ಚಿನ್ನದ ಪ್ರಿಯರಿಗೆ ಈ ತಿಂಗಳಲ್ಲಿ ಸಿಗಲಿದೆ ಸುವರ್ಣ ಹೂಡಿಕೆ ಅವಕಾಶ !

ಬೆಂಗಳೂರು, ಏಪ್ರಿಲ್ 03: ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭ ಮಾಡುವ ಉದ್ದೇಶವಿದ್ದರೆ ಏಪ್ರಿಲ್ ತಿಂಗಳಾಂತ್ಯದಲ್ಲಿ ಖರೀದಿಸಲು ಪ್ಲಾನ್ ಮಾಡಿಕೊಳ್ಳಿ. ಯಾಕೆಂದರೆ ಏಪ್ರಿಲ್ ತಿಂಗಳಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ ಎಂದು ಗೋಲ್ಡ್ ಎಕ್ಸ್ ಪರ್ಟ್ ಗೋಲ್ಡ್ ಗುರು ತಿಳಿಸಿದ್ದಾರೆ. ಅವರು ವಿಶ್ಲೇಷಣೆ ಮಾಡಿದಂತೆ ಕಳೆದ ವಾರವೂ ಚಿನ್ನದ ಬೆಲೆ ಒಂದು ಗ್ರಾಂ ಮೇಲೆ ನೂರು ರೂ. ಕಡಿಮೆಯಾಗಿತ್ತು. ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಇನ್ನೂ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಮಾ. 23 ರಂದು ಗೋಲ್ಡ್ ಗುರು ಹೇಳಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿತ್ತು. ಬೆಂಗಳೂರು ಮಾರುಕಟ್ಟೆಯಲ್ಲಿ ಕೂಡ ಒಂದು ಗ್ರಾಂ ಚಿನ್ನದ ಬೆಲೆ 4575 ಕ್ಕೆ ಇಳಿದಿತ್ತು. ಗುರುವಾರ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಹೆಚ್ಚಳಗೊಂಡಿದೆ. ಇದರಿಂದ ಚಿನ್ನದ ಬೆಲೆ ಮತ್ತೆ ಹೆಚ್ಚಾಗುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾ ಡಾಲರ್ ಬೆಲೆ ಸ್ಥಿರತೆ ಕಾಪಾಡಿಕೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇನ್ನೂ ಕಡಿಮೆಯಾಗಲಿದ್ದು, ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ.ನಿಂದ 200 ರೂ. ವರೆಗೂ ಕಡಿಮೆಯಾಗಲಿದೆ ಎಂದು ಗೋಲ್ಡ್ ಗುರು ವಿಶ್ಲೇಷಣೆ ಮಾಡಿದ್ದಾರೆ.

Gold price will fall down in April month says gold expert goldguru

ಕಳೆದ ಎರಡು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಸ್ಥಿರತೆ ಇರಲಿಲ್ಲ. ಅದರಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಏರಿಕೆ ಕಂಡಿತ್ತು. ಚಿನ್ನದ ಮೇಲೆ ಹೂಡಿಕೆ ಮಾಡಿ ಲಾಭ ಗಳಿಸುವ ಉದ್ದೇಶವಿದ್ದರೆ ಏಪ್ರಿಲ್ ತಿಂಗಳಾಂತ್ಯಕ್ಕೆ ಇನ್ನೂ ಕಡಿಮೆಯಾಗಲಿದ್ದು, ಹೂಡಿಕೆ ಮಾಡಲು ಸೂಕ್ತ ಎಂದು ಗೋಲ್ಡ್ ಗುರು ಸಲಹೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 3800 ರೂ. ತಲುಪುವ ಸಾಧ್ಯತೆಗಳಿವೆ. ಹೀಗಾಗಿ ಇನ್ನೂ ಒಂದೆರಡು ವಾರ ನೋಡಿಕೊಂಡು ಚಿನ್ನದ ಮೇಲೆ ಹೂಡಿಕೆ ಮಾಡುವುದು ಸೂಕ್ತ ಎಂದಿದ್ದಾರೆ ಗೋಲ್ಡ್ ಗುರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+