Get Updates
Get notified of breaking news, exclusive insights, and must-see stories!

Gold Rate Jna 4: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬದಲಾವಣೆ

ವಿಶ್ವದ ದೊಡ್ಡಣ್ಣ ಅಮೆರಿಕಾ, ವೆನೆಜುವೆಲಾ ಮಾಡಿರುವ ದಾಳಿಯು ವಿಶ್ವದಾದ್ಯಂತ ಆರ್ಥಿಕ ಲೆಕ್ಕಾಚಾರಗಳು ತಲೆಕೆಳಗಾಗುವಂತೆ ಮಾಡಿದೆ. ವಿಶ್ವದಲ್ಲಿ ಜಾಗತಿಕ ಬಿಕ್ಕಟ್ಟು ಹಾಗೂ ಯುದ್ಧ ಸೇರಿದಂತೆ ಭೌಗೋಳಿಕ ಸಮಸ್ಯೆಗಳು ಎದುರಾದಗೆಲ್ಲವೂ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಕೆಲವೊಂದು ವಸ್ತುಗಳ ಬೆಲೆ ಭಾರೀ ಹೆಚ್ಚಳವಾಗುವುದು ಇದೆ. ಇದೀಗ ಅಮೆರಿಕಾದ ಸರ್ವಾಧಿಕಾರಿ ನೀತಿಯು ಮತ್ತೊಂದು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಭೀತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಹೆಚ್ಚಳವಾಗಲಿದೆಯೇ. ಜನವರಿ 4ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ವಿಶ್ವದ ಮೂರನೇ ಪ್ರಮುಖ ಹಾಗೂ ಅತಿ ಹೆಚ್ಚು ಕಚ್ಚಾ ತೈಲ ಹೊಂದಿರುವ ದೇಶವಾಗಿರುವ ವೆನೆಜುವೆಲಾದ ಮೇಲೆ ಅಮೆರಿಕಾ ದಾಳಿ ನಡೆಸಿದ್ದು, ಇದರು ಷೇರುಮಾರುಕಟ್ಟೆ ಹಾಗೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುವ ಆತಂಕ ಶುರುವಾಗಿದೆ.

Gold Rate Jan 4 Surprising Move in Gold and Silver Prices Amid US Venezuela Tensions

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ $4,370 ಮಟ್ಟದಲ್ಲಿ ವಹಿವಾಟು ನಡೆಯುತ್ತಿದ್ದು, ಶೇ. 1% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಹೆಚ್ಚಳವು 1979ರ ನಂತರದ ಅತ್ಯುತ್ತಮ ವಾರ್ಷಿಕ ಪ್ರದರ್ಶನಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಭಾರತದ ಷೇರುಮಾರುಕಟ್ಟೆಯ ಮೇಲೆ ಹಾಗೂ ಚಿನ್ನದ ಬೆಲೆಯ ಮೇಲೆ ಅಮೆರಿಕಾ ಮತ್ತು ವೆನೆಜುವೆಲಾ ಸಂಘರ್ಷ ಹೇಗೆ ಪ್ರಭಾವ ಬೀರಲಿದೆ ಎನ್ನುವುದು ಸೋಮವಾರ ಖಚಿತವಾಗಿ ತಿಳಿಯುವ ಸಾಧ್ಯತೆ ಇದೆ.

ವಾರಾಂತ್ಯದಲ್ಲಿ ಚಿನ್ನದ ಬೆಲೆ ಎಷ್ಟಿದೆ ?

ಇನ್ನು ಜನವರಿ ಮೊದಲ ವಾರಾಂತ್ಯದಲ್ಲಿ ವಿವಿಧ ಕ್ಯಾರೆಟ್‌ನ ಚಿನ್ನದ ಬೆಲೆಯು ಕುಸಿತ ಕಂಡಿದೆ. ಯುಎಸ್ ಮತ್ತು ವೆನೆಜುವೆಲಾದ ಸಂಘರ್ಷದ ನಡುವೆಯೂ ಶನಿವಾರದ ಬೆಲೆಯೇ ಭಾನುವಾರವೂ ಮುಂದುವರಿದಿದೆ. ವಾರಾಂತ್ಯಗಳಲ್ಲಿ ಚಿನ್ನದ ಬೆಲೆಯು ಸಾಮಾನ್ಯವಾಗಿ ಶನಿವಾರದ ಬೆಲೆಯೇ ಮುಂದುವರಿಯುತ್ತದೆ. ಅತಿ ವಿರಳ ಸಂದರ್ಭಗಳಲ್ಲಿ ಚಿನ್ನದ ಬೆಲೆ ಬದಲಾಗುವುದು ಇದೆ.

24 ಕ್ಯಾರೆಟ್ ಚಿನ್ನದ ಬೆಲೆ: ಭಾನುವಾರ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 13,582 ರೂಪಾಯಿ ಆಗಿದ್ದು, 10 ಗ್ರಾಂಗೆ 1,35,820 ರೂಪಾಯಿ ಆಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬಂದಿಲ್ಲ.

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 12,450 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ 22 ಕ್ಯಾರೆಟ್ ಚಿನ್ನದ ಬೆಲೆಯು 1,24,500 ರೂಪಾಯಿ ಆಗಿದೆ. 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಯಥಾಸ್ಥಿತಿ ಮುಂದುವರಿದಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 10,187 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,01,870 ರೂಪಾಯಿ ಆಗಿದೆ.

ಬೆಳ್ಳಿ ಬೆಲೆ ಎಷ್ಟಿದೆ ?

ಇನ್ನು ವಾರಾಂತ್ಯದಲ್ಲಿ ಬೆಳ್ಳಿ ಬೆಲೆಯು ಸಹ ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 241 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ ಬೆಲೆಯು 2,41,000 ರೂಪಾಯಿ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+