Gold Price: ಚಿನ್ನದ ಬೆಲೆ 60,000 ರೂಪಾಯಿಗೆ ಮಹಾ ಕುಸಿತ ಸಾಧ್ಯತೆ...
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿ ಹೋಗಿದೆ, ಬಂಗಾರ ಖರೀದಿ ಹೇಗೆ ಮಾಡುವುದು? ಅಂತಾ ನೀವು ಯೋಚನೆ ಮಾಡ್ತಾ ಇದ್ದೀರಾ? ಈಗಾಗಲೇ 1,00,000 ರೂಪಾಯಿ ಮುಟ್ಟಿರುವ ಚಿನ್ನದ ಬೆಲೆ, ಇನ್ನಷ್ಟು ಏರಿಕೆ ಕಾಣುತ್ತೆ? ಅನ್ನೋ ಚಿಂತೆ ಕಾಡ್ತಾ ಇದೆಯಾ... ಹೀಗೆ ಚಿನ್ನದ ಬೆಲೆ ಆಕಾಶಕ್ಕೆ ಮುಟ್ಟುತ್ತಿದೆ ಅಂತಾ ಚಿಂತೆ ಮಾಡುತ್ತಿದ್ದ ಜನರಿಗೆ ಇದೀಗ ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಅದು ಏನು ಅಂದ್ರೆ, ಚಿನ್ನದ ಬೆಲೆ 60,000 ರೂಪಾಯಿಗೆ ಮಹಾ ಕುಸಿತ ಸಾಧ್ಯತೆ...
ಚಿನ್ನ ಅಂದ್ರೆ ಆಭರಣ ಪ್ರಿಯರಿಗೆ ಸಖತ್ ಖುಷಿ, ಆದರೆ ಚಿನ್ನ ಬೆಲೆಯಲ್ಲಿ ಭಾರಿ ಏರಿಕೆ ಆಗಿದ್ದ ಹಿನ್ನೆಲೆಯಲ್ಲಿ ಆಭರಣ ಪ್ರಿಯರು ಬೇಸರ ಮಾಡಿಕೊಂಡಿದ್ದರು. ಅಲ್ಲದೆ ಯಾವಾಗಪ್ಪ ಚಿನ್ನದ ಬೆಲೆ ಕಡಿಮೆ ಆಗುತ್ತೆ ಅಂತಾ ಕಾಯುತ್ತಿದ್ದರು. ಈ ಸಮಯದಲ್ಲಿ ದಿಢೀರ್ ಕುಸಿದು ಬೀಳಲು ಆರಂಭಿಸಿದ್ದ ಚಿನ್ನದ ಬೆಲೆ ಇನ್ನೇನು ಮಧ್ಯಮ ವರ್ಗ ಹಾಗೂ ಬಡವರ ಕೈಗೆ ಎಟುಕಲಿದೆ ಅಂತಾನೇ ಎಲ್ಲರೂ ಕಾಯುತ್ತಿದ್ದರು. ಆದರೆ ಮತ್ತೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿತ್ತು. ಹೀಗದ್ದಾಗಲೇ, ಚಿನ್ನದ ಬೆಲೆ 60,000 ರೂಪಾಯಿಗೆ ಮಹಾ ಕುಸಿತ ಸಾಧ್ಯತೆ...

ಚಿನ್ನದ ಬೆಲೆ 60,000 ರೂಪಾಯಿಗೆ ಮಹಾ ಕುಸಿತ...
25 ವರ್ಷಗಳ ಹಿಂದೆ 4000 ರೂಪಾಯಿ ಇದ್ದ ಚಿನ್ನದ ಬೆಲೆ ಈಗ ಭರ್ಜರಿ 1 ಲಕ್ಷ ರೂಪಾಯಿ ದಾಟಿದೆ. ಈ ಮೂಲಕ ಚಿನ್ನ ಖರೀದಿ ಮಾಡುವುದೇ ಬಡವರು & ಮಧ್ಯಮ ವರ್ಗದ ಜನರಿಗೆ ಕಷ್ಟವಾಗಿ ಹೋಗಿದೆ. ಚಿನ್ನ, ಚಿನ್ನ, ಹೀಗೆ ಹಳದಿ ಲೋಹ ಚಿನ್ನ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಆಭರಣದಿಂದ ಹಿಡಿದು ಗೋಲ್ಡ್ ಬಿಸ್ಕೇಟ್ ತನಕ ಎಲ್ಲರಿಗೂ ಚಿನ್ನ ಇಷ್ಟ. ಚಿನ್ನ ಕಳೆದ ಕೆಲವು ತಿಂಗಳಿಂದ ಭಾರಿ ಏರಿಕೆ ಕಾಣುತ್ತಿದ್ದು, ಇದೀಗ ಮಾರುಕಟ್ಟೆಯಲ್ಲಿ ಕುಸಿದು ಬೀಳುವ ಲಕ್ಷಣಗಳು ಕಾಣುತ್ತಿವೆ ಅಂತಿದ್ದಾರೆ ತಜ್ಞರು. ಹಾಗಾದ್ರೆ ಚಿನ್ನ ಬೆಲೆ 60,000 ರೂಪಾಯಿಗೆ ಮಹಾ ಕುಸಿತ ಯಾವಾಗ ಕಾಣುತ್ತೆ? ಚಿನ್ನದ ಬೆಲೆ ಇಳಿಕೆಗೆ ಕಾರಣ ಏನು? ಈ ಮೂಲಕ ಚಿನ್ನದ ಬೆಲೆ ಬಡವರ ಕೈಗೆ & ಮಧ್ಯಮ ವರ್ಗದವರ ಕೈಗೆ ಸಿಗುತ್ತಾ? ಮುಂದೆ ಓದಿ.
ಬೆಂಗಳೂರಲ್ಲಿ ಇಂದು ಪ್ರತಿ 10 ಗ್ರಾಂ ಶುದ್ಧ ಚಿನ್ನ ಅಂದ್ರೆ 24 ಕ್ಯಾರೆಟ್ ಚಿನ್ನದ ಬೆಲೆ 1,00,150 ರೂಪಾಯಿ ಇದೆ. ಹಾಗೇ ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 91,800 ರೂಪಾಯಿ ಇದೆ. ಆದರೆ ಇದೀಗ ಚಿನ್ನ ಮಾರುಕಟ್ಟೆ ತಜ್ಞರು ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಎಂದರೆ, ಚಿನ್ನವು ಇಲ್ಲದೆ ಏನೂ ನಡೆಯಲ್ಲ. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಗೆ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿ ಹಲವು ಎಲೆಕ್ಟ್ರಾನಿಕ್ ಉಪಕರಣ ತಯಾರಿಕೆಗೂ ಕೂಡ ಚಿನ್ನ ಬೇಕೆ ಬೇಕಾಗುತ್ತದೆ. ಇದೆಲ್ಲಾ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ.
ಚಿನ್ನ ಸುಮಾರು 5000 ವರ್ಷಗಳಿಂದಲೂ ಮನುಷ್ಯರ ಜೀವನದಲ್ಲಿ & ವ್ಯವಹಾರದಲ್ಲಿ ಬೆರೆತು ಹೋಗಿದೆ. ಚಿನ್ನಇಲ್ಲದೆ ಮನುಷ್ಯರು ಜೀವನ ನಡೆಸಲು ಆಗೋದೆ ಇಲ್ಲ ಅನ್ನುವಷ್ಟು ಅವಲಂಬನೆ ಕೂಡ ಶುರುವಾಗಿದೆ. ಹಲವು ರೀತಿ ಚಿನ್ನದ ಉಪಯೋಗ ಪಡೆಯಬಹುದಾಗಿದೆ ಇದೇ ಕಾರಣಕ್ಕೆ ಚಿನ್ನ ಅಂದ್ರೆ ಭಾರತೀಯರಿಗೆ ಇಷ್ಟ ಅಂತಾ ಹೇಳಬಹುದು. ಆದರೆ ಚಿನ್ನದ ಬೆಲೆ ಮಿತಿ ಮೀರಿ ಏರಿಕೆ ಕಂಡಿರುವ ಕಾರಣಕ್ಕೆ, ಶೀಘ್ರದಲ್ಲಿಯೇ ಬಂಗಾರದ ಬೆಲೆಯಲ್ಲಿ ಭಾರಿ ಕುಸಿತವನ್ನ ನಿರೀಕ್ಷೆ ಮಾಡಲಾಗುತ್ತಿದೆ. ಅದರಲ್ಲೂ ಚಿನ್ನದ ಬೆಲೆ 60,000 ರೂಪಾಯಿಗೆ ಮಹಾ ಕುಸಿತ ಯಾಕೆ ಕಾಣುತ್ತೆ ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ...
2025 ಡಿಸೆಂಬರ್ ಒಳಗೆ ಚಿನ್ನದ ಬೆಲೆಯಲ್ಲಿ...
2023 ಮತ್ತು 2024 ಪೂರ್ತಿ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಗೆ ಪ್ರಮುಖ ಕಾರಣ ಆಗಿದ್ದೇ ಯುದ್ಧಗಳು. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧ ಜೋರಾಗಿತ್ತು. ಇನ್ನೊಂದು ಕಡೆ ಇಸ್ರೇಲ್ ದೇಶ ಇರಾನ್ ಸೇರಿ ಲೆಬನಾನ್, ಸಿರಿಯಾ ಹಾಗೂ ಗಾಜಾ ಪಟ್ಟಿಯಲ್ಲಿ ಯುದ್ಧ ಮಾಡಿತ್ತು. ಹೀಗೆ ಮಧ್ಯಪ್ರಾಚ್ಯ ಭಾಗದಲ್ಲಿ ಈ ರೀತಿ ಯುದ್ಧ ಶುರುವಾದರೆ ದೊಡ್ಡ ಪರಿಣಾಮ ಎದುರಾಗುವುದು ಚಿನ್ನ ಮತ್ತು ಬೆಳ್ಳಿ ಬೆಲೆ ಮೇಲೆ. ಯಾಕೆ ಅಂದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾತ್ಕಾಲಿಕ ಆರ್ಥಿಕ ತುರ್ತು ಪರಿಸ್ಥಿತಿ ಉಂಟಾಗಿ, ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಆದರೆ ಇದೀಗ ಮಧ್ಯಪ್ರಾಚ್ಯ ಅಂದ್ರೆ, ಇಸ್ರೇಲ್ ಯುದ್ಧ ನಡೆಸುತ್ತಿದ್ದ ದೇಶಗಳು ಸೈಲೆಂಟ್ ಆಗಿವೆ. ಹಾಗೇ ಜಗತ್ತಿನಲ್ಲಿ ಹಲವು ಜಾಗಗಳಲ್ಲಿ ಹೊಸ ಹೊಸ ಚಿನ್ನದ ನಿಕ್ಷೇಪಗಳು ಪತ್ತೆ ಆಗಿವೆ. ಹೀಗಾಗಿ 2025 ಡಿಸೆಂಬರ್ ಒಳಗೆ ಚಿನ್ನದ ಬೆಲೆಯಲ್ಲಿ ಮಹಾ ಕುಸಿತ ನಿರೀಕ್ಷೆ ಮಾಡಲಾಗುತ್ತಿದೆ.












Click it and Unblock the Notifications