ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಈಗ ಎಷ್ಟಿದೆ ಚಿನ್ನದ ಬೆಲೆ ತಿಳಿಯಿರಿ... Gold Price

ಚಿನ್ನದ ಬೆಲೆಯಲ್ಲಿ ಕುಸಿತ ಮುಂದುವರಿದಿದೆ, 1,00,000 ರೂಪಾಯಿ ಮೀರಿ ಹೋಗಿದ್ದ ಇದೇ ಚಿನ್ನದ ಬೆಲೆ ಮತ್ತೊಮ್ಮೆ 1,00,000 ಕೆಳಗೆ ಕುಸಿದು ಬಿದ್ದಿದೆ. ಅದರಲ್ಲೂ ಆಭರಣ ಪ್ರಿಯರಿಗೆ ಈ ಸುದ್ದಿ ಖುಷಿಯನ್ನು ನೀಡಿದ್ದು, ಚಿನ್ನದ ಮೇಲೆ ಹೂಡಿಕೆ ಮಾಡಲು ಕಾಯುತ್ತಿದ್ದ ಹೂಡಿಕೆದಾರರಿಗೆ ಕೂಡ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

ಚಿನ್ನ ದೇವರು ಅಂತಾ ಕರೆದರೂ ತಪ್ಪು ಆಗಲ್ಲ, ಯಾಕಂದ್ರೆ ನಮಗೆ ಕಷ್ಟ ಬಂದಾಗ & ಸಂಬಂಧಿಕರು ಆ ಕಷ್ಟದ ಸಮಯದಲ್ಲಿ ಸಹಾಯ ಮಾಡದೇ ಇರುವಾಗ ಇದೇ ಚಿನ್ನ ಅಂದ್ರೆ ಬಂಗಾರವೇ ನಮ್ಮ ಕೈಹಿಡಿದು ಕಾಪಾಡುತ್ತದೆ. ಹೀಗಾಗಿಯೇ ಭಾರತೀಯರು ಚಿನ್ನಕ್ಕೆ ಅತ್ಯುತ್ತಮ ಸ್ಥಾನ ನೀಡಿದ್ದು, ಚಿನ್ನವನ್ನ ಪೂಜ್ಯ & ಉನ್ನತ ವಸ್ತು ಅಂತಾ ನೋಡುತ್ತಾರೆ. ಆದರೆ ಇಂತಹ ಅತ್ಯುತ್ತಮ ವಸ್ತು ಚಿನ್ನದ ಬೆಲೆ ಮಾತ್ರ ದಿನದಿಂದ ದಿನಕ್ಕೆ ಆಕಾಶ ಮುಟ್ಟುತ್ತಲೇ ಇತ್ತು. ಹೀಗೆ ಚಿನ್ನದ ಬೆಲೆ ಏರಿಕೆ ಬಗ್ಗೆ ಟೆನ್ಷನ್ ತಗೊಂಡಿದ್ದ ಜನರಿಗೆ ಈ ಸಮಯದಲ್ಲಿ ಭರ್ಜರಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆ ಭಾರಿ ಕುಸಿತ ಕಾಣುತ್ತಿದೆ...

Gold Price Is Decreasing And Buyers Are Happy For This Reason

ಚಿನ್ನ ಬೆಲೆ ಈಗ ಎಷ್ಟಿದೆ ತಿಳಿಯಿರಿ...

ಭಾರತದಲ್ಲಿ ಭಾರಿ ದೊಡ್ಡ ಪ್ರಮಾಣದ ಚಿನ್ನ ಶೇಖರಣೆ ಆಗಿದ್ದು, ಭಾರತೀಯರು ಕೂಡ ಚಿನ್ನ ಖರೀದಿಗೆ ಮೊದಲ ಆದ್ಯತೆ ನೀಡುತ್ತಾರೆ. ಚಿನ್ನ.. ಚಿನ್ನ.. ಚಿನ್ನ... ಹೀಗೆ ಚಿನ್ನ ಅಂದ್ರೆ ಭಾರತೀಯರಿಗೆ ಸಿಕ್ಕಾಪಟ್ಟೆ ಇಷ್ಟ ಕೂಡ. ಮದುವೆ ಆಗಲಿ, ಇನ್ನು ಯಾವುದೇ ಶುಭಕಾರ್ಯ ನಡೆಯಲಿ ಚಿನ್ನ ಬೇಕೆ ಬೇಕು ಅನ್ನೋದು ಭಾರತೀಯರ ನಂಬಿಕೆ. ಹೀಗಿದ್ದಾಗಲೇ, ಚಿನ್ನದ ಬೆಲೆಯಲ್ಲಿ ಭಾರಿ ಮಟ್ಟೆದ ಕುಸಿತ ಕಾಣುತ್ತಿದ್ದರೆ ಜನರಿಗೆ ಎಷ್ಟು ಖುಷಿ ಆಗಬೇಡ ಹೇಳಿ? ಅದೇ ರೀತಿ ಚಿನ್ನದ ಬೆಲೆ ಈಗ ಕುಸಿತ ಕಾಣುತ್ತಿದ್ದು, ಚಿನ್ನದ ಈಗಿನ ಬೆಲೆ ತಿಳಿಯಲು ಮುಂದೆ ಓದಿ...

89,150 ರೂಪಾಯಿಗೆ ತಲುಪಿದ ಚಿನ್ನ...

ಹೌದು, ಬೆಂಗಳೂರಿನಲ್ಲಿ ಇದೀಗ 24 ಕ್ಯಾರೆಟ್ ಚಿನ್ನ ಅಂದ್ರೆ ಶುದ್ಧ ಚಿನ್ನ ಅಂತಾ ಕರೆಯುವ ಅಪರಂಜಿ ಚಿನ್ನದ ಬೆಲೆ 97,260 ರೂಪಾಯಿಗೆ ಇಳಿಕೆ ಕಂಡಿದೆ. ಇದರ ಜೊತೆಗೆ ಮತ್ತೊಂದು ಖುಷಿ ಖುಷಿ ಸುದ್ದಿಯು ಏನಂದ್ರೆ 22 ಕ್ಯಾರೆಟ್ ಅಂದ್ರೆ ಆಭರಣ ಚಿನ್ನದ ಬೆಲೆಯಲ್ಲಿ ಕೂಡ ಭಾರಿ ಇಳಿಕೆ ಕಾಣುತ್ತಾ ಇದ್ದು, ಈಗ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 89,150 ರೂಪಾಯಿಗೆ ತಲುಪಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆ 10 ಗ್ರಾಂ 1,077 ರೂಪಾಯಿ ಆಗಿದ್ದು, ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆ ಏರಿಕೆ ಆಗುವ ನಿರೀಕ್ಷೆ ದಟ್ಟವಾಗಿದೆ. ಈ ಕಾರಣಕ್ಕೆ ಹೂಡಿಕೆದಾರರನ್ನು ಕೂಡ ಈಗ ಬೆಳ್ಳಿ ಸಾಕಷ್ಟು ಆಕರ್ಷಣೆ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+