Gold Rate Today Bengaluru: ಚಿನ್ನದ ಬೆಲೆಯಲ್ಲಿ ಮತ್ತೆ ಭರ್ಜರಿ ಏರಿಕೆ, ಇಂದಿನ ದರಪಟ್ಟಿ
ಬೆಂಗಳೂರು, ಅಕ್ಟೋಬರ್ 29: ಚಿನ್ನವು ಕಳೆದ 10 ತಿಂಗಳಿನಿಂದ ನಿರಂತರ ಏರಿಕೆಯಲ್ಲಿತ್ತು. ಇದೀಗ ಚಿನ್ನದ ಬೆಲೆಗಳು ಕುಸಿತ ಕಾಣುತ್ತಿವೆ. ನೆನ್ನೆಯ ವಹಿವಾಟಿನಲ್ಲಿ ಎಂಸಿಎಕ್ಸ್ (MCX) ಚಿನ್ನದ ಬೆಲೆಗಳು ತಮ್ಮ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ₹13,000 ಕ್ಕಿಂತ ಕಡಿಮೆಯಾಗಿ ಇಳಿಯಿತು. ಪ್ರತಿ ಗ್ರಾಂಗೆ ₹1,20,000 ಕ್ಕಿಂತ ಇಳಿಕೆ ಆಯಿತು. ಜಾಗತಿಕ ಹೂಡಿಕೆದಾರರಲ್ಲಿ ಹೆಚ್ಚುತ್ತಿರುವ ಅಪಾಯದ ಭಾವನೆ ಮತ್ತು ಯುಎಸ್-ಚೀನಾ ವ್ಯಾಪಾರ ಒಪ್ಪಂದವು ಸಹ ಚಿನ್ನದ ಬೇಡಿಕೆ ಕುಗ್ಗಿಸಿದೆ. ಹೀಗಾಗಿ ನಿರಂತರವಾಗಿ ಇಳಿಕೆ ಆಗುತ್ತಿದ್ದ ಚಿನ್ನ ಇಂದು ಮತ್ತೆ ಹೆಚ್ಚಾಗಿದೆ. ಇಂದು ಕರ್ನಾಟಕ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಇಳಿಕೆ ಆಗಿದೆ. ದರಪಟ್ಟಿ ಇಲ್ಲಿದೆ.
ವಿಟಿ ಮಾರ್ಕೆಟ್ಸ್‌ನ ಗ್ಲೋಬಲ್ ಸ್ಟ್ರಾಟಜಿ ಲೀಡ್ ರಾಸ್ ಮ್ಯಾಕ್ಸ್‌ವೆಲ್ ಅವರ ಪ್ರಕಾರ, ಬಾಂಡ್ ಇಳುವರಿ ಏರಿಕೆಯಾಗಿರುವುದು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆ ಕಡಿಮೆ ಆಗಿರುವುದರಿಂದ ಚಿನ್ನದ ಅಲ್ಪಾವಧಿ ಬೇಡಿಕೆ ದುರ್ಬಲ ಆಗಿದೆ. ಪರಿಣಾಮವಾಗಿ ಹೂಡಿಕೆದಾರರು ಗರಿಷ್ಠ ಮಟ್ಟದ ನಂತರ ಲಾಭ-ತೆಗೆದುಕೊಳ್ಳುವಿಕೆಗೆ ಮುಂದಾಗಿದೆ. ಸುಧೀರ್ಘ ಅವಧಿಗೆ ನೋಡುವುದಾದರೆ ಚಿನ್ನದ ಏರುಗತಿಯ ಓಟಕ್ಕೆ ಬ್ರೇಕ್ ಬಿದ್ದಿದೆ. ಈ ನಡುವೆ ಚಿನ್ನವು ಏರಿಕೆ ಹಾದಿಗೆ ಮರಳುವ ಮುನ್ಸೂಚನೆ ನೀಡಿದೆ. ಇಂದು ಏರಿಕೆ ಕಂಡಿದೆ.

ಕಳೆದ ಮೂರು ದಿನಗಳಿಂದ ಚಿನ್ನ-ಬೆಳ್ಳಿ ದರ ಇಳಿಕೆ ಆಗುತ್ತಿದ್ದ ಇಂದು ಬುಧವಾರ (ಅಕ್ಟೋಬರ್ 29) ಹೆಚ್ಚಾಗಿದೆ. ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,11,450 ರೂಪಾಯಿಗೆ ಏರಿಕೆ ಆಗಿದೆ. 01 ಗ್ರಾಂಗೆ 70 ರೂಪಾಯಿ ಅಂತೆ, 10 ಗ್ರಾಂಗೆ 700 ರೂಪಾಯ ಏರಿಕೆ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಸಹ ಬದಲಾವಣೆ ಆಗಿದ್ದು, 10 ಗ್ರಾಂಗೆ 1,21,580ಕ್ಕೆ ಏರಿಕೆ ಆಗಿದೆ. ಇದು ಒಂದು ಗ್ರಾಂಗೆ 76 ರೂಪಾಯಿ ಅಂತೆ ಹತ್ತು ಗ್ರಾಂಗೆ 760 ರೂಪಾಯಿ ಹೆಚ್ಚಾಗಿದೆ. ಇನ್ನು 18 ಕ್ಯಾರಟ್ ಚಿನ್ನದ 10 ಗ್ರಾಂ ಚಿನ್ನಕ್ಕೆ 570 ರೂಪಾಯಿ ಏರಿಕೆ ಆಗಿದೆ.
ಬೆಳ್ಳಿಯ ದರದಲ್ಲಿ ಸಾಮಾನ್ಯವಾಗಿದೆ. ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇಂದು 10 ಗ್ರಾಂ ಬೆಳ್ಳಿಯ ದರವು 1,520 ರೂಪಾಯಿ ನಷ್ಟಿದೆ. 100 ಗ್ರಾಂ ಬೆಳ್ಳಿ ದರವು 15,200 ರೂಪಾಯಿಯಷ್ಟಿದೆ. ಬೆಳ್ಳಿ ಬೇರೆ ದೇಶಗಳಲ್ಲಿ ಕೊಂಚ ಹೆಚ್ಚಾಗಿದೆ. ಭಾರತ ಸೇರಿದಂತೆ ವಿದೇಶಗಳಲ್ಲಿ ಚಿನ್ನಕ್ಕೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ನಗರವಾರು 22k ಚಿನ್ನದ ಬೆಲೆ
ಚೆನ್ನೈ: 1,10,750 ರೂಪಾಯಿ
ಮುಂಬೈ: 1,12,250 ರೂಪಾಯಿ
ದೆಹಲಿ: 1,11,295 ರೂಪಾಯಿ
ಕೋಲ್ಕತ್ತಾ: 1,11,330 ರೂಪಾಯಿ
ಬೆಂಗಳೂರು: 1,11,450 ರೂಪಾಯಿ
ಪಾಟ್ನಾ: 1,14,728 ರೂಪಾಯಿ












Click it and Unblock the Notifications