Gold Price on Sept: ಗ್ರಾಹಕರಿಗೆ ಚಿನ್ನದ ಬೆಲೆಯ ಶಾಕ್, ಒಂದೇ ದಿನಕ್ಕೆ ₹7000 ಭರ್ಜರಿ ಏರಿಕೆ

ಚಿನ್ನದ ದರವು ಒಂದು ವಾರದಿಂದ ಗ್ರಾಹಕರಿಗೆ ಆಘಾತ ನೀಡುತ್ತಿದೆ. ನೆನ್ನೆ ತಟಸ್ಥವಾಗಿದ್ದ ಚಿನ್ನದ ಬೆಲೆಯು ಇಂದು ಒಂದೇ ದಿನಕ್ಕೆ 7000 ರೂಪಾಯಿ ಹೆಚ್ಚಾಗಿದೆ. ಒಂದು ವಾರದಲ್ಲಿ ಎರಡು ಬಾರಿ ಯಥಾಸ್ಥಿತಿ ಕಾಯ್ದುಕೊಂಡಿದ್ದ ಬಂಗಾರದ ಬೆಲೆ ಹೆಚ್ಚಾಗಿದೆ. ಬೆಳ್ಳಿ ದರವು ಇಂದು 2100 ರೂಪಾಯಿ ಏರಿಕೆ ಕಾಣುವ ಮೂಲಕ ಗ್ರಾಹಕರಿಗೆ ಆರ್ಥಿಕ ಬರೆ ಎಳೆದಿದೆ.

ಅಮೆರಿಕಾ ಸುಂಕ ನೀತಿ ಹಾಗೂ ಅಂತಾರಾಷ್ಟ್ರೀಯ ಕಾರಣಗಳಿಂದ ನಿರಂತರವಾಗಿ ಹೆಚ್ಚಾಗಿದ್ದ ಚಿನ್ನ ಬೆಲೆಯು ನಂತರ ಸ್ವಲ್ಪದಿನ ಇಳಿಕೆ ಆಗಿಯೇ ಬಿಟ್ಟಿತು ಎನ್ನುವಂತೆ ದರ ಕುಸಿದಿತ್ತು. ನಾಲ್ಕು ಇಳಿಕೆ ಆಗುವ ದರವು ಒಂದೇ ದಿನಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಾಗುವ ಮೂಲಕ ಜನರಿಗೆ ಶಾಕ್ ನೀಡುತ್ತಲೇ ಬಂದಿದೆ.

Gold Prices Soar Rs 7 000 on Sept 12th Silver Up Rs 2 100 A Day

ಇಂದು ಶುಕ್ರವಾರ ಸೆಪ್ಟಂಬರ್ 12ರಂದು 100 ಗ್ರಾಂ ಬೆಳ್ಳಿ ಬೆಲೆಯು 1,29,900 ರೂಪಾಯಿಯಿಂದ 1,32,000 ರೂ.ಗೆ ಏರಿಕೆ ಕಂಡಿದೆ. ಅಂದರೆ ಒಂದೇ ದಿನಕ್ಕೆ ₹2,100 ರೂ.ಹೆಚ್ಚಾಗಿದೆ. ಅದೇ ರೀತಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ₹1,02,000 ಗೆಏರಿಕೆ ಆಗಿದ್ದು, ಇಂದು 700 ರೂಪಾಯಿ ಹೆಚ್ಚಾಗಿದೆ. ಇದೇ 100 ಗ್ರಾಂಗೆ ಲೆಕ್ಕ ಹಾಕಿದರೆ 7000 ರೂಪಾಯಿ ಹೆಚ್ಚಾದಂತಾಗುತ್ತದೆ.

ಇನ್ನೂ 24 ಕ್ಯಾರಟ್ 10 ಗ್ರಾಂ ಬಂಗಾರದ ಬೆಲೆ ಇಂದು ₹771 ರೂಪಾಯಿ ಹೆಚ್ಚಾಗಿದ್ದರಿಂದ ಅದರ ಬೆಲೆ 1,10,509 ರೂ.ನಿಂದ 1,11,280 ರೂಪಾಯಿಗೆ ಏರಿಕೆ ಆಗಿದೆ. ಇದೇ ಚಿನ್ನದ 100 ಗ್ರಾಂ ಲೆಕ್ಕ ತೆಗೆದುಕೊಂಡರೆ ಒಂದೇ ದಿನಕ್ಕೆ 7,710 ರೂಪಾಯಿ ಹೆಚ್ಚಾಗಿದೆ ಎಂದು ಚಿನ್ನ ಮಾರುಕಟ್ಟೆ ಮೂಲಗಳು ಶುಕ್ರವಾರ ಮಾಹಿತಿ ನೀಡಿವೆ.

ಕರ್ನಾಟಕದಲ್ಲಿ ಒಂದು ವಾರದ ಮಾಹಿತಿ ನೋಡುವುದಾದರೆ, ಸೆಪ್ಟಂಬರ್ 06ರಿಂದ ಇವತ್ತಿನವರೆಗೆ ನಿರಂತರ ಏರಿಕೆ ಆಗಿರುವ ಎರಡು ವಿಧದ ಚಿನ್ನದ ಬೆಲೆಯಲ್ಲಿ ಸೆಪ್ಟಂಬರ್ 11 ಮತ್ತು ಸೆಪ್ಟೆಂಬರ್ 07ರಂದು ಯಾವುದೇ ಬದಲಾವಣೆ ಆಗಿಲ್ಲ. ಅಂದಿನ ಬೆಲೆಗೆ ತಟಸ್ಥವಾಗಿದೆ.

ಚಿನ್ನದ ಬೆಲೆ ಏರಿಕೆ (24k ಮತ್ತು 22k ಕ್ಯಾರಟ್) ಪಟ್ಟಿ

2025 ಸೆಪ್ಟೆಂಬರ್ 12 : 11,128 (+77) ರೂಪಾಯಿ, ಮತ್ತು 10,200 (+70) ರೂಪಾಯಿ

2025 ಸೆಪ್ಟೆಂಬರ್ 11 : 11,051 (0) ಮತ್ತು ₹10,130 (0) ರೂಪಾಯಿ

2025 ಸೆಪ್ಟೆಂಬರ್ 10 : 11,051 (+22) ಮತ್ತು ₹10,130 (+20) ರೂಪಾಯಿ

2025 ಸೆಪ್ಟೆಂಬರ್ 09 : 11,029 (+136) ಮತ್ತು ₹10,110 (+125) ರೂಪಾಯಿ

2025 ಸೆಪ್ಟೆಂಬರ್ 08 : 10,893 (+44) ಮತ್ತು ₹9,985 (+40) ರೂಪಾಯಿ

2025 ಸೆಪ್ಟೆಂಬರ್ 07 : 10,849 (0) ಮತ್ತು ₹9,945 (0) ರೂಪಾಯಿ

2025 ಸೆಪ್ಟೆಂಬರ್ 06 : 10,849 (+87) ಮತ್ತು ₹9,945 (+80) ರೂಪಾಯಿ

22 ಕ್ಯಾರಟ್ ಚಿನ್ನದ ಇಂದಿನ ನಗರವಾರು ದರಪಟ್ಟಿ

* ಬೆಂಗಳೂರು: 1,00,741 ರೂಪಾಯಿ

* ಚೆನ್ನೈ: 1,00,952 ರೂಪಾಯಿ

* ಮುಂಬೈ: 1,00,668 ರೂಪಾಯಿ

* ಪುಣೆ: 1,00,668 ರೂಪಾಯಿ

* ಅಹಮದಾಬಾದ್: 1,00,796 ರೂಪಾಯಿ

* ದೆಹಲಿ: 1,00,494 ರೂಪಾಯಿ

* ಹೈದರಾಬಾದ್: 1,00,824 ರೂಪಾಯಿ

* ಕೋಲ್ಕತ್ತಾ: 1,00,530 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+