• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸತತ 6ನೇ ದಿನವೂ ಏರಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಏರಿಕೆ

|

ಮುಂಬೈ, ಆಗಸ್ಟ್ 26: ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಆರ್ಥಿಕ ಪ್ರಗತಿ ಮಾಗದರ್ಶಿ ಸೂತ್ರಗಳಿಂದ ಕಾಣದ ಪ್ರಗತಿ, ಸ್ಥಳೀಯ ಮಾರುಕಟ್ಟೆಯಲ್ಲಿ ತಗ್ಗಿದ ಬೇಡಿಕೆಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ.

ಸತತ 6ನೇ ದಿನ ಬಂಗಾರದ ಬೆಲೆ ಹೆಚ್ಚಾಗಿದೆ. ಚಿನ್ನ ಈವರೆಗೆ ಶೇಕಡಾ 25 ರಷ್ಟು ಏರಿಕೆ ಕಂಡಿದ್ದು, ದೆಹಲಿಯಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆ 39,400 ರೂಪಾಯಿಯಾಗಿದೆ. ಮುಂಬೈಯಲ್ಲಿ ದಿನದ ವಹಿವಾಟಿನಲ್ಲಿ ಗರಿಷ್ಠ ಮಟ್ಟ ಮುಟ್ಟಿ 10 ಗ್ರಾಂಗೆ 40 ಸಾವಿರ ರು ಮುಟ್ಟಿತ್ತು ಆದರೆ, ನಂತರ ಚೇತರಿಕೆ ಕಂಡು 38 ರಿಂದ 39 ಸಾವಿರ ರು ಸರಾಸರಿಯಂತೆ ವಹಿವಾಟು ನಡೆಸಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.

ರೂಪಾಯಿ ಮೌಲ್ಯ ಇಳಿಕೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ

ಯುಎಸ್ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವ್ಯಾಪಾರ, ತೆರಿಗೆ ಹೆಚ್ಚಳದಿಂದಾಗಿ ಹೂಡಿಕೆದಾರರು ಚಿನ್ನ, ಸವರನ್ ಬಾಂಡ್ ಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಲು ಬಯಸಿದ್ದಾರೆ, ಹೀಗಾಗಿ, ಚಿನ್ನದ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

ಡಾಲರ್ ಎದುರು ರುಪಾಯಿ ಕುಸಿದಿದ್ದು 71.97 ಪ್ರತಿ ಡಾಲರ್ ನಂತೆ ಇಂದು ವಹಿವಾಟು ನಡೆಸಿದೆ. ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,534 ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 17.74 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ.

ಬೆಳ್ಳಿ ಬೆಲೆ ಮೂರು ವರ್ಷಗಳಲ್ಲೇ ಅಧಿಕವಾಗಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ ಶೇಕಡಾ 1ರಷ್ಟು ಹೆಚ್ಚಳ ಕಂಡಿದೆ. ಸೋಮವಾರ ಬೆಳ್ಳಿ ಬೆಲೆ ಕೆ.ಜಿ.ಗೆ 45,058 ರೂಪಾಯಿನಷ್ಟಿತ್ತು.ಗೆ ಅಕ್ಟೋಬರ್ 03,2016ರ ನಂತರ ಇದು ಗರಿಷ್ಠ ಬೆಲೆಯಾಗಿದೆ.

ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ದಾಖಲೆ ಮೊತ್ತದಲ್ಲಿ ಏರಿಕೆ

"ಚಿನ್ನ, ಬೆಳ್ಳಿ ಬೆಲೆ ಇದೇ ರೀತಿ ಮುಂದುವರೆಯಲಿದ್ದು, ಚಿನ್ನದ ಬೆಲೆ 10 ಗ್ರಾಂಗೆ 40 ಸಾವಿರ ರು ದಾಟಿ ಮುಂದುವರೆಯಲಿದ್ದು, ಬೆಳ್ಳಿ ಬೆಲೆ 45.900ರು ಪ್ರತಿ ಕೆ.ಜಿಯಿಂದ 48,000 ಪ್ರತಿ ಕೆಜಿ ತನಕ ಟ್ರೆಂಡ್ ಆಗುವ ಮುನ್ಸೂಚನೆ ಸಿಕ್ಕಿದೆ" ಎಂದು ರಿಲಯನ್ಸ್ ಕಮಾಡಿಟಿಸ್ ಮುಖ್ಯಸ್ಥ ಪ್ರೀತಂ ಕುಮಾರ್ ಪಟ್ನಾಯಕ್ ಅಭಿಪ್ರಾಯಪಟ್ಟಿದ್ದಾರೆ.

English summary
Gold and silver prices in India extended their record run today amid a rally in precious metal prices. News agency IANS reported gold touching a new high of ₹40,000 per 10 gram in Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X