Gold Price on November 20: ಬಂಗಾರ ದರ ಎಷ್ಟಾಯ್ತು ಗೊತ್ತಾ? ಇಲ್ಲಿದೆ ನವೆಂಬರ್ 20ರ ಚಿನ್ನದ ದರಪಟ್ಟಿ
Gold Price on November 20: ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲೇ ಇರುತ್ತದೆ. ಹಾಗಾದ್ರೆ, ಇಂದು (ನವೆಂಬರ್ 20) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ನವೆಂಬರ್ 19) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,14,450 ರೂಪಾಯಿ ಇದ್ದರೆ, ಇಂದು (ನವೆಂಬರ್ 20) 1,14,300 ರೂಪಾಯಿ ಆಗಿದೆ. 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,24,860 ರೂಪಾಯಿ ಇತ್ತು. ಇನ್ನು ಇಂದು 1,24,690 ರೂಪಾಯಿ ಆಗಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 91,440 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 99,752 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,14,300
ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,24,690 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,14,300 ರೂಪಾಯಿ
* ಚೆನ್ನೈ - 1,15,000 ರೂಪಾಯಿ
* ಮುಂಬೈ - 1,14,300 ರೂಪಾಯಿ
* ಕೋಲ್ಕತ್ತಾ - 1,14,300 ರೂಪಾಯಿ
* ನವದೆಹಲಿ - 1,14,450 ರೂಪಾಯಿ
* ಹೈದರಾಬಾದ್ -1,14,300 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,24,690 ರೂಪಾಯಿ
* ಚೆನ್ನೈ - 1,25,460 ರೂಪಾಯಿ
* ಮುಂಬೈ - 1,24,690 ರೂಪಾಯಿ
* ಕೋಲ್ಕತ್ತಾ - 1,24,690 ರೂಪಾಯಿ
* ನವದೆಹಲಿ - 1,24,840 ರೂಪಾಯಿ
* ಹೈದರಾಬಾದ್ - 1,24,690 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 1,65,000 ರೂಪಾಯಿ (3,000 ರೂಪಾಯಿ ಇಳಿಕೆ)
* ಚೆನ್ನೈ - 1,73,000 ರೂಪಾಯಿ (3,000 ರೂಪಾಯಿ ಇಳಿಕೆ)
* ಮುಂಬೈ - 1,65,000 ರೂಪಾಯಿ (3,000 ರೂಪಾಯಿ ಇಳಿಕೆ)
* ಕೋಲ್ಕತ್ತಾ - 1,65,000 ರೂಪಾಯಿ (3,000 ರೂಪಾಯಿ ಇಳಿಕೆ)
* ನವದೆಹಲಿ - 1,65,000 ರೂಪಾಯಿ (3,000 ರೂಪಾಯಿ ಇಳಿಕೆ)
* ಹೈದರಾಬಾದ್ - 1,73,000 ರೂಪಾಯಿ (3,000 ರೂಪಾಯಿ ಇಳಿಕೆ)
ಹಬ್ಬಗಳ ವೇಳೆಯೇ ಬಂಗಾರ ಕೊಳ್ಳುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಇದೀಗ ಸದ್ಯ ಹಬ್ಬಗಳ ಸರದಿ ಮುಗಿದಿದೆ. ಹಾಗಂತ ಆಭರಣ ಕೊಳ್ಳುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಖರೀದಿ ಮಾಡುತ್ತಲೇ ಇರುತ್ತಾರೆ. ಇನ್ನೂ ಮುಂದಿನ ದಿನಗಳಲ್ಲಿ ದರ ಇಳಿಕೆಯಾಗಲೂಬಹುದು ಅಥವಾ ಏರಿಕೆಯೂ ಆಗಬಹುದು. ಆದ್ದರಿಂದ ಈಗಲೇ ಕೊಂಡುಕೊಳ್ಳುವುದು ಉತ್ತಮ ಎನ್ನಲಾಗುತ್ತಿದೆ.












Click it and Unblock the Notifications