Gold Price Today: ಚಿನ್ನಾಭರಣ ಪ್ರಿಯರಿಗೆ ಆಘಾತ: ಅಷ್ಟಮಿ ದಿನವೇ ಚಿನ್ನ-ಬೆಳ್ಳಿ ಬೆಲೆ ಭರ್ಜರಿ ಏರಿಕೆ! 22K, 24K ದರ ಎಷ್ಟಿದೆ.

ಬೆಂಗಳೂರು: ಸತತ ಇಳಿಕೆಯ ನಂತರ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಂದು ಶುಕ್ರವಾರ (ಸೆಪ್ಟೆಂಬರ್ 18) ಅಷ್ಟಮಿಯ ದಿನದಂದು ಭರ್ಜರಿ ಏರಿಕೆ ಆಗಿದೆ. ಜಾಗತಿಕ ಅನಿಶ್ಚಿತತೆ, ರಾಜತಾಂತ್ರಿಕ ಕಾರಣಗಳಿಂದಾಗಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ನಿರಂತರವಾಗಿ ಇಳಿಕೆ ಆಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಏರಿಳಿತ ಮುಂದುವರಿದಿದ್ದು, ಇಂದು ಎರಡು ಲೋಹಗಳ ಮೌಲ್ಯ ಹೆಚ್ಚಾಗಿದೆ. 22ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಅಪ್ಡೇಟ್ ಮಾಹಿತಿ ಮುಂದಿದೆ.

ಬೆಳ್ಳಿಯ ದರದಲ್ಲಿ ನೆನ್ನೆ ಯಾವುದೇ ಬದಲಾವಣೆ ಆಗಿರಲಿಲ್ಲ. ಇಂದು 5000 ರೂಪಾಯಿ ಏರಿಕೆ ಆಗಿದೆ. ಅದೇ ರೀತಿ ಗುರುವಾರ ಇಳಿಕೆ ಆಗಿದ್ದ ಬಂಗಾರದ ದರದಲ್ಲಿ ಭಾರೀ ಏರಿಕೆ ಆಗಿದೆ. ಗಣೇಶ ಚೌತಿಯ ಐದನೇ ದಿನ ತುಂಬಿದ ಅಷ್ಟಮಿ ಹಾಗೂ ಆರನೇ ದಿನ ಎಳ್ಳಷ್ಟಮಿ ಪೂಜೆ ಇರುತ್ತದೆ. ಈ ಹೊತ್ತಿನಲ್ಲಿ ಬಂಗಾರದ ಬೆಲೆ ಏರಿಕೆ ಆಗುವ ಮೂಲಕ ಗ್ರಾಹಕರಿಗೆ ಆಘಾತ ಎದುರಾಗಿದೆ. ಈ ಎರಡು ಲೋಹಗಳ ಬೆಲೆ ಇಳಿಕೆಯಾದ ಬಳಿಕ ಖರೀದಿಸಲು ಪ್ಲ್ಯಾನ್ ಮಾಡಿಕೊಂಡಿದ್ದ ಚಿನ್ನಾಭರಣ ಪ್ರಿಯರ ಆಲೋಚನೆಗೆ ಶಾಕ್ ನಿಡಿದಂತಾಗಿದೆ.

Gold Price Today September 18

ಇಂದು ಬೆಳ್ಳಿ ದರ ಎಷ್ಟಿದೆ?

ಶುಕ್ರವಾರ ಬೆಳ್ಳಿಯು ಒಂದೇ ದಿನಕ್ಕೆ 5000 ರೂ. ಮೌಲ್ಯ ಹೆಚ್ಚಿಸಿಕೊಂಡಿದೆ. ನೆನ್ನೆ ವರೆಗೆ ಸುಮಾರು ಒಂದು ವಾರಕ್ಕೂ ಹೆಚ್ಚು ದಿನಗಳು ಒಂದು ಕೆಜೆ ಬೆಳ್ಳಿ ದರ ಸ್ಥಿರವಾಗಿತ್ತು. 1ಕೆಜಿಗೆ 2,45,000 ರೂಪಾಯಿ ಇದ್ದು, ಇಂದು 5000 ರೂ. ಹೆಚ್ಚಳ ಮೂಲಕ ಇದರ ಒಟ್ಟು ಬೆಲೆ 1,50,000 ರೂಪಾಯಿಗೆ ಏರಿಕೆ ಆಗಿದೆ. ಈ ಹಿಂದೆ ಸೆಪ್ಟೆಂಬರ್ 10ರಂದು 5000 ರೂ. ಹೆಚ್ಚಾಗಿ ಮಾರನೇ ದಿನ ಸೆ.11ರಂದು ಬರೋಬ್ಬರಿ 10,000 ರೂ. ಕುಸಿತಗೊಂಡಿತ್ತು. ತದನಂತರ ಸ್ಥಿರತೆ ಕಾಯ್ದುಕೊಂಡಿತ್ತು.

Gold Price: ಇಂದಿನ ಬಂಗಾರದ ಬೆಲೆ ವಿವರ

* 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 145 ರೂಪಾಯಿ ಏರಿಕೆ ಆಗಿದ್ದು, 10ಗ್ರಾಂಗೆ 1450 ರೂಪಾಯಿ ಹೆಚ್ಚಾಗಿದ್ದು, ಒಟ್ಟು ದರ 1, 41,550 ರೂಪಾಯಿಗೆ ಏರಿದೆ.

* 24 ಕ್ಯಾರಟ್ ಒಂದು ಗ್ರಾಂ ಬಂಗಾರದ ದರ 158 ರೂಪಾಯಿ ಹೆಚ್ಚಾಗಿದ್ದು, 10 ಗ್ರಾಂಗೆ 1580 ರೂಪಾಯಿ ಏರಿಕೆ ಕಂಡು ಒಟ್ಟು ಬೆಲೆ 1, 54, 420 ರೂಪಾಯಿ ಹೆಚ್ಚಾಗಿದೆ.

* ಇನ್ನೂ ಅದೇ ರೀತಿ 18 ಕ್ಯಾರಟ್ ಚಿನ್ನದ ಒಂದು ಗ್ರಾಂಗೆ 114 ರೂಪಾಯಿ, 10 ಗ್ರಾಂಗೆ 1140 ರೂ. ಹೆಚ್ಚಳವಾಗುವ ಮೂಲಕ ಒಟ್ಟು ಬೆಲೆ 1,15,820 ರೂಪಾಯಿ ತಲುಪಿದೆ.

ನಗರವಾರು 22k ಚಿನ್ನದ 1ಗ್ರಾಂ ಬೆಲೆ ಎಷ್ಟಿದೆ?

ಚೆನ್ನೈ: 14,009 ರೂಪಾಯಿ

ಮುಂಬೈ: 14,155 ರೂಪಾಯಿ

ದೆಹಲಿ: 14,170 ರೂಪಾಯಿ

ಕೊಲ್ಕತ್ತಾ: 14,155 ರೂಪಾಯಿ

ಬೆಂಗಳೂರು: 14,155 ರೂಪಾಯಿ

ಹೈದರಾಬಾದ್: 14,155 ರೂಪಾಯಿ

ಕೇರಳ: 14,155 ರೂಪಾಯಿ

ಪುಣೆ: 14,155 ರೂಪಾಯಿ

ಅಹ್ಮದಾಬಾದ್: 14,155 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+