Gold Rate July 08: ಚಿನ್ನದ ಬೆಲೆಯಲ್ಲಿ ಮಹತ್ವದ ಬದಲಾವಣೆ: ಇಂದಿನ ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ ?

Gold Rate July 08: ಚಿನ್ನ ಪ್ರಿಯರಿಗೆ ಜುಲೈ ಮೊದಲ ವಾರದಲ್ಲೇ ಶಾಕ್ ಎದುರಾಗಿದೆ. ಚಿನ್ನದ ಬೆಲೆ ಕಳೆದ ಮೂರು ದಿನಗಳಿಂದಲೂ ಇಳಿಕೆ ಹಾದಿಯಲ್ಲಿತ್ತು. ಚಿನ್ನದ ಬೆಲೆ ಇಳಿಕೆ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅಲ್ಪಕಾಲಾವಧಿಯಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಜಾಸ್ತಿಯಾಗಿದೆ. ಆರ್‌ಬಿಐನ ನೂತನ ಕ್ರಮದಿಂದ ಚಿನ್ನದ ಬೆಲೆ ಇಳಿಕೆ ಆಗಲಿದೆ ಎಂದೇ ಹೇಳಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆ ಆಗಬಹುದು ಎನ್ನುವ ನಿರೀಕ್ಷೆಯೂ ಇದೆ. ಜುಲೈ 8ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಚಿನ್ನಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಬೇರೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಹಾಗೂ ಇಳಿಕೆಯಾದರೂ ಚಿನ್ನಕ್ಕೆ ಡಿಮ್ಯಾಂಡ್ ಕಡಿಮೆ ಆಗಿರುವ ಉದಾಹರಣೆಗಳು ಕಡಿಮೆ. ಇದೇ ಕಾರಣಕ್ಕೆ ಜನ ಚಿನ್ನ ಖರೀದಿ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಷೇರುಮಾರುಕಟ್ಟೆಯಲ್ಲಿ ಏರಿಳಿತ ಹಾಗೂ ವಿವಿಧ ದೇಶಗಳ ನಡುವೆ ಯುದ್ಧ ಅಥವಾ ಅನಿರೀಕ್ಷಿತ ಆರ್ಥಿಕ ಸಂಕಷ್ಟ ಎದುರಾದ ಸಂದರ್ಭದಲ್ಲಿ ಚಿನ್ನ ಸಂಕಷ್ಟದಿಂದ ತಪ್ಪಿಸುತ್ತದೆ. ಅದೇ ರೀತಿ ಜನರು ಅವರ ಜೀವನದಲ್ಲಿ ಏನಾದರೂ ಬದಲಾವಣೆಯಾದರೆ ಅಥವಾ ಆರ್ಥಿಕ ಸಂಕಷ್ಟ ಎದುರಾದರೆ, ಯಾರ ಬಳಿಯೂ ಕೈಚಾಚ ಬಾರದು. ಆ ಸಂದರ್ಭದಲ್ಲಿ ಚಿನ್ನವನ್ನು ಅಡಮಾನ ಇರಿಸಿ ದುಡ್ಡು ತೆಗೆದುಕೊಳ್ಳಬಹುದು ಎನ್ನುವ ಉದ್ದೇಶದಿಂದ ಚಿನ್ನ ಖರೀದಿ ಮಾಡುತ್ತಾರೆ.

Gold Rate July 08 Significant change in gold price What is price of gold and silver today

ಇನ್ನು ಸಾಂಪ್ರದಾಯಿಕವಾಗಿಯೂ ಚಿನ್ನಕ್ಕೆ ತನ್ನದೇ ಆದ ಮಹತ್ವವಿದೆ. ಶುಭ ಸಮಾರಂಭಗಳಲ್ಲಿ ಹಾಗೂ ವಿಶೇಷ ದಿನಗಳಲ್ಲಿ ಇಂದಿಗೂ ಭಾರತದಲ್ಲಿ ಚಿನ್ನ ಖರೀದಿ ಮಾಡುವ ರೂಢಿಯನ್ನು ಜನ ಬೆಳೆಸಿಕೊಂಡಿದ್ದಾರೆ. ಆದರೆ ಚಿನ್ನದ ಬೆಲೆ ಇತ್ತೀಚಿನ ವರ್ಷಗಳಲ್ಲಿ ಏರಿಕೆ ಆಗುತ್ತಿರುವುದು ಜನರಲ್ಲಿ ತುಸು ಆತಂಕವನ್ನು ಮೂಡಿಸಿದೆ. ಇದೀಗ ಚಿನ್ನದ ಬೆಲೆಯು ಮಂಗಳವಾರ ಜುಲೈ 8ರಂದು ಮತ್ತೆ ಏರಿಕೆ ಆಗಿದೆ.

ಇಂದಿನ 18, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಇಂದು ಸ್ವಲ್ಪ ಜಾಸ್ತಿ ಆಗಿದೆ. ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆಯು 7,413 ರೂಪಾಯಿ ಇದೆ. 10 ಗ್ರಾಂಗೆ 74,130 ರೂಪಾಯಿ ಇದೆ. ನೆನ್ನೆಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂಗೆ 41 ರೂಪಾಯಿ ಹಾಗೂ 10 ಗ್ರಾಂಗೆ 410 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ 9,060 ರೂಪಾಯಿ ಆಗಿದೆ. 10 ಗ್ರಾಂಗೆ 90,600 ರೂಪಾಯಿ ಆಗಿದೆ. ಒಂದು ಗ್ರಾಂಗೆ 50 ರೂಪಾಯಿ ಹಾಗೂ 10 ಗ್ರಾಂಗೆ 500 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಜುಲೈ 08ರಂದು 24 ಕ್ಯಾರೆಟ್ ಚಿನ್ನದ ಬೆಲೆ ಸಹ ಏರಿಕೆ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು 9,884 ರೂಪಾಯಿ ಹಾಗೂ 10 ಗ್ರಾಂಗೆ 98,840 ರೂಪಾಯಿ ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ 1 ಗ್ರಾಂಗೆ 55 ರೂಪಾಯಿ ಹಾಗೂ 10 ಗ್ರಾಂಗೆ 550 ರೂಪಾಯಿ ಹೆಚ್ಚಳವಾಗಿದೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿದೆ.

ಬೆಳ್ಳಿ ಬೆಲೆ: ಇನ್ನು ಬೆಳ್ಳಿ ಬೆಲೆಯಲ್ಲಿ ಯಾವುದೇ ಮಹತ್ವದ ಬದಲಾವಣೆ ಆಗಿಲ್ಲ. ಬೆಳ್ಳಿ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 110 ರೂಪಾಯಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+