Gold Price Today: ಚಿನ್ನದ ದರದಲ್ಲಿ ದಾಖಲೆಯ ಹೆಚ್ಚಳ! ಹಬ್ಬಕ್ಕೆ ಬಂಗಾರ ಗ್ರಾಹಕರಿಗೆ ಹೆಚ್ಚಾಯ್ತು ಚಿಂತೆ
Gold Price on July 12: ಚಿನ್ನ ಬೆಲೆಯಲ್ಲಿ ಸದ್ಯ ಏರಿಳಿತ ಇಲ್ಲ. ಬದಲಾಗಿ ಬೆಲೆ ಹೆಚ್ಚುತ್ತಲೇ ಹೋಗುತ್ತಿದೆ. ಒಂದು ಲಕ್ಷ ರೂಪಾಯಿ ಸಮೀಸುತ್ತಿದೆ. ಚಿನ್ನ ಖರೀದಿದಾರರಿಗೆ ಶನಿವಾರವು ಆಘಾತಕಾರಿ ಸುದ್ದಿ ಸಿಕ್ಕಿದೆ. ಕಳೆದೊಂದು ವಾರದಿಂದ ನಿರಂತರವಾಗಿ ಬಂಗಾರದ ಬೆಲೆ ಹಚ್ಚಾಗುತ್ತಲೇ ಬಂದಿದೆ. ಇಂದು ಮತ್ತೆ ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ. ಹಾಗಾದರೆ ಯಾವೆಲ್ಲ ನಗರದಲ್ಲಿ ಎಷ್ಟಿದೆ ಬೆಲೆ, ಇಂದಿನ ದರ ಪಟ್ಟಿ ವಿವರ ಇಲ್ಲಿದೆ.
ಮಾರುಕಟ್ಟೆಯಲ್ಲಿ ಚಿನ್ನದ ಹೂಡಿಕೆ ಕೊಂಚ ಹೆಚ್ಚಾಗಿದೆ ಅನ್ನಬಹುದು. ಇತ್ತ ಚಿನ್ನಕ್ಕೂ ಬೇಡಿಕೆ ಮುಂದುವರಿದಿದೆ. ಆಷಾಡ ಮಾಸ ಕೊನೆಗೊಳ್ಳುತ್ತಿದ್ದಂತೆ ಮುಂದೆ ಸಾಲು ಸಾಲು ಹಬ್ಬಗಳು ಎದುರಾಗಲಿವೆ. ನಾಗರಪಂಚಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ವೇಳೆ ಚಿನ್ನ ಖರೀದಿಸುವವರಿ ಬೆಲೆ ಕೇಳಿ ಈಗಲೇ ಶಾಕ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾದರೆ ಹೇಗೆ ಎಂಬ ಆತಂಕವು ಅವರಲ್ಲಿದೆ.

ಜುಲೈ 12ರಂದು ಚಿನ್ನದ ದರದಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 99,000 ರೂಪಾಯಿಯಿಂದ ಇಂದು 99,710 ರೂಪಾಯಿ ಅಂದರೆ ಬರೋಬ್ಬರಿ ಒಂದೇ ದಿನ 710 ರೂಪಾಯಿ ಹೆಚ್ಚಾಗಿದೆ. ಇನ್ನೂ 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹7,100 ರೂಪಾಯಿ ಏರಿಕೆ ಆಗಿದ್ದು, ದರ 9,97,100ಕ್ಕೆ ಹೆಚ್ಚಾಗಿದೆ.
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 90,750 ರೂಪಾಯಿಯಿಂದ ಇಂದು 91,400 ರೂಪಾಯಿ ಅಂದರೆ ಬರೋಬ್ಬರಿ ಒಂದೇ ದಿನ 650 ರೂಪಾಯಿ ಹೆಚ್ಚಾಗಿದೆ. ಇನ್ನೂ 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹6,500 ರೂಪಾಯಿ ಏರಿಕೆ ಆಗಿದ್ದು, ದರ
₹9,14,000ಕ್ಕೆ ಹೆಚ್ಚಳ ಕಂಡಿದೆ ಎಂದು ಮಾರುಕಟ್ಟೆ ಅಂಕಿ ಸಂಖ್ಯೆಗಳು ತಿಳಿಸಿವೆ.
ಬೆಂಗಳೂರಲ್ಲಿ ಚಿನ್ನದ ದರ ಎಷ್ಟಿದೆ?
ಚಿನ್ನದಂತೆ ಬೆಳ್ಳಿಯದ ದರದಲ್ಲೂ ಹೆಚ್ಚಾಗಿದೆ. ಬೆಂಗಳೂರು, ಕರ್ನಾಟಕ ಸೇರಿದಂತೆ ಭಾರತದಲ್ಲಿ ಬೆಳ್ಳಿ 100 ಗ್ರಾಂ ದರ ಇವತ್ತು 400 ರೂಪಾಯಿ ಹೆಚ್ಚಾಗಿದೆ. ಅದರ ದರ 11,100 ರೂಪಾಯಿಯಿಂದ ಇಂದು 11,500 ರೂಪಾಯಿಗೆ ಏರಿಕೆ ಆಗಿದೆ. ಇದೆ ದರ ಬೆಂಗಳೂರಿನಲ್ಲಿಯು ಇದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 90,750 ರೂಪಾಯಿ ಇದೆ. ಈ ದರ ಅಂಗಡಿ, ನಗರದಿಂದ ನಗರಕ್ಕೆ ವೇಸ್ಟೇಜ್, ಜಿಎಸ್‌ಟಿ ಇತರೆ ಶುಲ್ಕ ಸೇರಿ ಕೊಂಚ ಬದಲಾವಣೆ ಆಗಬಹುದು.
ಭಾರತದ ನಗರವಾರು 22k ಚಿನ್ನದ ದರ ಎಷ್ಟಿದೆ?
* ಬೆಂಗಳೂರು: 90,750 ರೂಪಾಯಿ
* ದೆಹಲಿ: 91,550 ರೂಪಾಯಿ
* ಮುಂಬೈ: 91,550 ರೂಪಾಯಿ
* ಚೆನ್ನೈ: 91,400 ರೂಪಾಯಿ
* ಪುಣೆ: 91,400 ರೂಪಾಯಿ
* ಅಹಮದಾಬಾದ್: 91,450
* ವಡೋದರಾ: 91,450
* ಹೈದರಾಬಾದ್: 91,400 ರೂಪಾಯಿ
* ಕೋಲ್ಕತಾ: 91,400 ರೂಪಾಯಿ












Click it and Unblock the Notifications