Gold Price: ಚಿನ್ನದ ಬೆಲೆ ಕುಸಿತ, ಈಗ ಖರೀದಿ ಮಾಡಬಹುದಾ?
ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿ ಇದ್ದು, ದಿನದಿಂದ ದಿನಕ್ಕೆ ಭಾರಿ ಕುಸಿತ ಕಾಣುತ್ತಿದೆ ಚಿನ್ನ. ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದರೂ ಚಿನ್ನ ಮಾತ್ರ ಮಾರುಕಟ್ಟೆ ದರದಲ್ಲಿ ಕುಸಿತ ಕಾಣುತ್ತಿದೆ. ಹೀಗೆ ಚಿನ್ನದ ಬೆಲೆ ಕುಸಿತ ಕಾಣುತ್ತಿರುವುದು ಆಭರಣ ಖರೀದಿಗೆ ಕಾದು ಕೂತಿದ್ದ ಜನರಿಗೆ ಫುಲ್ ಖುಷಿ ನೀಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.
ಚಿನ್ನದ ಬೆಲೆ ಮತ್ತೊಮ್ಮೆ ಭಾರಿ ಕುಸಿತ ಕಂಡಿದ್ದು, ಈ ಮೂಲಕ ಚಿನ್ನ ಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಪಾತಾಳ ಸೇರುತ್ತಿದೆ ಹೀಗಿದ್ದಾಗ ಈಗ ಕೂಡ, ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದೆ. ಕಳೆದ 1 ದಶಕದಲ್ಲಿ ಚಿನ್ನದ ಬೆಲೆ, ಸಾಕಷ್ಟು ಬದಲಾವಣೆ ಕಂಡಿದೆ. ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗೆ ಎಲ್ಲಾ ವಿಶ್ವಾಸದ ನಂತರವೂ ಚಿನ್ನದ ಬೆಲೆಯು ಕುಸಿತದ ಕಡೆಗೆ ಮುಖ ಮಾಡುತ್ತಿರುವುದು ಹೂಡಿಕೆ ಮಾಡುವವರಿಗೆ ಟೆನ್ಷನ್ ಕೂಡ ಕೊಡುತ್ತಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನಕ್ಕೆ ಬೆಲೆ?

ಚಿನ್ನದ ಬೆಲೆ ಇಷ್ಟಿದೆ ನೋಡಿ
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡು ಪ್ರತಿ 100 ಗ್ರಾಂಗೆ 6,64,900 ರೂಪಾಯಿ ರೇಟ್‌ನಲ್ಲಿ ಮಾರಾಟ ಆಗುತ್ತಿದೆ. ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 66,490 ರೂಪಾಯಿ ಆಗಿದ್ದು, ಆಭರಣ ಚಿನ್ನದ ಬೆಲೆ ಕುಸಿತದ ನಂತರ ಕೂಡ ಉತ್ತಮ ಬೆಲೆಗೆ ಮಾರಾಟ ಆಗ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 7,25,400 ರೂಪಾಯಿ ಲೆಕ್ಕದಲ್ಲಿ ಮಾರಾಟ ಆಗುತ್ತಿದೆ. ಹಾಗಾದ್ರೆ, ಈಗ ಬೆಳ್ಳಿ ಬೆಲೆ ಎಷ್ಟಿದೆ? ಮುಂದೆ ಓದಿ.
ಬೆಳ್ಳಿ ಬೆಲೆ ಎಷ್ಟಿದೆ ನೋಡಿ!
ಚಿನ್ನದ ರೀತಿಯಲ್ಲೇ ಬೆಳ್ಳಿ ಬೆಲೆ ಕೂಡ ಕುಸಿತ ಕಾಣುತ್ತಿದೆ, ಈ ಪೈಕಿ ಬೆಳ್ಳಿ ಕೂಡ ಕಳೆದ ಕೆಲವು ತಿಂಗಳಲ್ಲಿ ಭಾರಿ ಏರಿಕೆ ಕಂಡಿತ್ತು. ಆದರೆ ಜೂನ್ ಆರಂಭದಲ್ಲೇ ಕುಸಿತ ಕಂಡ ಬೆಳ್ಳಿಯ ಬೆಲೆಗೆ ಇನ್ನೂ ಗಟ್ಟಿಯಾದ ನೆಲೆ ಸಿಕ್ಕಿಲ್ಲ. ಹೀಗಾಗಿಯೇ ಬೆಳ್ಳಿ ಬೆಲೆ ಕೂಡ ಕುಸಿತ ಕಾಣುತ್ತಿದೆ. ಹೀಗಾಗಿ ಬೆಳ್ಳಿ ಸದ್ಯಕ್ಕೆ ಭಾರಿ ಕುಸಿತದ ಹಾದಿ ಹಿಡಿದಿದೆ. ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ 91,100 ರೂಪಾಯಿ ಆಗಿದ್ದರೆ, 100 ಬೆಳ್ಳಿ ಬೆಲೆ 9,110 ರೂಪಾಯಿ ಆಗಿದೆ. ಹಾಗೇ ಚೆನ್ನೈ ನಗರದಲ್ಲೂ ಬೆಳ್ಳಿ ಕುಸಿತ ಕಂಡು ಕೆ.ಜಿ.ಗೆ 95,500 ರೂಪಾಯಿ ತಲುಪಿದ್ದರೆ, ದೆಹಲಿ & ಮುಂಬೈ ನಗರದಲ್ಲಿ 90,900 ರೂಪಾಯಿ ಪ್ರತಿ ಕೆ.ಜಿ.ಗೆ ಮಾರಾಟ ಆಗುತ್ತಿದೆ.
ಚಿನ್ನ ಈಗ ಅಂತಾರಾಷ್ಟ್ರೀಯ ಕರೆನ್ಸಿ?
ಪ್ರಪಂಚದ ಮಟ್ಟದಲ್ಲಿ ಈಗ ಚಿನ್ನಕ್ಕೆ ಯಾಕೆ ಇಷ್ಟು ಬೆಲೆ ಬಂದಿದೆ ಎಂದರೆ, ಯುದ್ಧಗಳು ಶುರುವಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಟ್ಟಿಯಾದ ಕರೆನ್ಸಿ ಇಲ್ಲವಾಗಿದ್ದು. ಈ ಕಾರಣಕ್ಕೆ ಈಗ ಚಿನ್ನದ ಮೇಲೆ ಜನರಿಗೆ ತುಂಬಾ ನಂಬಿಕೆ ಬಂದಿದೆ. ಹೀಗಾಗಿ ಜನರು ಕೂಡ ಚಿನ್ನ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಲ್ಲಿ ಚಿನ್ನ ಸಾಕಷ್ಟು ಏರಿಕೆ ಕಂಡಿತ್ತು. ಆದರೆ, ಇದೀಗ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಇಸ್ರೇಲ್ & ಇರಾನ್ ಯುದ್ಧ ನಡೆಯಲ್ಲ ಎಂಬ ನಂಬಿಕೆ ಸಿಕ್ಕ ನಂತರ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಕೂಡ ಚಿನ್ನ ಖರೀದಿಯನ್ನು ಆರಾಮವಾಗಿ ಮಾಡಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.












Click it and Unblock the Notifications