Gold Price: ಚಿನ್ನದ ಬೆಲೆ 1,06,970 ರೂಪಾಯಿ, ಮುಂದೆ ಇದೆ ಮತ್ತಷ್ಟು ಏರಿಕೆ...

ಚಿನ್ನ ಬೆಲೆ ಕೈಗೆ ಸಿಗದಷ್ಟು ಮೇಲೆ ಹೋಗಿದ್ದು, ಬಂಗಾರ ಖರೀದಿ ಮಾಡಲು ಕಾಯುತ್ತಾ ಕುಳಿದ್ದವರಿಗೆಲ್ಲಾ ಇದೀಗ ದಿಢೀರ್ ದೊಡ್ಡ ಆಘಾತ ಎದುರಾಗಿದೆ. ಯಾಕಂದ್ರೆ ಚಿನ್ನದ ಬೆಲೆ ಕಡಿಮೆ ಆಗಬಹುದು, ಮುಂದೆ ಖರೀದಿ ಮಾಡೋಣ ಅಂತಾ ಕಾಯುತ್ತಿದ್ದವರಿಗೆ ಈಗ ಶಾಕ್ ಸಿಕ್ಕಿದೆ. ಯಾಕಂದ್ರೆ ಚಿನ್ನದ ಬೆಲೆ ಇಳಿಕೆಯನ್ನ ಕಾಣುವ ಬದಲು ಭಾರಿ ಭರ್ಜರಿ ಏರಿಕೆ ಕಾಣುತ್ತಿದೆ. ಮದುವೆ ಸೀಸನ್ & ಶ್ರಾವಣ ಮಾಸದ ಹಿನ್ನೆಲೆ ಈಗ ಸಾಲು ಸಾಲು ಹಬ್ಬಗಳ ಸಮಯ ಶುರುವಾಗಿರುವ ಸಂದರ್ಭದಲ್ಲೇ ಚಿನ್ನದ ಬೆಲೆ ಈ ರೇಂಜ್‌ಗೆ ಏರಿಕೆಯಾಗಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ 1,06,970 ರೂಪಾಯಿ, ಮುಂದೆ ಇದೆ ಮತ್ತಷ್ಟು ಏರಿಕೆ...

ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡು ತಲ್ಲಣ ಸೃಷ್ಟಿಯಾಗಿದೆ. ನೋಡ ನೋಡುತ್ತ ಚಿನ್ನದ ಬೆಲೆ ಬರೋಬ್ಬರಿ 1,00,000 ರುಪಾಯಿ ಮೀರಿ ಹೋಗಿದೆ. ಹೀಗಾಗಿ ಚಿನ್ನ ಖರೀದಿ ಮಾಡಲು ಮಿಡಲ್ ಕ್ಲಾಸ್ ಮತ್ತು ಬಡ ವರ್ಗದ ಜನರು ಚಿಂತೆ ಮಾಡುವ ವಾತಾವರಣ ಇದೆ. ಹೀಗಾಗಿ ಚಿನ್ನ ಬೆಲೆ ಯಾವಾಗ ಕುಸಿತ ಕಾಣುತ್ತೆ? ನಾವು ಮತ್ತೆ ಚಿನ್ನ ಯಾವಾಗ ಖರೀದಿ ಮಾಡಬಹುದು? ಅಂತಾ ಕೂಡ ಜನರು ಚಿಂತೆ ಮಾಡುತ್ತಿದ್ದರು.ಆದರೆ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಸದ್ಯಕ್ಕೆ ಚಿನ್ನದ ಬೆಲೆ ಇಳಿಕೆ ಆಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

Gold Price Reached To 1 06 970 Rupees For 10 Gram

ಚಿನ್ನದ ಬೆಲೆ ಭರ್ಜರಿ ಏರಿಕೆ!

ಚಿನ್ನ ಬೇಕು ಚಿನ್ನ... ಬಂಗಾರ ಯಾವಾಗ ಖರೀದಿ ಮಾಡೋದು? ಚಿನ್ನದ ಬೆಲೆ ದಿಢೀರ್ ಯಾಕೆ ಇಷ್ಟು ಜಾಸ್ತಿ ಆಯ್ತು? ಹೀಗೆ ಆಭರಣ ಪ್ರಿಯ ಮಹಿಳೆಯರು & ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದ ಗಂಡಸರು ಸಾಲು ಸಾಲು ಪ್ರಶ್ನೆ ಹಾಕಿಕೊಳ್ಳುತ್ತಿದ್ದರು. ಅದರಲ್ಲೂ ಚಿನ್ನದ ಬೆಲೆ ಇಳಿಕೆ ಕಾಣಲಿದೆ ಅಂತಾ ಕೋಟಿ ಕೋಟಿ ಜನರು ಕಾಯ್ತಾ ಇದ್ದಾರೆ. ಯಾಕಂದ್ರೆ ಈಗಾಗಲೇ ಚಿನ್ನದ ಬೆಲೆ ಆಕಾಶ ಮುಟ್ಟಿದ್ದು, ಈ ಸಮಯದಲ್ಲಿ ಚಿನ್ನ ಖರೀದಿ ಅಸಾಧ್ಯ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಮಯದಲ್ಲೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,06,970 ರೂಪಾಯಿಗೆ ತಲುಪಿದೆ.

ಒಟ್ನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿರುವುದು ಸಾಕಷ್ಟು ಬೇಸರವನ್ನು ಮಧ್ಯಮ & ಬಡ ವರ್ಗದ ಜನರಿಗೆ ತರಿಸಿದೆ. ಆದರೆ ಚಿನ್ದದ ಮೇಲೆ ಹೂಡಿಕೆ ಮಾಡಿದ್ದವರಿಗೆ ಇದೀಗ ಸಿಕ್ಕಾಪಟ್ಟೆ ಖುಷಿ ಖುಷಿ ಆಗುತ್ತಿದೆ, ಯಾಕಂದ್ರೆ ಹಿಂದೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಈಗ ಭರ್ಜರಿ ಲಾಭ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+