Get Updates
Get notified of breaking news, exclusive insights, and must-see stories!

Gold Price Nov 10: ಚಿನ್ನದ ಬೆಲೆ ಒಂದೇ ದಿನ ₹1,200 ಹೆಚ್ಚಳ, ಇಂದಿನ ಚಿನ್ನ & ಬೆಳ್ಳಿ ವಿವರ

Gold Price On November 10: ಚಿನ್ನ ಪ್ರಿಯರಿಗೆ ಮತ್ತೆ ಭಾರೀ ಶಾಕ್ ಎದುರಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದೀಗ ಸೋಮವಾರ (ನವೆಂಬರ್ 10)ರಂದು ಮತ್ತೆ ಚಿನ್ನದ ಬೆಲೆ ಭಾರೀ ಹೆಚ್ಚಳ ಕಂಡಿದೆ. ಬೆಂಗಳೂರು ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಚಿನ್ನದ ಬೆಲೆಯು ಗಣನೀಯವಾಗಿ ಹೆಚ್ಚಳ ಕಂಡಿದೆ. ಇದು ಚಿನ್ನ ಪ್ರಿಯರಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಜನ ಪ್ರಾಪರ್ಟಿ ಹಾಗೂ ಚಿನ್ನ ಸೇರಿದಂತೆ ಕೆಲವೊಂದು ಪ್ರಮುಖ ವಸ್ತುಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ 8 ನಗರಗಳಲ್ಲಿ ಭೂಮಿ ಬೆಲೆಯು ಕಳೆದ ವರ್ಷಕ್ಕಿಂತ ಈ ವರ್ಷ ಹಲವು ಪಟ್ಟು ಹೆಚ್ಚಳ ಕಂಡಿದೆ. ಅದೇ ರೀತಿ ಈ ವರ್ಷದಲ್ಲಿ ಚಿನ್ನದ ಬೆಲೆ ಸಹ ಭಾರೀ ಹೆಚ್ಚಳವಾಗಿದೆ. ಭಾರತದಲ್ಲಿ 2025ನೇ ಸಾಲಿನ ಪ್ರಾರಂಭದಿಂದ ನವೆಂಬರ್ ವರೆಗೆ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲೇ ಸಾಗಿದೆ. ನವೆಂಬರ್ 10ರ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಎಷ್ಟಿದೆ ಎನ್ನುವ ವಿವರ ನೋಡೋಣ.

Gold Price On November 10 Gold Rises by 1 200 in a Day Check Today s Gold and Silver Rates

ಚಿನ್ನದ ಬೆಲೆ 24 ಕ್ಯಾರೆಟ್: 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 12,322 ರೂಪಾಯಿ ಆಗಿದೆ. ಪ್ರತಿ ಗ್ರಾಂ ಚಿನ್ನದ ಬೆಲೆಯು 1,23,220 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 120 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,200 ರೂಪಾಯಿ ಹೆಚ್ಚಳವಾಗಿದೆ.

ಚಿನ್ನದ ಬೆಲೆ 22 ಕ್ಯಾರೆಟ್: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 11,295 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,12,950 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಚಿನ್ನದ ಬೆಲೆಯು 110 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,100 ರೂಪಾಯಿ ಹೆಚ್ಚಳವಾಗಿದೆ.

ಚಿನ್ನದ ಬೆಲೆ 18 ಕ್ಯಾರೆಟ್: ಚಿನ್ನದ ಬೆಲೆ 18 ಕ್ಯಾರೆಟ್ ಸಹ ಹೆಚ್ಚಳವಾಗಿದೆ. 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 9,242 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 92,420 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ, ಒಂದು ಗ್ರಾಂ ಚಿನ್ನದ ಬೆಲೆಯು 90 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 900 ರೂಪಾಯಿ ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ: ಇನ್ನು ಅಚ್ಚರಿಯ ರೀತಿಯಲ್ಲಿ ಬೆಳ್ಳಿ ಬೆಲೆ ಸಹ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 155 ರೂಪಾಯಿ ಹಾಗೂ ಒಂದು ಕೆ.ಜಿಗೆ 1,55,000 ಸಾವಿರ ರೂಪಾಯಿ ಆಗಿದೆ. ಒಂದು ಗ್ರಾಂ ಚಿನ್ನದ ಬೆಲೆಯು ₹2.50 ಹಾಗೂ ಕೆ.ಜಿಗೆ 2,500 ರೂಪಾಯಿ ಹೆಚ್ಚಳವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+