Gold Price: ಚಿನ್ನದ ಬೆಲೆ 70,000 ರೂಪಾಯಿಗೆ ದಿಢೀರ್ ಕುಸಿದು ಬೀಳುವ ಎಲ್ಲಾ ಸಾಧ್ಯತೆ...
ಚಿನ್ನ ಬೇಕು ಚಿನ್ನ... ಬಂಗಾರ ಯಾವಾಗ ಖರೀದಿ ಮಾಡೋದು? ಚಿನ್ನದ ಬೆಲೆ ದಿಢೀರ್ ಯಾಕೆ ಇಷ್ಟು ಜಾಸ್ತಿ ಆಯ್ತು? ಹೀಗೆ ಆಭರಣ ಪ್ರಿಯ ಮಹಿಳೆಯರು & ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದ ಗಂಡಸರು ಸಾಲು ಸಾಲು ಪ್ರಶ್ನೆ ಹಾಕಿಕೊಳ್ಳುತ್ತಿದ್ದರು. ಅದರಲ್ಲೂ ಚಿನ್ನದ ಬೆಲೆ ಇಳಿಕೆ ಕಾಣಲಿದೆ ಅಂತಾ ಕೋಟಿ ಕೋಟಿ ಜನರು ಕಾಯ್ತಾ ಇದ್ದಾರೆ. ಯಾಕಂದ್ರೆ ಈಗಾಗಲೇ ಚಿನ್ನದ ಬೆಲೆ ಆಕಾಶ ಮುಟ್ಟಿದ್ದು, ಈ ಸಮಯದಲ್ಲಿ ಚಿನ್ನ ಖರೀದಿ ಅಸಾಧ್ಯ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ 70,000 ರೂಪಾಯಿಗೆ ದಿಢೀರ್ ಕುಸಿದು ಬೀಳುವ ಎಲ್ಲಾ ಸಾಧ್ಯತೆ...
ಹೌದು, ಬಂಗಾರ ಅಂದ್ರೆ ಚಿನ್ನ ಭಾರಿ ಡಿಮ್ಯಾಂಡ್ ಇರುವ ವಸ್ತು, ಹೀಗಾಗಿ ಚಿನ್ನ ಖರೀದಿಗೆ ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಜನರು ಕೂಡ ಮುಗಿಬಿದ್ದು ಮುಂದೆ ಬರುತ್ತಾರೆ. ನಮ್ಮ ಭಾರತೀಯರು ಚಿನ್ನ ನಂಬಿ ಹೂಡಿಕೆ ಮಾಡುತ್ತಾ ಬಂದಿದ್ದಾರೆ, ನೂರಾರು ವರ್ಷಗಳಿಂದಲೂ ಭಾರತೀಯರು ಹಳದಿ ಲೋಹ ಚಿನ್ನದ ಮೇಲೆ ವಿಪರೀತ ಹೂಡಿಕೆ ಮಾಡಿದ್ದಾರೆ. ಆದರೆ ಹೀಗೆಲ್ಲಾ ಚಿನ್ನ ಕೊಳ್ಳಲು ಜನ ಕೂಡ ಮುಗಿಬಿದ್ದು ಮುಂದೆ ಬರುತ್ತಿರುವ ಕಾರಣಕ್ಕೆ ಬಂಗಾರದ ಬೆಲೆ ಭಾರಿ ಏರಿಕೆ ಕಂಡಿದ್ದು ಆಭರಣ ಪ್ರಿಯರ ಮಹಿಳೆಯರ ಪಾಲಿಗೆ ಇದು ಚಿಂತೆ ಮಾಡುವ ವಿಷಯ ಆಗಿತ್ತು. ಹೀಗಿದ್ದಾಗಲೇ, ಚಿನ್ನದ ಬೆಲೆ 70,000 ರೂಪಾಯಿಗೆ ದಿಢೀರ್ ಕುಸಿದು ಬೀಳುವ ಎಲ್ಲಾ ಸಾಧ್ಯತೆ...

ಚಿನ್ನದ ಬೆಲೆ 70,000 ರೂಪಾಯಿ...
ಮದುವೆ... ಎಂಗೇಜ್‌ಮೆಂಟ್... ನಾಮಕರಣ... ಹೀಗೆ ಯಾವುದೇ ಶುಭಕಾರ್ಯ ನಡೆದರೂ ಅಲ್ಲಿ ಚಿನ್ನ ಬೇಕೆ ಬೇಕು. ಯಾಕಂದ್ರೆ ಚಿನ್ನ ಇಲ್ಲದೆ ಏನೂ ಸಾಧ್ಯವೇ ಇಲ್ಲ ಅನ್ನೋ ಪರಿಸ್ಥಿತಿ ಇದೀಗ ನಿರ್ಮಾಣ ಆಗಿದೆ. ಆದರೆ ಚಿನ್ನದ ಬೆಲೆ ಗಗನಕ್ಕೆ ಏರಿದ ಕಾರಣ ಜನರು ಕೂಡ ಚಿಂತೆ ಮಾಡುತ್ತಿದ್ದಾರೆ. ಕಳೆದ 1 ವರ್ಷದಲ್ಲಿ ಚಿನ್ನ ಬೆಲೆ ಭಾರಿ ಭರ್ಜರಿ ಏರಿಕೆ ಕಂಡು ಜನರೇ ಶಾಕ್ ಆಗಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ ಚಿನ್ನ ಬೆಲೆ 70,000 ರೂಪಾಯಿಗೆ ಕುಸಿತ ಕಂಡರೆ....
ಚಿನ್ನದ ಬೆಲೆ 70,000 ರೂಪಾಯಿ ಹೇಗೆ?
ಹೌದು, ಚಿನ್ನ ಬೆಲೆ ವಿಪರೀತ ಏರಿಕೆ ಕಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಮ್ಯಾಟರ್. ಆದರೆ ಚಿನ್ನ ಮಾರುಕಟ್ಟೆ ತಜ್ಞರು ಹೇಳುವಂತೆ ಬಂಗಾರ ಬೆಲೆ ಅಗತ್ಯಕ್ಕಿಂತ ಜಾಸ್ತಿ ಆಗಿದೆ ಅಂದ್ರೆ ಮೇಲೆ ಹೋಗಿದೆ. ಹೀಗಾಗಿ ಚಿನ್ನ ಬೆಲೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಕುಸಿಯಬೇಕು ಮತ್ತು ಚಿನ್ನ ಬೆಲೆ ಕುಸಿತ ಕಾಣುವುದು ಅನಿವಾರ್ಯ ಕೂಡ. ಅದರಲ್ಲೂ ಯುದ್ಧಗಳು ನಿಂತು ಹೋಗುತ್ತಿರುವ ಸಮಯದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹಳದಿ ಲೋಹ ಚಿನ್ನಕ್ಕೆ ಡಿಮ್ಯಾಂಡ್ ಕುಸಿದಿದೆ. ಈ ಕಾರಣಕ್ಕೆ ಚಿನ್ನದ ಬೆಲೆ 70,000 ರೂಪಾಯಿಗೆ ಶೀಘ್ರದಲ್ಲೇ ಕುಸಿತ ಕಾಣುವ ಸಾಧ್ಯತೆ ಇದೆ ಅಂತಾ ಚರ್ಚೆ ನಡೀತಿದೆ. ನವೆಂಬರ್ 2025 ಮುಗಿಯುವ ಒಳಗಾಗಿ ಚಿನ್ನದಲ್ಲಿ ಭಾರಿ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಭಾರತದಲ್ಲಿ ಬಂಗಾರಕ್ಕೆ ಭಾರಿ ಬೇಡಿಕೆ ಇದೆ, ಅದರಲ್ಲೂ ನಮ್ಮ ಕರ್ನಾಟಕದ ಕನ್ನಡಿಗರು ಕೂಡ ಚಿನ್ನ ಲೋಹವನ್ನ ಭಾರಿ ಪ್ರಮಾಣದಲ್ಲಿ ಖರೀದಿ ಮಾಡ್ತಾರೆ. ಹೀಗೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಇದ್ದು, ಚಿನ್ನದ ಬೆಲೆ ಈ ಎಲ್ಲ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುತ್ತಿತ್ತು. ಆದರೆ ಇದೀಗ 70,000 ರೂಪಾಯಿಗೆ ಮತ್ತೆ ಕುಸಿತ ಕಾಣುತ್ತಾ? ಅಂತಾ ಮಾರುಕಟ್ಟೆ ತಜ್ಞರು ಕಾಯುತ್ತಿದ್ದಾರೆ...
ಬಂಗಾರದ ಬೆಲೆ ಈ ತಿಂಗಳಲ್ಲೇ ಕುಸಿತ?
ಚಿನ್ನ & ಬೆಳ್ಳಿ ಬೆಲೆ ಏರಿಕೆ ಕಾರಣಕ್ಕೆ ಶುಭಕಾರ್ಯ ಮಾಡುವವರು ಕೂಡ ಚಿಂತೆ ಮಾಡುವಂತೆ ಆಗಿದೆ. ಈ ಹಿನ್ನೆಲೆ ಚಿನ್ನದ ಬೆಲೆ ಕುಸಿತ ಕಾಣಲಿ ಅಂತಾ ಕಾಯುತ್ತಿರುವ ಜನರ ಸಂಖ್ಯೆಯೇ ಜಾಸ್ತಿ ಆಗಿದ್ದು, ಎಷ್ಟೋ ಜನರು ಮದುವೆ ಸೇರಿದಂತೆ ಸಾಕಷ್ಟು ಶುಭಕಾರ್ಯ ಮುಂದೆ ಹಾಕುತ್ತಿರುವ ಉದಾಹರಣೆಗಳು ಕೂಡ ಈಗ ಕೇಳಿ ಬರುತ್ತಿವೆ. ಇಂತಹ ಸಮಯದಲ್ಲೇ ಚಿನ್ನ ಮಾರುಕಟ್ಟೆ ತಜ್ಞರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಅಂದಹಾಗೆ 2025 ಸೆಪ್ಟೆಂಬರ್ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗುವ ನಿರೀಕ್ಷೆ ಕೂಡ ಈಗ ಮೂಡಿದೆ. ಆದರೆ ಮತ್ತೊಂದು ಕಡೆಯಲ್ಲಿ ಡೊನಾಲ್ಡ್ ಟ್ರಂಪ್ ಮಾಡುತ್ತಿರುವ ಹಠ ಇದೀಗ ಚಿನ್ನ & ಬೆಳ್ಳಿ ಬೆಲೆ ಭಾರಿ ಏರಿಕೆಗೆ ಕಾರಣವಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಮತ್ತೊಂದು ಕಡೆ ಭಾರತ ಈಗ ಚೀನಾ ಜೊತೆಗೆ ಮಾತುಕತೆ ಆರಂಭ ಮಾಡಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕುತೂಹಲ ಕೆರಳುತ್ತಿದೆ...












Click it and Unblock the Notifications