Gold Price Today: ಚಿನ್ನದ ಬೆಲೆ ಮತ್ತೆ ಭಾರೀ ಏರಿಕೆ, ಎಷ್ಟಿದೆ ಇಂದಿನ ದರ?
ದಸರಾ ಸಮೀಪಿಸುತ್ತಿರುವ ಹಿನ್ನೆಲೆ ಚಿನ್ನದ ಬೆಲೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಈ ವಾರದ ಆರಂಭದಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಇಳಿಕೆ ಕಂಡಿದ್ದವು. ಕಳೆದ ಎರಡು ದಿನಗಳಿಂದ ಚಿನ್ನದ ದರ ಏರುಗತಿಯಲ್ಲಿ ಸಾಗುತ್ತಿದೆ. ನಿನ್ನೆಗಿಂತ ಇಂದು ದರ ಭಾರೀ ಏರಿಕೆ ಕಂಡಿದೆ. ಮುಂದಿನ ವಾರದ ವೇಳೆಗೆ ದರ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದ್ದು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಹಾಗೂ ಬೆಳ್ಳಿಯ ದರಗಳು ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿದೆ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹11,215, 22 ಕ್ಯಾರೆಟ್ ಚಿನ್ನಕ್ಕೆ ₹10,280 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹8,411 ಆಗಿದೆ. ನಿನ್ನೆಗಿಂತ ಗ್ರಾಂ.ಮೇಲೆ 82 ರೂಪಾಯಿವರೆಗೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,215, 8 ಗ್ರಾಂ. ಚಿನ್ನದ ದರ ₹89,720, 10 ಗ್ರಾಂ. ಚಿನ್ನದ ದರ ₹1,12,150, 100 ಗ್ರಾಂ. ಚಿನ್ನದ ದರ ₹11,21,500 ಆಗಿದ್ದು, ಬರೋಬ್ಬರಿ ₹8,200 ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,280, 8 ಗ್ರಾಂ. ಚಿನ್ನದ ದರ ₹82,240, 10 ಗ್ರಾಂ. ಚಿನ್ನದ ದರ ₹1,02,800, 100 ಗ್ರಾಂ. ಚಿನ್ನದ ದರ ₹10,28,000 ಆಗಿದೆ. ನಿನ್ನೆಗೆ ಹೋಲಿಸಿದರೆ ಈ ದರ ₹7,500ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹8,411, 8 ಗ್ರಾಂ. ಚಿನ್ನದ ದರ ₹67,288, 10 ಗ್ರಾಂ. ಚಿನ್ನದ ದರ ₹84,110, 100 ಗ್ರಾಂ. ಚಿನ್ನದ ದರ ₹8,41,100 ಆಗಿದ್ದು, ಬರೋಬ್ಬರಿ ₹6,100 ಹೆಚ್ಚಳ ಕಂಡಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಸೆಪ್ಟೆಂಬರ್ 20, ₹11,215 ; ₹10,280
ಸೆಪ್ಟೆಂಬರ್ 19, ₹11,133 ; ₹10,205
ಸೆಪ್ಟೆಂಬರ್ 18, ₹11,117 ; ₹10,190
ಸೆಪ್ಟೆಂಬರ್ 17, ₹11,171 ; ₹10,240
ಸೆಪ್ಟೆಂಬರ್ 16, ₹11,193 ; ₹10,260
ಸೆಪ್ಟೆಂಬರ್ 15, ₹11,106 ; ₹10,180
ಸೆಪ್ಟೆಂಬರ್ 14, ₹11,117 ; ₹11,117
ಸೆಪ್ಟೆಂಬರ್ 13, ₹11,117 ; ₹10,190
ಸೆಪ್ಟೆಂಬರ್ 12, ₹11,128 ; ₹10,200
ಸೆಪ್ಟೆಂಬರ್ 11, ₹11,051 ; ₹10,130
ಸೆಪ್ಟೆಂಬರ್ 10, ₹11,051 ; ₹10,130
ಬೆಳ್ಳಿ-ಪ್ಲಾಟಿನಂ ದರ ಎಷ್ಟಾಗಿದೆ?
ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಇಳಿಕೆ ಕಂಡಿದ್ದು, ಪ್ರತಿ ಗ್ರಾಂಗೆ ₹133.60 ಮತ್ತು ಪ್ರತಿ ಕಿಲೋ.ಗ್ರಾಂಗೆ ₹1,33,600 ಆಗಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 3,976 ಮತ್ತು 10 ಗ್ರಾಂಗೆ ₹39,760 ಆಗಿದೆ. ಚಿನ್ನದ ದರವು ನಿಂತರವಾಗಿ ಏರಿಕೆ ಕಾಣುತ್ತಿದ್ದು, ಪಿತೃಪಕ್ಷ ಕೂಡ ಮುಗಿಯುತ್ತಿರುವುದರಿಂದ ದರಗಳು ಮತ್ತಷ್ಟು ಏರುವ ನಿರೀಕ್ಷೆ ಇದೆ. ಈ ದುಬಾರಿ ಬೆಲೆಗಳಿಂದ ಜನ ಚಿನ್ನ ಖರೀದಿದಾರರು ಕಂಗಾಲಾಗಿದ್ದಾರೆ.












Click it and Unblock the Notifications