Get Updates
Get notified of breaking news, exclusive insights, and must-see stories!

Gold Price on December 8: ಚಿನ್ನದ ದರ ಸತತ ಏರಿಕೆ, ಇಂದು ಒಂದೇ ದಿನಕ್ಕೆ ಭರ್ಜರಿ ಹೆಚ್ಚಳ..!

Gold Rate Today Bengaluru: ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆ ಆಗುತ್ತಲೇ ಬಂದಿದೆ. ಮಾರುಕಟ್ಟೆ, ವಿದೇಶಿ ನೀತಿಗಳ ಬೆಳವಣಿಗೆ, ಬದಲಾವಣೆ ಹೊರತಾಗಿಯು ವಾರದ ಮೊದಲ ದಿನ ಸೋಮವಾರ ಡಿಸೆಂಬರ್ 08 ರಂದು ಬಂಗಾರದ ದರದಲ್ಲಿ ಏರಿಕೆ ಆಗಿದೆ. ಬೆಳ್ಳಿಯು ಇಂದು ಬೆಳ್ಳಿ ದರದಲ್ಲಿ ಕುಸಿತವಾಗಿದೆ. ನವೆಂಬ್ 29ರಿಂದ ನಿರಂತರವಾಗಿ ಏರಿಕೆ ಆಗುತ್ತಿರುವ ಚಿನ್ನ ದರ ಬೆಂಗಳೂರು ಸೇರಿ ಪ್ರಮುಖ ನಗರವಾರು ವಿವರ ಇಲ್ಲಿದೆ.

ಇಂದು ಒಂದು ಗ್ರಾಂ ಚಿನ್ನದ ಬೆಲೆ 25 ರೂಪಾಯಿ ಏರಿಕೆ ಆಗಿದೆ. ಅಪರಂಜಿ ಚಿನ್ನದ ದರ (24 ಕ್ಯಾರಟ್) 27 ರೂಪಾಯಿಗೆ ಹೆಚ್ಚಳವಾಗಿದೆ. ಬೆಳ್ಳಿ ದರ ಕುಸಿತವಾಗಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 1,19,550 ರೂಪಾಯಿ ಇದ್ದು, 24 ಕ್ಯಾರಟ್ ಬಂಗಾರದ ಬೆಲೆಯು 1,30,420 ರೂಪಾಯಿ ಇದೆ. ಬೆಳ್ಳಿ 100 ಗ್ರಾಂಗೆ 18,900 ರೂಪಾಯಿ ಇದ್ದು, 100 ರೂಪಾಯಿ ಕುಸಿತಗೊಂಡಿದೆ.

Gold Prices Surge Again on December 8 Bengaluru Rates Rise Sharply Silver Declines

ಚಿನ್ನದ ಬೆಲೆ 1.5 ಲಕ್ಷಕ್ಕೆ ಏರಿಕೆ ನಿರೀಕ್ಷೆ

ಭಾರತದಲ್ಲಿ ಈ ಎರಡು ಲೋಹಗಳಿಗೆ ಬೇಡಿಕೆ ಎಂದಿಗೂ ಕಡಿಮೆ ಆಗುವುದಿಲ್ಲ. ಅಲ್ಲದೇ ಮದುವೆ ಋತುವಿನ ಸಂದರ್ಭ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. 100 ಗ್ರಾಂ 24 ಕ್ಯಾರಟ್ ಚಿನ್ನಕ್ಕೆ ಒಂದೇ ದಿನಕ್ಕೆ 2700 ರೂಪಾಯಿ ಏರಿಕೆ ಆಗಿದೆ. 22ಕ್ಯಾರಟ್ ಚಿನ್ನಕ್ಕೆ 2500 ರೂಪಾಯಿ ಹೆಚ್ಚಾಗಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ 10 ಗ್ರಾಂ ಚಿನ್ನಕ್ಕೆ 1.5 ಲಕ್ಷ ರೂಪಾಯಿ ಅದರೂ ಅಚ್ಚರಿ ಪಡಬೇಕಿಲ್ಲ.

ಸದ್ಯಕ್ಕೆ ಚಿನ್ನದ ಬೆಲೆಯಲ್ಲಿ ಹೇಳಿಕೊಳ್ಳುವಂತಹ ಮಹಾ ಕುಸಿತವೇನು ಕಂಡು ಬರುವುದಿಲ್ಲ. ತಜ್ಞರ ಅಂದಾಜಿನ ಪ್ರಕಾರ ಸುಮಾರು ಶೇಕಡಾ 10ರಿಂದ 15 ರಷ್ಟು ಕರೆಕ್ಷನ್ ಆಗಬಹುದು. ಇದು ಈವರೆಗೆ ಏರಿಕೆ ಆಗಿರುವ ಚಿನ್ನದ ದರ ಪ್ರಮಾಣ ಗಮನಿಸಿದರೆ ಅಷ್ಟೇನು ಕಡಿಮೆ ಅಲ್ಲ ಎಂದು ಹೇಳಲಾಗುತ್ತಿದೆ. ನಗರವಾರು ಚಿನ್ನದ ದರಪಟ್ಟಿ ಹೀಗಿದೆ.

22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ, ಪಟ್ಟಿ

ಬೆಂಗಳೂರು - 1,19,550 ರೂಪಾಯಿ

ಕೋಲ್ಕತ್ತಾ - 1,21,125.35 ರೂಪಾಯಿ

ಮುಂಬೈ - 1,19,800 ರೂಪಾಯಿ

ದೆಹಲಿ - 1,19,440 ರೂಪಾಯಿ

ಕೊಚ್ಚಿ (ಕೇರಳ) - 1,19,550 ರೂಪಾಯಿ

ಜೈಪುರ - 1,19,490 ರೂಪಾಯಿ

ಚೆನ್ನೈ - 1,20,400 ರೂಪಾಯಿ

ಹೈದರಾಬಾದ್ - 1,19,634.20 ರೂಪಾಯಿ

24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ, ಪಟ್ಟಿ

ಚೆನ್ನೈ - 1,31,450 ರೂಪಾಯಿ

ದೆಹಲಿ - 1,30,420 ರೂಪಾಯಿ

ಮುಂಬೈ- 1,30,280 ರೂಪಾಯಿ

ಕೋಲ್ಕತ್ತಾ - 1,30,260 ರೂಪಾಯಿ

ಬೆಂಗಳೂರು -1,30,250 ರೂಪಾಯಿ

ಪುಣೆ - 1,30,300 ರೂಪಾಯಿ

ಹೈದರಾಬಾದ್ - 1,30,300 ರೂಪಾಯಿ

ಜೈಪುರ - 1,30,290 ರೂಪಾಯಿ

ವಿಶೇಷ ಸೂಚನೆ: ಜಿಎಸ್‌ಟಿ, ವೇಸ್ಟೇಜ್ ಹಾಗೂ ಇತರ ಶುಲ್ಕ ಸೇರಿ ಚಿನ್ನದ ಬೆಲೆಯಲ್ಲಿ ಮಳಿಗೆ, ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು. ಗಮನಿಸಿ ಗ್ರಾಹಕರು ಖರೀದಿಸಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+