Gold Price: ಚಿನ್ನದ ಬೆಲೆ 1,50,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ, ಕಾರಣ ಇಲ್ಲಿದೆ...
ಚಿನ್ನ.. ಚಿನ್ನ.. ಚಿನ್ನ.. ಹೀಗೆ ಎಲ್ಲಿ ಕೇಳಿದರೂ ಬರೀ ಚಿನ್ನದ ಬೆಲೆ ಏರಿಕೆ ಬಗ್ಗೆ ಹಾಗೂ ಬೆಳ್ಳಿ ಬೆಲೆ ಏರಿಕೆ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಚಿನ್ನದ ಬೆಲೆ ದಿಢೀರ್ ಐತಿಹಾಸಿಕ ಮಟ್ಟಕ್ಕೆ ಏರಿಕೆ ಕಂಡ ನಂತರ ಚಿನ್ನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಅದರಲ್ಲೂ ಚಿನ್ನ ಬೆಲೆಯು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಭಾರಿ ಏರಿಕೆ ಕಾಣುತ್ತಿದ್ದ ಕಾರಣಕ್ಕೆ ಆಭರಣ ಪ್ರಿಯರು ಭಾರಿ ಟೆನ್ಷನ್ ಮಾಡಿಕೊಂಡಿದ್ದರು. ಹೀಗಿದ್ದಾಗ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದ ಚಿನ್ನ ಬೆಲೆ ದಿಢೀರ್ ಕುಸಿದು ಬೀಳಲು ಆರಂಭಿಸಿದೆ. ಅದರಲ್ಲೂ ಚಿನ್ನದ ಬೆಲೆ 1,50,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ, ಕಾರಣ ಇಲ್ಲಿದೆ...
ಚಿನ್ನ ಭಾರತ ಮತ್ತು ಭಾರತೀಯರ ಸಂಸ್ಕೃತಿಯ ಒಂದು ಭಾಗವಾಗಿ ಹೋಗಿದೆ, ಚಿನ್ನ ಹಾಗೂ ಬೆಳ್ಳಿ ಇಲ್ಲದೆ ಶುಭಕಾರ್ಯ ಮಾಡುವುದು ಕಷ್ಟ ಎನ್ನಬಹುದು. ಯಾಕಂದ್ರೆ ಚಿನ್ನ ಹಾಗೂ ಬೆಳ್ಳಿ ಶುಭ ಸಂಕೇತ ಎಂದು ಶತಕೋಟಿ ಭಾರತೀಯರು ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಚಿನ್ನ ಹಾಗೂ ಬೆಳ್ಳಿ ಖರೀದಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಈ ಕಾರಣಕ್ಕೂ ಬಂಗಾರ ಬೆಲೆ ಹಾಗೂ ಬೆಳ್ಳಿ ಬೆಲೆ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿತ್ತು. ಇಷ್ಟೆಲ್ಲದರ ನಡುವೆಯೇ ಚಿನ್ನದ ಬೆಲೆ ನೋಡ ನೋಡುತ್ತಲೇ ಕುಸಿದು ಬೀಳಲು ಆರಂಭಿಸಿದೆ. ಹಾಗಾದರೆ ಬಂಗಾರದ ಬೆಲೆ 1,50,000 ರೂಪಾಯಿಗೆ ಕುಸಿದು ಬೀಳುವುದು ಯಾವಾಗ? ಬನ್ನಿ ತಿಳಿಯೋಣ.

ಚಿನ್ನದ ಬೆಲೆ 1,50,000 ರೂಪಾಯಿಗೆ?
ಹೌದು, ಚಿನ್ನದ ಬೆಲೆ ದಿಢೀರ್ ಭಾರಿ ಪ್ರಮಾಣದಲ್ಲಿ ಕುಸಿದು ಬೀಳುತ್ತಿರುವ ಕಾರಣಕ್ಕೆ ಚರ್ಚೆಯು ಜೋರಾಗಿದೆ. ಇಂದು ಕೇಂದ್ರ ಬಜೆಟ್ ಮಂಡನೆ ಆಗುತ್ತಿದ್ದು, ಚಿನ್ನದ ಮೇಲಿನ ತೆರಿಗೆ ಇಳಿಕೆಯ ಸಾಧ್ಯತೆ ಬಗ್ಗೆ ಕೂಡ ಚರ್ಚೆ ಜೋರಾಗಿದೆ. ಆಭರಣ ಪ್ರಿಯರು ಇದೀಗ ಕೇಂದ್ರ ಬಜೆಟ್ ಮೇಲೆ ತಮ್ಮ ಗಮನ ನೆಟ್ಟಿದ್ದು, ಚಿನ್ನದ ಬೆಲೆ ಹಾಗೂ ಬೆಳ್ಳಿ ಬೆಲೆ ಇಳಿಕೆ ಆಗುತ್ತಾ? ಎಂದು ಕಾಯುತ್ತಿದ್ದಾರೆ. ಮತ್ತೊಂದು ಕಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಯುದ್ಧಗಳು ಹಿಡಿತಕ್ಕೆ ಬಂದ ಕಾರಣ ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆ ಇಳಿಕೆ ಆಗಲಿದೆ ಎಂದು ಅಂದಾಜು ಮಾಡಲಾಗುತ್ತಿದೆ. ಹೀಗಾಗಿ ಆಭರಣ ಪ್ರಿಯರು ಇದೀಗ ಕೇಂದ್ರ ಬಜೆಟ್ ಮುಗಿಯುವ ತನಕ, ಉಸಿರು ಬಿಗಿಹಿಡಿದು ಕೂರುವ ಸಾಧ್ಯತೆ ದಟ್ಟವಾಗಿದೆ.
ಯುದ್ಧ ಭಯದಲ್ಲಿ ಚಿನ್ನಕ್ಕೆ ಡಿಮ್ಯಾಂಡ್
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ಭೀತಿ ಆವರಿಸಿದ್ದ ಕಾರಣಕ್ಕೆ ಚಿನ್ನ ಹಾಗೂ ಬೆಳ್ಳಿಯ ಬೆಲೆ ಆಕಾಶ ಮುಟ್ಟಿತ್ತು. ನೋಡ ನೋಡುತ್ತಲೇ ಕೈಗೆ ಸಿಗದಂತೆ ಮೇಲೆ ಹೋಗಿದ್ದ ಈ ಎರಡೂ ಲೋಹಗಳ ಬೆಲೆ ಈಗ ಮತ್ತೆ ಕುಸಿಯಲು ಆರಂಭಿಸಿದೆ. ಅದರಲ್ಲೂ ಚಿನ್ನ ಬೆಲೆಯು 1,50,000 ರೂಪಾಯಿಗೆ ಕುಸಿದು ಬೀಳುವುದು ಗ್ಯಾರಂಟಿ ಎಂಬ ವಾತಾವರಣ ನಿರ್ಮಾಣ ಆಗಿದ್ದು, ಮುಂದೆ ಕೆಲವು ದಿನಗಳ ಕಾಲ ಇದೇ ರೀತಿ ಬಂಗಾರದ ಬೆಲೆ ಇಳಿಯುವ ಮುನ್ಸೂಚನೆ ಸಿಗುತ್ತಿದೆ. ಹಾಗೇ ಬೆಳ್ಳಿ ಬೆಲೆಯಲ್ಲಿ ಕೂಡ ಏರುಪೇರು ಆಗುತ್ತಿದ್ದು, ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಆಭರಣ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇನ್ನಷ್ಟು ಬೆಲೆ ಇಳಿಕೆ ಕಂಡರೆ ಆಗ ಖರೀದಿ ಮಾಡುವವರಿಗೆ ಅನುಕೂಲ ಆಗಲಿದೆ ಎಂಬ ಚರ್ಚೆ ಶುರುವಾಗಿದೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications