Gold Price: ಚಿನ್ನದ ಬೆಲೆ 8,000 ಸಾವಿರ ರೂಪಾಯಿ ಏರಿಕೆ, ಒಂದೇ ದಿನ ಆಭರಣ ಪ್ರಿಯರಿಗೆ ಆಘಾತ...
ಚಿನ್ನ.. ಚಿನ್ನ.. ಚಿನ್ನ ಅಂತಾ ಕನವರಿಸುತ್ತಿದ್ದ ಆಭರಣ ಪ್ರಿಯರಿಗೆ ಹೊಸ ವರ್ಷದ ದಿನ ಬಂಗಾರ ಖರೀದಿ ಮಾಡುವುದು ಕಷ್ಟವಾಗಿತ್ತು. ಯಾಕಂದ್ರೆ 2025ರ ಹೊಸ ವರ್ಷದ ಮೊದಲ ದಿನವೇ ಚಿನ್ನದ ಬೆಲೆ ಭರ್ಜರಿ ಏರಿಕೆ ಕಂಡಿತ್ತು. ಹಾಗೇ ಚಿನ್ನದ ಬೆಲೆ ಜನವರಿ 2ನೇ ತಾರೀಖು ಕೂಡ ಏರಿಕೆ ಕಂಡಿತ್ತು. ಹೀಗಿದ್ದಾಗ ಇಂದು ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯು ಕಂಡು ಬಂದಿದ್ದು, ಚಿನ್ನ ಬೆಲೆ 8,000 ಸಾವಿರ ರೂಪಾಯಿ ಏರಿಕೆಯಾಗಿ ಒಂದೇ ದಿನ ಆಭರಣ ಪ್ರಿಯರಿಗೆ ಆಘಾತ...
ಹೌದು, ಚಿನ್ನ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಆಭರಣ ಪ್ರಿಯ ಮಹಿಳೆ & ಹುಡುಗಿಯರ ಕನಸು ಕೆ.ಜಿ. ಕೆಜಿ ಚಿನ್ನ ಇರಬೇಕು ಎಂಬುದು. ಇಷ್ಟೆಲ್ಲಾ ಚಿನ್ನ ಖರೀದಿಗೆ ಗಂಡಸರ ಜೇಬು ದುಡ್ಡಿನಿಂದ ತುಂಬಿರಬೇಕು, ಅದು ಬಿಡಿ ಈಗಿನ ಬೆಲೆ ಏರಿಕೆ ನೋಡಿದರೆ ಕೇವಲ 1 ಗ್ರಾಂ ಚಿನ್ನ ಖರೀದಿ ಮಾಡೋದಕ್ಕೂ ಹಿಂದೆ & ಮುಂದೆ ಯೋಚನೆ ಮಾಡುವಂತೆ ಆಗಿದೆ. ಹೀಗಿದ್ದಾಗಲೇ, ಇಂದು ಒಂದೇ ದಿನ ಚಿನ್ನದ ಬೆಲೆ 8,000 ಸಾವಿರ ರೂಪಾಯಿ ಏರಿಕೆ ಆಗಿಬಿಟ್ಟಿದೆ! ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?

ಚಿನ್ನದ ಬೆಲೆ 8,000 ಸಾವಿರ ರೂಪಾಯಿ ಏರಿಕೆ!
22 ಕ್ಯಾರಟ್ ಚಿನ್ನ ಅಂದ್ರೆ ಆಭರಣ ಚಿನ್ನದ ಬೆಲೆಯು ಇಂದು ಭರ್ಜರಿ ಏರಿಕೆಯನ್ನ ಕಂಡಿದೆ. ಚಿನ್ನದ ಬೆಲೆ ನಿನ್ನೆ ಕೂಡ ಹೆಚ್ಚಾಗಿದೆ ಇಂದು ಕೂಡ 8,000 ರೂಪಾಯಿ ಏರಿಕೆಯನ್ನ ಕಂಡಿದೆ. ಬೆಲೆ ಏರಿಕೆ ನಂತರ ಭಾರತದಲ್ಲಿ ಈಗ ಪ್ರತಿ 100 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯು 7,26,000 ರೂಪಾಯಿಗೆ ತಲುಪಿದೆ. ಈ ಮೂಲಕ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 800 ರೂಪಾಯಿ ಏರಿಕೆ ಕಂಡು 72,600 ರೂಪಾಯಿಗೆ ತಲುಪಿದೆ ಆಭರಣ ಚಿನ್ನದ ಬೆಲೆ.
ಬೆಳ್ಳಿ ಬೆಲೆ 2,000 ರೂಪಾಯಿ ಏರಿಕೆ!
ಮತ್ತೊಂದು ಕಡೆ 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಕೂಡ ಭಾರಿ ಏರಿಕೆ ಕಂಡಿದೆ. ಇದೀಗ 24 ಕ್ಯಾರಟ್ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 870 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಇದೀಗ 24 ಕ್ಯಾರಟ್ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 79,200 ರೂಪಾಯಿ ಆಗಿದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಬೆಳ್ಳಿ ಬೆಲೆ ಕೂಡ ಭರ್ಜರಿ ಏರಿಕೆ ಕಂಡಿದೆ. ಈಗ ಒಂದೇ ದಿನ ಬೆಳ್ಳಿ ಬೆಲೆ 2,000 ರೂಪಾಯಿ ಏರಿಕೆ ಕಂಡಿದೆ.
ಅಂದಹಾಗೆ ಇಂದು ಒಂದೇ ದಿನ ಬೆಳ್ಳಿ ಬೆಲೆ ಬರೋಬ್ಬರಿ 2,000 ರೂಪಾಯಿ ಪ್ರತಿ 1 ಕೆಜಿಗೆ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 92,500 ರೂಪಾಯಿ ತಲುಪಿಬಿಟ್ಟಿದೆ. ಈ ಮೂಲಕ ಚಿನ್ನ & ಬೆಳ್ಳಿಯ ಬೆಲೆಗೆ ಜನರು ತತ್ತರಿಸಿದ್ದಾರೆ. ಆದರೆ ಹೂಡಿಕೆದಾರರಿಗೆ ಚಿನ್ನ & ಬೆಳ್ಳಿ ಭರ್ಜರಿ ಕೊಡುಗೆ ನೀಡಿವೆ. ಯಾಕೆ ಅಂದ್ರೆ, ಚಿನ್ನ & ಬೆಳ್ಳಿ ಮೇಲೆ ಹೂಡಿಕೆ ಮಾಡಿದವರಿಗೆ ಇದೀಗ ಭಾರಿ ಲಾಭ ಸಿಗುತ್ತಿದೆ.












Click it and Unblock the Notifications