Gold Price on June 15: ಮುಂದಿನ ಹಬ್ಬಗಳಿಗೆ ಚಿನ್ನ ಮತ್ತಷ್ಟು ದುಬಾರಿ, ಇಂದಿನ ಚಿನ್ನ-ಬೆಳ್ಳಿ ದರಪಟ್ಟಿ
ಬೆಂಗಳೂರು, ಜೂನ್ 15: ಚಿನ್ನಾಭರಣ ಪ್ರಿಯರಿಗೆ ಸಮಾಧಾನ ಸುದ್ದಿಯೊಂದು ಸಿಕ್ಕಿದೆ. ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರವಾಗಿ ಏರಿಕೆ ಆಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ಥಿರತೆ ಕಂಡು ಬಂದಿದೆ. ಬೆಳ್ಳಿ ದರ ಸಹ ಏರಿಕೆ ಆಗಿಲ್ಲ. ಕಳೆದ ಕೇವಲ 10 ದಿನಗಳಲ್ಲಿ 22 ಕ್ಯಾರಟ್ 10ಗ್ರಾಂ ಚಿನ್ನದ ಬೆಲೆ 9085 ರೂಪಾಯಿಯಷ್ಟು ಏರಿಕೆ ಆಗಿದೆ. ಇದರಿಂದ ಗ್ರಾಹಕರಿಗೆ ಆರ್ಥಿಕ ಹೊರೆ ಆಗಿದೆ. ಮದುವೆ, ಇನ್ನಿತರ ಸಮಾರಂಭಗಳಿಗೆ ಚಿನ್ನ ಖರೀದಿಸಲು ಮುಂದಾಗಿದ್ದವರು ಬೆಲೆ ಕಂಡು ಆಘಾತಗೊಂಡಿದ್ದಾರೆ.
ಇಂದು ಜೂನ್ 15 ರಂದು ಬಂಗಾರ ಹಾಗೂ ಬೆಳ್ಳಿ ದರ ಯಥಾ ಸ್ಥಿತಿಯಲ್ಲಿದೆ. ಕಳೆದ ಎರಡು ತಿಂಗಳಲ್ಲಿ 22 ಕ್ಯಾರಟ್ ಚಿನ್ನಕ್ಕೆ ಆಗಿದ್ದ 9085 ರೂಪಾಯಿ ಹೆಚ್ಚಳವೇ ಅತ್ಯಧಿಕವಾಗಿದೆ. ಈ ಎರಡು ತಿಂಗಳಲ್ಲಿ ಈ ಪ್ರಮಾಣದಲ್ಲಿ ಚಿನ್ನದ ಬೆಲೆ ಹೆಚ್ಚಾಗಿರಲಿಲ್ಲ. ಸದ್ಯ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 93,200 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ ದರ 1,01,680 ರೂಪಾಯಿ ಇದೆ. ಇನ್ನೂ ಬೆಳ್ಳಿ ದರವು ಯಥಾ ಸ್ಥಿತಿಯಲ್ಲಿದ್ದು, 100 ಗ್ರಾಂಗೆ 11,000 ರೂಪಾಯಿ ಹಾಗೂ ಒಂದು ಕೆಜಿಗೆ 1,10,000 ರೂಪಾಯಿ ಇದೆ.

ಮುಂದಿನ ಹಬ್ಬಕ್ಕೆ ಚಿನ್ನ ಮತ್ತಷ್ಟು ದುಬಾರಿ
ಚಿನ್ನದ ಬೆಲೆ ಎರಡನೇ ಬಾರಿಗೆ ಒಂದು ಲಕ್ಷ ರೂಪಾಯಿ ದಾಟಿದೆ. ಮುಂದಿನ ಆಗಸ್ಟ್ ತಿಂಗಳಿನಿಂದ ನಾಗಪಂಚಮಿ, ಗಣೇಶ ಚತುರ್ಥಿ, ದಸರಾ ಹಾಗೂ ದೀಪಾವಳಿ ಎಂದು ಸಾಲು ಸಾಲು ಹಬ್ಬಗಳು ಎದುರಾಗುತ್ತವೆ. ಈ ವೇಳೆ ಚಿನ್ನದ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಹಾಗಂತ ಪ್ರಸ್ತುತ ಸನ್ನಿವೇಶದಲ್ಲಿ ಚಿನ್ನ ಖರೀದಿಗೆ ಮುಂದಾದರೆ, ಈಗಲೇ ದುಬಾರಿ ಬೆಲೆ ಕೊಟ್ಟೆ ಖರೀದಿಸಬೇಕಿದೆ.
ಸಮಾಧಾನಕರ ವಿಷವೆಂದರೆ ಚಿನ್ನದ ದರ ಏರಿಕೆಗೆ ಬ್ರೇಕ್ ಬಿದ್ದಿದೆ. ಸೋಮವಾರದಿಂದ ಬಂಗಾರ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಆಗುವ ನಿರೀಕ್ಷೆಗಳು ಇವೆ. ಇತ್ತೀಚೆಗೆ ಅಮೆರಿಕ ಸುಂಕ ನೀತಿಯಿಂದ ಚಿನ್ನದ ದರ ಯದ್ವಾ ತದ್ವಾ ಏರಿಕೆ ಆಗಿತ್ತು. ಸದ್ಯ ಇರಾನ್ -ಇಸ್ರೇಲ್ ಯುದ್ಧ ಮುಂದುವರಿದಿದೆ. ಯುದ್ಧ ಪ್ರದೇಶದಲ್ಲಿ ಸ್ಥಿತಿಗತಿಗಳು ಕರಾಳವಾಗಿವೆ. ಈ ಯುದ್ಧದಿಂದ ಆಯಾ ದೇಶಗಳಿಗೆ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಿಗೂ ಪರೋಕ್ಷ ಪರಿಣಾಮ ಬೀರಲಿದೆ. ಚಿನ್ನದ ಬೆಲೆಯಲ್ಲಿ ಏರಿಕೆ, ಷೆರುಪೇಟೆಯಲ್ಲಿ ಕುಸಿತ ಮುಂತಾದವುಗಳು ಘಟಿಸಬಹುದು. ಬೆಂಗಳೂರಿನಲ್ಲಿ ಕಳೆದೊಂದು ವಾರದಲ್ಲಿ ಚಿನ್ನದ ದರದಲ್ಲಿ ಆದ ಬಲಾವಣೆ ಬಗ್ಗೆ ಮುಂದೆ ತಿಳಿಯಿರಿ.
ಬೆಂಗಳೂರಲ್ಲಿ 1 ಗ್ರಾಂ ಚಿನ್ನದ (22k & 24k) ಬೆಲೆ ಪಟ್ಟಿ
Jun 14: 10,168 ರೂಪಾಯಿ (0) ಮತ್ತು 9,320 (0) ರೂಪಾಯಿ
Jun 13: 10,140 ರೂ.(+212) ಮತ್ತು 9,295 (+195) ರೂಪಾಯಿ
Jun 12: 9,928 ರೂಪಾಯಿ (+88) ಮತ್ತು 9,100 (+80) ರೂಪಾಯಿ
Jun 11: 9,840 ರೂಪಾಯಿ (+82) ಮತ್ತು 9,020 (+75) ರೂಪಾಯಿ
Jun 10: 9,758 ರೂಪಾಯಿ (-11) ಮತ್ತು 8,945 (-10) ರೂಪಾಯಿ
Jun 9: 9,769 ರೂಪಾಯಿ (-28) ಮತ್ತು 8,955 (-25) ರೂಪಾಯಿ
Jun 8: 9,797 ರೂಪಾಯಿ (0) ಮತ್ತು 8,980 (0) ರೂಪಾಯಿ












Click it and Unblock the Notifications