ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ?
Recommended Video

ಬೆಂಗಳೂರು, ಅಕ್ಟೋಬರ್ 15: ನವರಾತ್ರಿ, ದಸರಾ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಮುಂದಾದವರಿಗೆ ಗೊಂದಲದ ಸ್ಥಿತಿ ಉಂಟಾಗಿದೆ. ಶನಿವಾರದ ವೇಳೆಗೆ ಇಳಿಕೆಯಾಗಿದ್ದ ಹಳದಿ ಲೋಹದ ಬೆಲೆ, ಸೋಮವಾರದಂದು ಕೊಂಚ ಏರಿಕೆ ಕಂಡಿದೆ.
ಕಳೆದ ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಶನಿವಾರದಂದು ಇಳಿಕೆ ಕಂಡುಬಂದಿತ್ತು. ನವರಾತ್ರಿ ಸಂದರ್ಭದಲ್ಲಿ ಇಳಿಕೆಯಾದ ಚಿನ್ನದ ಬೆಲೆ ಮುಂದಿನ ದೀಪಾವಳಿ ವೇಳೆಗೆ ರಾಕೆಟ್ ನಂತೆ ಏರಿಕೆಯಾಗಲಿದೆ ಎಂದು ಚಿನಿವಾರ ಪೇಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶನಿವಾರದಂದು ಚಿನ್ನದ ಬೆಲೆಯಲ್ಲಿ 70 ರೂ. ಇಳಿಕೆಯಾಗುವ ಮೂಲಕ 10 ಗ್ರಾಂ ಚಿನ್ನಕ್ಕೆ 32,050 ರೂ. ಗಳಾಗಿತ್ತು. ಬೆಳ್ಳಿ ಬೆಲೆಯಲ್ಲೂ ನೂರು ರೂಪಾಯಿ ಇಳಿಕೆಯಾಗಿದ್ದು, 1 ಕೆಜಿಗೆ 39,400 ರೂಪಾಯಿ ತಲುಪಿತ್ತು.

ಸ್ಥಳೀಯ ಮಾರುಕಟ್ಟೆಯಲ್ಲಿ ವರ್ತಕರು ಚಿನ್ನ ಖರೀದಿಗೆ ನಿರಾಸಕ್ತಿ ತೋರಿದ್ದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವ ಸಾಧ್ಯತೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಕಾಣುವ ಸಾಧ್ಯತೆಯಿದೆ ಎಂಬ ಭಾವನೆ ಇದೆ.
ಆದರೆ, ಈಗ ಯುಎಸ್ ಹಾಗೂ ಚೀನಾ ನಡುವಿನ ತಿಕ್ಕಾಟದಿಂದ ಚೀನಾದ ಆರ್ಥಿಕ ಪ್ರಗತಿ ಕುಸಿತದ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ, ಚಿನ್ನದ ಬೆಲೆ ಕೂಡಾ ಮುಂಬರುವ ದಿನಗಳಲ್ಲಿ ಏರಿಕೆಯಾಗುವ ಸಾಧ್ಯತೆ ಯಿದೆ ಎಂದು ಹೇಳಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ವಾರಾಂತ್ಯಕ್ಕೆ ಚಿನ್ನದ ಬೆಲೆ ಶೇ 2.8ರಷ್ಟು ಏರಿಕೆ ಕಂಡು ಪ್ರತಿ ಔನ್ಸಿನ ಬೆಲೆ 1223 ಡಾಲರ್ ನಷ್ಟಿತ್ತು.
ಬೆಂಗಳೂರಿನಲ್ಲಿ ಅಕ್ಟೋಬರ್ 15ರಂದು 10 ಗ್ರಾಮ್ ಆಭರಣ ಚಿನ್ನದ ಬೆಲೆ 29,800 ರು ಹಾಗೂ ಶುದ್ಧ ಚಿನ್ನದ ಬೆಲೆ 31,600 ರು ನಷ್ಟಿದೆ. ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಪಟ್ಟಿ ನೋಡಿ












Click it and Unblock the Notifications