Gold Price: ಚಿನ್ನ ಬೆಲೆ 5,500 ರೂಪಾಯಿ ಏರಿಕೆ, ಆಭರಣ ಪ್ರಿಯರಿಗೆ ಆಘಾತ...

ಚಿನ್ನದ ಬೆಲೆ ಕುಸಿದು ಬೀಳುತ್ತದೆ ಅಂತಾ ಕಾಯುತ್ತಿದ್ದರೆ ಮತ್ತೊಂದು ಕಡೆ ಚಿನ್ನ ಕೈಗೆ ಸಿಗದ ರೀತಿ ಏರಿಕೆ ಕಾಣುತ್ತಲೇ ಇದೆ. ಕಳೆದ ಕೆಲವು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದ ಹಿನ್ನೆಲೆ ಆಭರಣ ಪ್ರಿಯರಿಗೆ ಆಘಾತವೇ ಎದುರಾಗಿತ್ತು. ಆದರೆ ಸತತ 2 ದಿನಗಳ ಕಾಲ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಕೂಡ ಕುಸಿತ ಕಾಣುವ ನಿರೀಕ್ಷೆ ಇತ್ತು. ಆದರೆ ಇಂದು ದಿಢೀರ್ ಚಿನ್ನದ ಬೆಲೆ 5,500 ರೂಪಾಯಿ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಆಘಾತ...

ಚಿನ್ನ ಅಂದ್ರೆ ಆಭರಣ ಪ್ರಿಯ ಮಹಿಳೆಯರಿಗೆ ಮಾತ್ರವಲ್ಲದೆ ಹೂಡಿಕೆ ಮಾಡುವ ಹುಡುಗರು & ಹುಡುಗಿಯರಿಗೆ ಕೂಡ ಸಿಕ್ಕಾಪಟ್ಟೆ ಇಷ್ಟ. ಯಾಕಂದ್ರೆ ಚಿನ್ನ ಖರೀದಿ ಮಾಡಿ ಅಥವಾ ಆ ಚಿನ್ನದ ಮೇಲೆ ಹೂಡಿಕೆ ಮಾಡಿರುವ ಯಾರಿಗೇ ಆಗಿದ್ದರೂ ನಷ್ಟ ಆಗಿಲ್ಲ ಎನ್ನಬಹುದು. ಈ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ಹೀಗಿದ್ದಾಗಲೇ ಚಿನ್ನ ಖರೀದಿ ಮಾಡೋಣ, ಈ ಮೂಲಕ 2025 ರಲ್ಲಿ ಯುಗಾದಿಗೆ ಮೊದಲು ಭರ್ಜರಿಯಾಗಿ ಹೊಸ ವರ್ಷಕ್ಕೆ ಎಂಟ್ರಿ ಕೊಡೋಣ ಅಂತಾ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಆಘಾತ ಎದುರಾಗಿದೆ!

Gold Price Is Increased On March 8th Of 2025

ಚಿನ್ನ ಬೆಲೆ 5,500 ರೂಪಾಯಿ ಏರಿಕೆ!

ಚಿನ್ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುವತ್ತ ಮುಂದೆ ನುಗ್ಗುತ್ತಿದ್ದು, ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ ಕಾರಣಕ್ಕೆ ಆಭರಣ ಪ್ರಿಯ ಸಾಮಾನ್ಯ ಜನ ಸಾಕಷ್ಟು ಆಘಾತ ಎದುರಿಸುವಂತೆ ಆಗಿದೆ. ಚಿನ್ನದ ಬೆಲೆ ಇನ್ನೇನು ಭಾರಿ ಪ್ರಮಾಣದಲ್ಲಿ ಕುಸಿತ ಕಾಣಬಹುದು ಎಂಬ ನಿರೀಕ್ಷೆಯೂ ಮೂಡಿರುವ ಸಮಯದಲ್ಲೇ ಚಿನ್ನದ ಬೆಲೆ ಒಂದೇ ದಿನದಲ್ಲಿ 5,500 ರೂಪಾಯಿ ಏರಿಕೆಯಾಗಿ ಭಾರಿ ದೊಡ್ಡ ಆಘಾತ ನೀಡಿದೆ! ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?

ಬಂಗಾರದ ಬೆಲೆ ದಿಢೀರ್ ಏರಿಕೆ!

ಚಿನ್ನ ಬೆಲೆ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಬಂದ ಕಾರಣ ಚಿನ್ನ ಬೆಲೆ ಹೆಚ್ಚಾಗುತ್ತಿದೆ. ಒಂದೇ ದಿನ 24 ಕ್ಯಾರೆಟ್ ಶುದ್ಧ ಚಿನ್ನವು 5,500 ಪ್ರತಿ 100 ಗ್ರಾಂಗೆ ಏರಿಕೆ ಕಂಡು, 8,77,100 ರೂಪಾಯಿ ತಲುಪಿದೆ. ಹಾಗೇ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ, 550 ರೂಪಾಯಿ ಏರಿಕೆ ಕಂಡು 87,710 ರೂಪಾಯಿಗೆ ತಲುಪಿದೆ.

ಹೀಗಿದ್ದಾಗಲೇ, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 5,000 ರುಪಾಯಿ ಏರಿಕೆ ಕಂಡಿದೆ. ಹೀಗಾಗಿ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 8,04,000 ರೂಪಾಯಿ ಆಗಿದೆ. ಹಾಗೇ, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 500 ರೂಪಾಯಿ ಏರಿಕೆ ಕಂಡು 80,400 ರೂಪಾಯಿಗೆ ತಲುಪಿದೆ. ಹೀಗಾಗಿ ಆಭರಣ ಪ್ರಿಯರಲ್ಲಿ ಬೆಲೆ ಏರಿಕೆ ಇದೀಗ ಆತಂಕ ಹುಟ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+