Gold Price: ಚಿನ್ನದ ಬೆಲೆ 1 ಲಕ್ಷ ರೂಪಾಯಿ ಸಮೀಪಕ್ಕೆ, ಶುರುವಾಯ್ತು ಹೊಸ ಆತಂಕ!

ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ಇಸ್ರೇಲ್ & ಇರಾನ್ ನಡುವೆ ಇನ್ನೇನು ಯುದ್ಧ ಶುರುವಾಯ್ತು ಅಂತಾ ಹೇಳಿದಾಗ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕೂಡ ಕಂಡುಬರುತ್ತಿದೆ. ಬಂಗಾರಕ್ಕೆ ವಿಪರೀತ ಡಿಮ್ಯಾಂಡ್ ಬಂದಿರುವ ಹಿನ್ನೆಲೆ ಈ ರೀತಿಯಾಗಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ. ಇನ್ನೇನು 1 ಲಕ್ಷ ರೂಪಾಯಿ ಸಮೀಪಕ್ಕೆ ಚಿನ್ನ ಬಂದು ಕೂತಿದೆ. ಹಾಗಾದ್ರೆ ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂಪಾಯಿ ಆಗುತ್ತಾ? ಇದು ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಾ? ಬನ್ನಿ ತಿಳಿಯೋಣ.

ನಮ್ಮ ಹಿರಿಯರು ಒಂದು ಮಾತು ಹೇಳುತ್ತಿದ್ದರು, ಚಿನ್ನದ ಮೇಲೆ ಬಂಡವಾಳ ಹಾಕಿದರೆ ಎಂದಿಗೂ ನಷ್ಟ ಆಗುವುದಿಲ್ಲ ಅಂತಾ. ಯಾಕಂದ್ರೆ ಕಾಲಕ್ಕೆ ತಕ್ಕಂತೆ ಚಿನ್ನದ ಬೆಲೆ ಏರಿಕೆಯ ಕಾಣುತ್ತಾ ಬಂದಿದೆ. ಅದರಲ್ಲೂ ಚಿನ್ನದ ಬೆಲೆ ಕಳೆದ ಒಂದು ದಶಕ ಅಂದ್ರೆ 10 ವರ್ಷದಲ್ಲಿ ಭರ್ಜರಿ ಏರಿಕೆ ಕಂಡಿದೆ. ಹೀಗಾಗಿ 10 ವರ್ಷಗಳ ಹಿಂದೆ ಚಿನ್ನದ ಮೇಲೆ ಹೂಡಿಕೆ ಮಾಡಿ, ಇದೀಗ ಲಾಭ ಪಡೆಯುತ್ತಿರುವ ಹೂಡಿಕೆದಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗೆ ಚಿನ್ನವು ವರ್ಷದಿಂದ ವರ್ಷಕ್ಕೆ ಮುಗಿಲು ಮುಟ್ಟುತ್ತಿರುವ ಸಮಯದಲ್ಲೇ ಮತ್ತೊಂದು ಮಾಹಿತಿ ಈಗ ಸಂಚಲನ ಸೃಷ್ಟಿಸಿದೆ. ಹಾಗಾದ್ರೆ, ಶೀಘ್ರದಲ್ಲೇ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಆಗುತ್ತಾ?

Gold Price Is Near To Reach The 1 Lakh Rupees Mark

ಚಿನ್ನದ ಬೆಲೆ 1 ಲಕ್ಷ ರೂಪಾಯಿ?

ಬಂಗಾರದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿರುವುದು ನೋಡಿದರೆ, ಶೀಘ್ರದಲ್ಲೇ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಆಗುತ್ತಾ ಹೋಗಿ ಇನ್ನೇನು 1 ಲಕ್ಷ ರೂಪಾಯಿಗೆ ಕೂಡ ಚಿನ್ನ ಏರಿಕೆ ಕಾಣುತ್ತಾ? ಎಂಬ ಪ್ರಶ್ನೆ ಇದೀಗ ಮೂಡಿದೆ. ಅದರಲ್ಲೂ ಬಂಗಾರಕ್ಕೆ ಇದೀಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು ಗಮನ ಸೆಳೆದಿದೆ. ಹಾಗಾದ್ರೆ ಸದ್ಯಕ್ಕೆ ಎಷ್ಟಿದೆ ಚಿನ್ನದ ಬೆಲೆ? ಬನ್ನಿ ತಿಳಿಯೋಣ.

ಬಂಗಾರದ ಬೆಲೆ ಈಗ ಎಷ್ಟಿದೆ?

ಚಿನ್ನದ ಬೆಲೆ ದಸರಾ ಹಬ್ಬದ ಹಿನ್ನೆಲೆ ಭಾರಿ ಏರಿಕೆ ಕಂಡ ಕಾರಣಕ್ಕೆ ಇದೀಗ 22 ಕ್ಯಾರೆಟ್ ಚಿನ್ನದ ಬೆಲೆ ಇದೀಗ ಪ್ರತಿ 10 ಗ್ರಾಂಗೆ 71,200 ರೂಪಾಯಿ ಆಗಿದೆ, ಹಾಗೇ 24 ಕ್ಯಾರೆಟ್‌ನ ಚಿನ್ನವು ಪ್ರತಿ 10 ಗ್ರಾಂಗೆ 77,700 ರೂಪಾಯಿ ತಲುಪಿದೆ. ಈ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ 24 ಕ್ಯಾರೆಟ್‌ನ ಚಿನ್ನವು ಪ್ರತಿ 10 ಗ್ರಾಂಗೆ 1 ಲಕ್ಷ ರೂಪಾಯಿ ತಲುಪುತ್ತಾ? ಎಂಬ ಪ್ರಶ್ನೆ ಕೂಡ ಮೂಡಿದೆ.

ಮತ್ತೊಂದು ಕಡೆ ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಕೂಡ ಏರಿಕೆಯನ್ನ ಕಾಣುತ್ತಿದ್ದು, ಬೆಳ್ಳಿ ಬೆಲೆ ಬರೋಬ್ಬರಿ 97,000 ರೂಪಾಯಿಗೆ ತಲುಪಿದೆ. ಇದು ಹೂಡಿಕೆಯನ್ನ ಮಾಡಿದ್ದವರಿಗೆ ಸಖತ್ ಖುಷಿ ಕೊಟ್ಟಿದ್ದರೆ, ಮತ್ತೊಂದು ಕಡೆ ಬೆಳ್ಳಿ ಖರೀದಿ ಮಾಡಲು ಕಾಯ್ತಾ ಇದ್ದವರಿಗೆ ಶಾಕ್ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+