Gold Price Update: ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಇಂದು ಎಷ್ಟಿದೆ? ಇಳಿಕೆಯ ಮಾಹಿತಿ
ಬೆಂಗಳೂರು, ಫೆಬ್ರವರಿ 23: ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಳಿಕೆ ಮುಂದುವರಿದಿದೆ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ತುಸು ಇಳಿಕೆ ಆಗಿದೆ. ಉಳಿದಂತೆ ಹಲವು ದೇಶಗಳಲ್ಲಿ ಏರಿಕೆಯ ಬೆಲೆಯೇ ಯಥಾಸ್ಥಿತಿಯಲ್ಲಿದೆ.
ಬಂಗಾರದ ಬೆಲೆ ಇಂದು ಫೆಬ್ರವರಿ 23ರಂದು ಚಿನ್ನದ ಬೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಅಂದರೆ ಹತ್ತು ರೂಪಾಯಿ ಕಡಿಮೆ ಆಗಿದೆ. ಇನ್ನೂ ಬೆಳ್ಳಿಯ ಬೆಲೆಯಲ್ಲಿ 70 ಪೈಸೆಯಷ್ಟು ಇಳಿಕೆ ಆಗಿದೆ. ಭಾರತದಲ್ಲಿನ ಬೆಲೆ ನೋಡುವುದಾದರೆ, ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 57,500 ರೂ. ಇದೆ. 24 ಕ್ಯಾರಟ್ನ (ಅಪರಂಜಿ) ಚಿನ್ನದ ಬೆಲೆ 62,730 ರೂಪಾಯಿ ಇಳಿದಿದೆ.

100 ಗ್ರಾಂ ಬೆಳ್ಳಿ ಬೆಲೆ 7,500 ರೂಪಾಯಿ ಇದ್ದರೆ, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ 57,500 ರೂಪಾಯಿ ಇದೆ. ಬೆಳ್ಳಿ ಬೆಲೆ 100 ಗ್ರಾಂ 7,240 ರೂಪಾಯಿ ಇದೆ. ವಿದೇಶಗಳಲ್ಲಿ, ಭಾರತದ ವಿವಿಧ ನಗರಗಳಲ್ಲಿ ಚಿನ್ನ- ಬೆಳ್ಳಿಯ ಇಂದಿನ ದರದ ಮಾಹಿತಿ, ಪಟ್ಟಿ ಇಲ್ಲಿದೆ.
ಗ್ರಾಹಕರ ಗಮನಕ್ಕೆ: ವಿವಿಧ ನಗರಗಳಲ್ಲಿ ಚಿನ್ನದ ವೇಸ್ಟೇಜ್, ಇತರೆ ಶುಲ್ಕ ಸೇರಿ ಬೆಲೆಯಲ್ಲಿ ವ್ಯತ್ಯಾಸವಾಗಬಹುದು.
ನಗರವಾರು ಹತ್ತು ಗ್ರಾಂ 22 ಕ್ಯಾರಟ್ ಚಿನ್ನದ ದರ ಎಷ್ಟಿದೆ?
ಬೆಂಗಳೂರು- 57,500 ರೂಪಾಯಿ
ದೆಹಲಿ - 57,650 ರೂಪಾಯಿ
ಚೆನ್ನೈ - 58,000 ರೂಪಾಯಿ
ಜೈಪುರ್- 57,650 ರೂಪಾಯಿ
ಲಕ್ನೋ- 57,650 ರೂಪಾಯಿ
ಭುವನೇಶ್ವರ್- 57,500 ರೂಪಾಯಿ
ಕೋಲ್ಕತಾ - 57,500 ರೂಪಾಯಿ
ಕೇರಳ -57,500 ರೂಪಾಯಿ
ಅಹ್ಮದಾಬಾದ್- 57,550 ರೂಪಾಯಿ
ಮುಂಬೈ- 57,500 ರೂಪಾಯಿ

ವಿದೇಶಗಳಲ್ಲಿ ಹತ್ತು ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ
ಭಾರತ- 57,500 ರೂ.
ಸಿಂಗಾಪುರ - 52,306 ರೂ.
ಮಲೇಷ್ಯಾ - 53,768 ರೂ.
ದುಬೈ- 51,331 ರೂ.
ಕತಾರ್ - 53,161 ರೂ.
ಸೌದಿ ಅರೇಬಿಯಾ - 51,704 ರೂ.
ಅಮೆರಿಕ - 51,380 ರೂ.
ಓಮನ್ - 53,280 ರೂ.
ನಗರವಾರು ಬೆಳ್ಳಿ ((100 ಗ್ರಾಂ) ದರ ಪಟ್ಟಿ ಹೀಗಿದೆ
ಬೆಂಗಳೂರು - 7,240 ರೂಪಾಯಿ
ಬೆಲೆ - 7,650 ರೂಪಾಯಿ
ಮುಂಬೈ - 7,500 ರೂಪಾಯಿ
ದೆಹಲಿ -7,500 ರೂಪಾಯಿ
ಕೋಲ್ಕತಾ - 7,500 ರೂಪಾಯಿ
ಕೇರಳ - 7,650 ರೂಪಾಯಿ
ಅಹ್ಮದಾಬಾದ್- 7,500 ರೂಪಾಯಿ
ಜೈಪುರ - 7,500 ರೂಪಾಯಿ
ಲಕ್ನೋ - 7,500 ರೂಪಾಯಿ
ಭುವನೇಶ್ವರ್ - 7,650 ರೂಪಾಯಿ












Click it and Unblock the Notifications