• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಇಳಿಮುಖ!

|

ನವದೆಹಲಿ, ಜೂನ್ 23: ಕೊರೊನಾವೈರಸ್ ಭೀತಿ ನಡುವೆ ಸತತ ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಇಂದು ದಿಢೀರ್ ಕುಸಿತ ಕಂಡಿದೆ. ಆಭರಣ ಪ್ರಿಯರಿಗೆ ಆಘಾತ ನೀಡಿದ್ದ ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದೆ.

ಇತ್ತೀಚೆಗೆ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 881 ರೂ. ಏರಿಕೆ ಕಂಡಿದ್ದು, ಫ್ಯೂಚರ್ ಚಿನ್ನದ ಬೆಲೆ 10 ಗ್ರಾಂ 50 ಸಾವಿರ ರೂಗೇರುವ ಸೂಚನೆ ಸಿಕ್ಕಿತ್ತು.

ಆದರೆ, ಜೂನ್ 23ರಂದು ಆರಂಭಿಕ ವಹಿವಾಟಿನಲ್ಲಿ ಚಿನ್ನದ ಬೆಲೆ ದೆಹಲಿಯಲ್ಲಿ 85 ರು ಕಳೆದುಕೊಂಡು ಪ್ರತಿ 10 ಗ್ರಾಂಗೆ 48, 811ರು ನಂತೆ ವಹಿವಾಟು ನಡೆಸಿದೆ. ಬೆಳ್ಳಿ ಬೆಲೆ 144 ರು ಏರಿಕೆ ಕಂಡು ಪ್ರತಿ 1 ಕೆ.ಜಿಗೆ 49, 880 ರು ನಷ್ಟಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ, ಡಾಲರ್ ಎದುರು ರುಪಾಯಿ ವಿನಿಮಯ ದರ, ರಾಜಕೀಯ ಸ್ಥಿತಿಗತಿ, ಕೊವಿಡ್ 19 ನಿಂದ ಉಂಟಾಗಿರುವ ಆರ್ಥಿಕ ಹೊಡೆತ ಎಲ್ಲವೂ ಚಿನ್ನದ ಬೆಲೆ ನಿರ್ಧಾರಕ್ಕೆ ಪೂರಕ ಅಂಶಗಳಾಗುತ್ತವೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ. 0.2 ರಷ್ಟು ಏರಿಕೆ ಕಂಡು 1,758.03 ಡಾಲರ್ ಪ್ರತಿ ಔನ್ಸ್ ಆಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುವ ಸೂಚನೆ ಸಿಕ್ಕಿದೆ.

ಜೂನ್ 23ರಂದು ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಬೆಲೆ 47,010 ರು ಹಾಗೂ 44 ಕ್ಯಾರೆಟ್: 48,200 ರು ನಷ್ಟಿದೆ. ಬೆಂಗಳೂರಲ್ಲಿ ಕ್ರಮವಾಗಿ 45,640 ರು ಹಾಗೂ 49, 760 ರು ಇದೆ.

ದೆಹಲಿ ಹಾಗೂ ಬೆಂಗಳೂರು ಎರಡು ನಗರಗಳಲ್ಲೂ 1 ಕೆಜಿ ಬೆಳ್ಳಿ ಬೆಲೆ 48, 810 ರು ನಷ್ಟಿದೆ. ಹೆಚ್ಚಿನ ವಿವರಗಳನ್ನು ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.

English summary
Gold prices in the national capital fell Rs 85 to Rs 48,811 per 10 gram on Monday amid rupee appreciation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X