55,000 ರೂಪಾಯಿ ಗಡಿ ಸಮೀಪಿಸಿದ ಚಿನ್ನದ ಬೆಲೆ: 70,000 ರೂಪಾಯಿ ಗಡಿ ತಲುಪಲಿದೆ ಬೆಳ್ಳಿ..!

ನವದೆಹಲಿ, ಆಗಸ್ಟ್‌ 04: ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಬುಧವಾರ ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆ ಮತ್ತಷ್ಟು ಹೆಚ್ಚಾಗಿದೆ.

ಎಂಸಿಎಕ್ಸ್‌ನಲ್ಲಿ, ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇ. 0.45ರಷ್ಟು ಏರಿಕೆಯಾದ ನಂತರ ಹೊಸ ಗರಿಷ್ಠ 54,797 ರೂಪಾಯಿ ಅನ್ನು ಮುಟ್ಟಿತು.

ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇ. 0.09ರಷ್ಟು ಹೆಚ್ಚಾಗಿದ್ದು, ಕೆಜಿಗೆ 69,861 ರೂಪಾಯಿಗೆ ತಲುಪಿದೆ. ಹಿಂದಿನ ಅಧಿವೇಶನದಲ್ಲಿ, ಎಂಸಿಎಕ್ಸ್‌ನಲ್ಲಿನ ಚಿನ್ನದ ಭವಿಷ್ಯವು ಸುಮಾರು 900 ರೂ. ಅಥವಾ ಶೇ.1.7 ರಷ್ಟಿತ್ತು, ಇನ್ನು ಹಿಂದಿನ ಅಧಿವೇಶನದಲ್ಲಿ ಬೆಳ್ಳಿ 4200 ರೂ. ಅಥವಾ ಶೇ. 6.4ರಷ್ಟುಏರಿಕೆಯಾಗಿದೆ.

Gold Prices Up Closer To Rs 55,000, Silver Price Hit New High

ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನದ ಬೆಲೆಗಳು 2,000 ಡಾಲರ್‌ ಗಡಿಗಿಂತ ಹೆಚ್ಚಾಗುವ ಮೂಲಕ ಹೊಸ ಗರಿಷ್ಠ ಮಟ್ಟವನ್ನು ಮುಟ್ಟಿದವು. ದುರ್ಬಲ ಡಾಲರ್, ಹೆಚ್ಚು ಪ್ರಚೋದನೆಯ ನಿರೀಕ್ಷೆಗಳು ಮತ್ತು ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು ಚಿನ್ನದ ಸುರಕ್ಷಿತ ಸ್ವರ್ಗದ ಬೇಡಿಕೆಯನ್ನು ಹೆಚ್ಚಿಸಿವೆ.

ಆರಂಭಿಕ ಅಧಿವೇಶನದಲ್ಲಿ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ. 0.2ರಷ್ಟು ಏರಿಕೆಯಾಗಿ 2,022.42 ಡಾಲರ್‌ಗೆ ತಲುಪಿದೆ. ಅಮೆರಿಕಾ ಚಿನ್ನದ ಭವಿಷ್ಯವು ಶೇ. 0.9ರಷ್ಟು ಏರಿಕೆಯಾಗಿ 2,039 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇ. 0.5ರಷ್ಟು ಕುಸಿದು 24.88 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇ. 0.9ರಷ್ಟು ಇಳಿದು 928.95 ಡಾಲರ್ ದಾಖಲಾಗಿದೆ.

ಈ ವರ್ಷ, ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಶೇ. 33ರಷ್ಟು ಏರಿಕೆಯಾಗಿದ್ದು, ಚಿನ್ನದ ಬೆಂಬಲಿತ ವಿನಿಮಯ ವಹಿವಾಟು ನಿಧಿ ಅಥವಾ ಚಿನ್ನದ ಇಟಿಎಫ್‌ಗಳಿಗೆ ದಾಖಲೆಯ ಒಳಹರಿವಿನಿಂದ ಲಾಭವಾಗಿದೆ. ಕೇಂದ್ರ ಬ್ಯಾಂಕುಗಳಿಂದ ಅಭೂತಪೂರ್ವ ಪ್ರಚೋದನೆಯು ಬಡ್ಡಿದರಗಳನ್ನು ತಗ್ಗಿಸಿದೆ, ಇದು ಇಳುವರಿ ನೀಡದ ಚಿನ್ನಕ್ಕೆ ಪ್ರಯೋಜನವನ್ನು ನೀಡಿದೆ.

ಚಿನ್ನವನ್ನು ಮತ್ತಷ್ಟು ಬೆಂಬಲಿಸುವ ಮೂಲಕ, ಐದು ವರ್ಷಗಳ ಯು.ಎಸ್. ಖಜಾನೆ ಇಳುವರಿ ಮಂಗಳವಾರ ದಾಖಲೆಯ ಕನಿಷ್ಠ ಮಟ್ಟವನ್ನು ಮುಟ್ಟಿದರೆ, 10 ವರ್ಷಗಳ ಖಜಾನೆ ಇಳುವರಿ ಐದು ತಿಂಗಳ ಕನಿಷ್ಠಕ್ಕೆ ಇಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+