬಂಗಾರದ ಬೆಲೆ 1,220 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಕೂಡ ಶೇಕಡಾ 0.5 ರಷ್ಟು ಇಳಿಕೆ ಕಂಡು 14.5 ಡಾಲರ್ ಪ್ರತಿ ಔನ್ಸ್ ಆಗಿದೆ.

ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ?ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ?

ಬೆಂಗಳೂರಿನಲ್ಲಿ ಅಕ್ಟೋಬರ್ 31ರಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 29,850ರು ನಷ್ಟಿದೆ(ನಿನ್ನೆ29,900 ರು), 24 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 31,650ರು(ನಿನ್ನೆ 31,700 ರು)

English summary
MCX Gold futures traded up by Rs 27 at Rs 31,864 per 10 gm around 11:45 am on Wednesday, while MCX Silver futures was at 38,372 per kilo, higher by Rs 44 at the same time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X