Gold Rate Oct 24: ಬಂಗಾರ ಪ್ರಿಯರಿಗೆ ಮತ್ತೆ ಶಾಕ್ - ಚಿನ್ನದ ಬೆಲೆ ಹೊಸ ದಾಖಲೆ, ಬೆಳ್ಳಿ ಬೆಲೆ ಇಳಿಕೆ!
Gold Rate Oct 24: ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಳಿತ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯು ಇಳಿಕೆಯ ಹಾದಿಯಲ್ಲಿತ್ತು. ಆದರೆ ಇದೀಗ ಚಿನ್ನದ ಬೆಲೆಯು ಏಕಾಏಕಿ ಏರಿಕೆ ಕಂಡಿದ್ದು, ಚಿನ್ನ ಪ್ರಿಯರಿಗೆ ಮತ್ತೆ ನಿರಾಸೆ ಮೂಡಿದೆ. ಹೌದು ಅಕ್ಟೋಬರ್ 24ರ ಚಿನ್ನದ ಬೆಲೆಯು ಚಿನ್ನ ಪ್ರಿಯರಿಗೆ ಮತ್ತೆ ಶಾಕ್ ನೀಡಿದೆ. ಭಾರತ ಮತ್ತು ಅಮೇರಿಕಾದ ನಡುವೆ ಸಂಬಂಧ ಸುಧಾರಿಸುತ್ತಿರುವುದರಿಂದ ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಇದೀಗ ಚಿನ್ನದ ಬೆಲೆ ಎರಡು ದಿನಗಳ ನಂತರ ಏರಿಕೆಯಾಗಿರುವುದು ನಿರಾಸೆ ಮೂಡಿಸಿದೆ. ಅಕ್ಟೋಬರ್ 24ರ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಚಿನ್ನದ ಮೇಲೆ ಇತ್ತೀಚಿನ ದಿನಗಳಲ್ಲಿ ಜನ ಹೂಡಿಕೆ ಮಾಡುವುದು ಹೆಚ್ಚಾಗಿದೆ. ರಿಯಲ್ ಎಸ್ಟೇಟ್ ಪೈಪೋಟಿ ಹಾಗೂ ಷೇರುಮಾರುಕಟ್ಟೆ ತಲ್ಲಣಗಳ ನಡುವೆ ಚಿನ್ನದ ಮೇಲಿನ ಹೂಡಿಕೆಯು ಜನರಿಗೆ ಸುರಕ್ಷ ಹೂಡಿಕೆಯಾಗಿ ಕಾಣುತ್ತಿದೆ. ಅಲ್ಲದೇ ಡಾಲರ್ ಮುಂದೆ ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿರುವುದು ಹಾಗೂ ವ್ಯಾಪಾರ ನೀತಿಯಲ್ಲಿ ಒಮ್ಮತ ಮೂಡದೆ ಇರುವುದು ಸಹ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಬಂಗಾರದ ಬೆಲೆ ಯಾವ ರೀತಿ ಬದಲಾಗುತ್ತಿದೆ ಎನ್ನುವುದನ್ನು ಅಂದಾಜು ಮಾಡದಷ್ಟು ವ್ಯತ್ಯಾಸ ಆಗುತ್ತಿದೆ. ಕಳೆದ ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಚಿನ್ನದ ಬೆಲೆಯು ಏಕಾಏಕಿ ಶುಕ್ರವಾರ ಭಾರೀ ಹೆಚ್ಚಳವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 9,409 ರೂಪಾಯಿ ಆಗಿದೆ. ಇನ್ನು ಹತ್ತು ಗ್ರಾಂನ ಚಿನ್ನದ ಬೆಲೆಯು 94,090 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 28 ರೂಪಾಯಿ ಹಾಗೂ ಹತ್ತು ಗ್ರಾಂಗೆ 280 ರೂಪಾಯಿ ಹೆಚ್ಚಳ ಕಂಡಿದೆ.
22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯೂ ಸಹ ಭರ್ಜರಿ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 11,500 ರೂಪಾಯಿ ಹಾಗೂ ಹತ್ತು ಗ್ರಾಂಗೆ 1,15,000 ರೂಪಾಯಿ ಆಗಿದೆ. ಒಂದು ಗ್ರಾಂ ಚಿನ್ನದ ಬೆಲೆಯು ಗ್ರಾಂಗೆ 35 ರೂಪಾಯಿ ಹಾಗೂ ಹತ್ತು ಗ್ರಾಂಗೆ 350 ರೂಪಾಯಿ ಹೆಚ್ಚಳವಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 12,546 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆಯು 1,25,460 ರೂಪಾಯಿ ಆಗಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 38 ರೂಪಾಯಿ ಹಾಗೂ ಹತ್ತು ಗ್ರಾಂಗೆ 380 ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿ ಬೆಲೆ: ಚಿನ್ನದ ಬೆಲೆ ಏರಿಕೆಯ ನಡುವೆ ಬೆಳ್ಳಿ ಬೆಲೆಯು ಭರ್ಜರಿ ಇಳಿಕೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ಬೆಲೆಯೂ ಹೆಚ್ಚಳವಾಗುತ್ತಿತ್ತು. ಇದೀಗ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ. ಒಂದು ಗ್ರಾಂನ ಬೆಳ್ಳಿ ಬೆಲೆಯು 158 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ ಬೆಲೆಯು 1,58,000 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಬೆಳ್ಳಿ ಬೆಲೆಯು 1 ರೂಪಾಯಿ ಹಾಗೂ ಒಂದು ಕೆ.ಜಿಗೆ 1,000 ಸಾವಿರ ರೂಪಾಯಿ ಇಳಿಕೆ ಆಗಿದೆ.












Click it and Unblock the Notifications