Gold Rate Jan 28: ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ: ಜ.28ರ ಚಿನ್ನದ ಬೆಲೆ ಸರ್ವಕಾಲಿಕ ದಾಖಲೆ, 2 ಲಕ್ಷ ಸಮೀಪ
Gold Rate Jan 28: 2026ನೇ ಸಾಲಿನಲ್ಲಿ ಚಿನ್ನದ ಬೆಲೆಯು ನಿರೀಕ್ಷೆಗೂ ಮೀರಿ ಹೆಚ್ಚಳವಾಗುತ್ತಿದೆ. ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ತಲುಪಿದಾಗಲೇ ಬಂಗಾರ ಪ್ರಿಯರು ಆತಂಕಕ್ಕೆ ಒಳಗಾಗಿದ್ದರು. ಆದರೆ ಈಗ 1.50 ಲಕ್ಷ ರೂಪಾಯಿಯನ್ನೂ ದಾಟಿ 2 ಲಕ್ಷ ರೂಪಾಯಿಯ ಸಮೀಪಕ್ಕೆ ಬಂದು ನಿಂತಿದೆ. ಇನ್ನು ಬಂಗಾರದ ಬೆಲೆಯು 2 ಲಕ್ಷ ರೂಪಾಯಿಗೆ ಕೆಲವೇ ಸಾವಿರ ರೂಪಾಯಿ ಬಾಕಿ ಉಳಿದಿದೆ. ಹಾಗಾದರೆ ಜನವರಿ 28ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ, ಚಿನ್ನದ ಬೆಲೆ 2 ಲಕ್ಷ ರೂಪಾಯಿ ಆಗುವುದಕ್ಕೆ ಇನ್ನಷ್ಟು ಬಾಕಿ ಉಳಿದಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಮೊದಲಿಗೆ ಇಂದಿನ ಚಿನ್ನದ ಬೆಲೆ ವಿವರ ನೋಡೋಣ.
ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಚಿನ್ನದ ಬೆಲೆಯು ಬುಧವಾರ ಮಧ್ಯಾಹ್ನದ ಮೇಲೆ ಏಕಾಏಕಿ ಹೆಚ್ಚಳವಾಗಿದೆ. ಭಾರತ ಹಾಗೂ ಐರೋಪ ಒಕ್ಕೂಟದ ನಡುವೆ ಒಪ್ಪಂದ ಆಗಿರುವ ಹಿನ್ನೆಲೆಯಲ್ಲಿ ಚಿನ್ನ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರಗಳು ಸಹ ಇದೀಗ ತಲೆಕೆಳಗಾಗಿವೆ.

ಜನವರಿ 28 ರಂದು ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಪ್ರತಿ ಔನ್ಸ್‌ಗೆ 5,205 ಡಾಲರ್ ತುಲುಪಿದೆ. ಇದು ಹಿಂದಿನ ಮುಕ್ತಾಯಕ್ಕಿಂತ 2.37% ಹೆಚ್ಚಾಗಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ದರ ಕಡಿತ ಸಾಧ್ಯತೆ ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆ ಏಕಾಏಕಿ ಹೆಚ್ಚಳ ಕಂಡಿದೆ. ಬುಧವಾರದ ಮಧ್ಯಾಹ್ನದ ವೇಳೆಗೆ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು 10 ಗ್ರಾಂಗೆ ದಾಖಲೆಯ 1,72,430 ರೂಪಾಯಿ ತಲುಪಿದೆ. ಇದು ಹಿಂದಿನ ಮುಕ್ತಾಯದ 1,67,921 ರೂಪಾಯಿಗೆ ಹೋಲಿಸಿದರೆ ಬರೋಬ್ಬರಿ 2.55 ರಷ್ಟು ಏರಿಕೆಯಾದಂತೆ ಆಗಿದೆ.
ಗ್ರೀನ್ಲ್ಯಾಂಡ್ ವಿಚಾರವಾಗಿ ಅಮೆರಿಕ ಮತ್ತು ನ್ಯಾಟೋ ನಡುವಿನ ಹೊಸ ಉದ್ವಿಗ್ನತೆಯ ನಡುವೆ ಚಿನ್ನದ ಬೆಲೆ ಏರಿಕೆಯಾಗಿದೆ. ಉಕ್ರೇನ್ ಮತ್ತು ಗಾಜಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಮತ್ತು ವೆನೆಜುವೆಲಾದ ಅಧ್ಯಕ್ಷರನ್ನು ಅಮೆರಿಕ ವಶಪಡಿಸಿಕೊಂಡಿರುವುದು ಕೂಡ ಚಿನ್ನದ ಬೆಲೆ ಭಾರೀ ಹೆಚ್ಚಳಕ್ಕೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ ದೇಶವು ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡರೆ ಅದರ ಮೇಲೆ 100 ಪ್ರತಿಶತ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ದಕ್ಷಿಣ ಕೊರಿಯಾದ ಮೇಲೆ 25 ಪ್ರತಿಶತ ಸುಂಕ ವಿಧಿಸುವ ಅಮೆರಿಕದ ಕ್ರಮವು ಜಾಗತಿಕ ಮಟ್ಟದಲ್ಲಿ ಭಾರೀ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿದೆ.
ಚಿನ್ನದ ಬೆಲೆ ಬುಧವಾರ ಮಧ್ಯಾಹ್ನದ ವರೆಗೆ
24 ಕ್ಯಾರೆಟ್ ಚಿನ್ನದ ಬೆಲೆ: ಜನವರಿ 28ರಂದು ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 16,517 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,65,170 ರೂಪಾಯಿ ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 322 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 3,220 ರೂಪಾಯಿ ಹೆಚ್ಚಳವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನ ಚಿನ್ನದ ಬೆಲೆಯೂ ಸಹ ಜನವರಿ 28ರಂದು ಹೆಚ್ಚಳವಾಗಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 15,140 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,51,400 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 295 ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂನ ಚಿನ್ನದ ಬೆಲೆಯು 2,950 ರೂಪಾಯಿ ಹೆಚ್ಚಳವಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯೊಂದಿಗೆ 18 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 12,388 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,23,880 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 1 ಗ್ರಾಂ ಚಿನ್ನದ ಬೆಲೆಯ ಮೇಲೆ 242 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 2,420 ರೂಪಾಯಿ ಹೆಚ್ಚಳವಾಗಿದೆ.












Click it and Unblock the Notifications