Gold Rate On Oct 1: ಚಿನ್ನ ಪ್ರಿಯರಿಗೆ ದಿಢೀರ್ ಶಾಕ್: ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?

Gold Rate On Oct 1: ಚಿನ್ನ ಪ್ರಿಯರಿಗೆ ಹಬ್ಬದ ದಿನವೂ ಶಾಕ್ ಎದುರಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದೀಗ ಬುಧವಾರ (ಅಕ್ಟೋಬರ್ 01)ರಂದು ಸಹ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಕಳೆದ ತಿಂಗಳು ಪೂರ್ತಿ ಚಿನ್ನದ ಬೆಲೆ ಏರಿಳಿತ ಕಂಡಿತ್ತು. ಇದೀಗ ಅಕ್ಟೋಬರ್ 1ರ ಮೊದಲ ದಿನವೇ ಚಿನ್ನ ಪ್ರಿಯರಿಗೆ ಭಾರೀ ಶಾಕ್ ಎದುರಾಗಿದೆ. ಹಬ್ಬದ ಸೀಸನ್ ಹಾಗೂ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿರುವುದು ಸಹ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಇದೀಗ ಔಷಧಿ ಸೇರಿದಂತೆ ಇಲ್ಲಿಯ ವರೆಗೆ ತೆರಿಗೆ ವಿನಾಯಿತಿ ನೀಡಿದ್ದ ಕೆಲವು ವಸ್ತುಗಳ ಮೇಲೆಯೂ ಸುಂಕ ತೆರಿಗೆ ವಿಧಿಸಲು ಪ್ರಾರಂಭಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರವು ಜಿಎಸ್‌ಟಿ Goods and Services Tax / ಸರಕು ಮತ್ತು ಸೇವಾ ತೆರಿಗೆಯ ಮೇಲೆ ವಿನಾಯಿತಿ ನೀಡಿದ್ದರೂ. ಅದು ಸಂಪೂರ್ಣವಾಗಿ ಲಾಭ ಸಿಗುವುದಕ್ಕೆ ಅಥವಾ ಇಲ್ಲಿಯ ವರೆಗೆ ಆಗಿದ್ದ ಹಣ ದುಬ್ಬರ ಇಳಿಕೆಯಾಗುವುದಕ್ಕೆ ಇನ್ನಷ್ಟು ಸಮಯ ಬೇಕಾಗುವ ಸಾಧ್ಯತೆ ಇದೆ. ಇದೀಗ ಚಿನ್ನದ ಬೆಲೆ ಭಾರೀ ಹೆಚ್ಚಳವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Gold Rate Shocker Record Highs on October 1 Price of Gold amp amp Silver Revealed

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 11,864 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,18,640 ರೂಪಾಯಿ ಆಗಿದೆ. ಮಂಗಳವಾರಕ್ಕೆ (ಸೆಪ್ಟೆಂಬರ್ 30) ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಒಂದು ಗ್ರಾಂ ಬೆಲೆಯು 120 ರೂಪಾಯಿ ಹಾಗೂ 10 ಗ್ರಾಂನ ಬೆಲೆಯು 1,200 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು ಒಂದು ಗ್ರಾಂಗೆ 10,875 ರೂಪಾಯಿ ಹಾಗೂ 10 ಗ್ರಾಂಗೆ 1,08,750 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ, 22 ಕ್ಯಾರೆಟ್‌ನ ಒಂದು ಗ್ರಾಂ ಬೆಲೆಯು 110 ರೂಪಾಯಿ ಹಾಗೂ 10 ಗ್ರಾಂನ ಬೆಲೆಯು 1,100 ರೂಪಾಯಿ ಆಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ: ಇನ್ನ 18 ಕ್ಯಾರೆಟ್‌ನ ಚಿನ್ನದ ಬೆಲೆ ಒಂದು ಗ್ರಾಂಗೆ 8,898 ರೂಪಾಯಿ ಹಾಗೂ 10 ಬಂಗಾರದ ಬೆಲೆಯು 88,980 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 90 ರೂಪಾಯಿ ಹಾಗೂ 10 ಗ್ರಾಂನ ಮೇಲೆ 900 ರೂಪಾಯಿ ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ: ಇನ್ನು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮಾತ್ರವಲ್ಲ ಬೆಳ್ಳಿ ಬೆಲೆಯಲ್ಲೂ ಹೆಚ್ಚಳವಾಗುತ್ತಿದೆ. ಸಾಮಾನ್ಯವಾಗಿ ಚಿನ್ನದ ಬೆಲೆ ಏರಿಕೆಯಾದಾಗ ಬೆಳ್ಳಿ ಬೆಲೆಯು ಸ್ಥಿರವಾಗಿ ಇರುತ್ತಿತ್ತು. ಆದರೆ ಕಳೆದ ಒಂದು ವಾರದಿಂದ ಬೆಳ್ಳಿ ಬೆಲೆಯೂ ಹೆಚ್ಚಳವಾಗುತ್ತಿದೆ. ಬೆಳ್ಳಿ ಬೆಲೆ ಒಂದು ಗ್ರಾಂಗೆ 151 ರೂಪಾಯಿ ಹಾಗೂ ಒಂದು ಕೆ.ಜಿಗೆ 1,51,000 ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+