Gold Price: ಚಿನ್ನದ ಬೆಲೆಯಲ್ಲಿ ಸತತ ಕುಸಿತ, ಇನ್ನಷ್ಟು ಇಳಿಕೆಯಾಗುತ್ತಾ ಬಂಗಾರ?

ಚಿನ್ನ.. ಚಿನ್ನ.. ಅಂತಾ ಕನವರಿಸುತ್ತಿರುವ ಆಭರಣ ಪ್ರಿಯರಿಗೆ ಅಕ್ಟೋಬರ್ ತಿಂಗಳಿನಲ್ಲಿ ಒಂದಷ್ಟು ಗುಡ್‌ನ್ಯೂಸ್ ಸಿಕ್ಕಿತ್ತು. ಯಾಕಂದ್ರೆ ಚಿನ್ನದ ಬೆಲೆಯಲ್ಲಿ ಒಂದಷ್ಟು ಕುಸಿತ ಕಂಡು ಅಕ್ಟೋಬರ್ ತಿಂಗಳಲ್ಲಿ ಸಿಹಿಸುದ್ದಿ ಸಿಕ್ಕಿತ್ತು. ಇಂತಹ ಸಮಯದಲ್ಲೇ ಇಸ್ರೇಲ್ & ಲೆಬನಾನ್ ನಡುವೆ ಯುದ್ಧ ಜೋರಾಗುತ್ತಿದ್ದು, ಇರಾನ್ ಕೂಡ ಯುದ್ಧದ ಅಖಾಡಕ್ಕೆ ಎಂಟ್ರಿಯಾಗಿದೆ. ಹೀಗಿದ್ದಾಗ ಬಂಗಾರದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಕೂಡ ಜಾಸ್ತಿ ಆಗುತ್ತಿದೆ. ಹಾಗಾದ್ರೆ ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಾಣುತ್ತಾ? ಅಥವಾ ಚಿನ್ನ ಮತ್ತೆ ಏರಿಕೆ ಆಗುತ್ತಾ? ಬನ್ನಿ ತಿಳಿಯೋಣ.

ಚಿನ್ನದ ಬೆಲೆಯಲ್ಲಿ ಏರಿಳಿತ ಉಂಟಾದರೆ ಮೊದಲಿಗೆ ತಲೆ ಕೆಡಿಸಿಕೊಳ್ಳುವುದೇ ಮಧ್ಯಮ ವರ್ಗ. ಯಾಕಂದ್ರೆ ಚಿನ್ನದ ಖರೀದಿಯಲ್ಲಿ ಮಧ್ಯಮ ವರ್ಗದ ಜನರೇ ಮುಂದೆ ಇರುತ್ತಾರೆ. ಇನ್ನು ಈ ವಿಚಾರದಲ್ಲಿ ಸ್ಥಿತಿವಂತರು ದೂರ ಇದ್ದು, ಚಿನ್ನ ಖರೀದಿ ಬದಲು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡರೆ ಆಭರಣ ಪ್ರಿಯ ಮಹಿಳೆಯರು ಅದರಲ್ಲೂ, ಮಧ್ಯಮ ವರ್ಗದ ಮಹಿಳೆಯರು ಚಿಂತೆ ಮಾಡುತ್ತಾರೆ.

Gold Price Is Decreased Slightly On October 2nd Week Of 2024

ಯಾಕಂದ್ರೆ, ಈ ಚಿನ್ನವನ್ನು ಖರೀದಿ ಮಾಡುವವರ ಪೈಕಿ ಮಧ್ಯಮ ವರ್ಗದ ಮಹಿಳೆಯರೇ ಮುಂದೆ ಇರುತ್ತಾರೆ. ಇನ್ನು ಇದೀಗ ಮದುವೆಗಳ ಸೀಸನ್ ಕೂಡ ಶುರುವಾಗಿದ್ದು, ಇಂತಹ ಸಮಯದಲ್ಲೇ ಚಿನ್ನ ಖರೀದಿ ಮಾಡುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಹಾಗಾದ್ರೆ ಇದೀಗ ಚಿನ್ನ ಇಳಿಕೆ ಕಾಣುತ್ತಾ? ಮಾಹಿತಿಗಾಗಿ ಮುಂದೆ ಓದಿ.

ಬಂಗಾರದ ಬೆಲೆಯಲ್ಲಿ ಏರಿಳಿತ?

ಚಿನ್ನದ ಮಾರುಕಟ್ಟೆಯಲ್ಲಿ ಈಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಮೇಲೆ 70,240 ರೂಪಾಯಿ ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಮೇಲೆ 76,630 ರೂಪಾಯಿ ಇದೆ. ಮತ್ತೊಂದು ಕಡೆ, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 57,470 ರೂಪಾಯಿ ಇದೆ. ಹೀಗಿದ್ದಾಗ ಬೆಳ್ಳಿ ಬೆಲೆ ಕೂಡ ಪ್ರತಿ ಕೆಜಿಗೆ 93,900 ರೂಪಾಯಿ ಆಗಿದ್ದು, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುವ ನಿರೀಕ್ಷೆಯನ್ನೇ ಇಟ್ಟುಕೊಳ್ಳಲಾಗಿದೆ. ಅಲ್ಲದೆ ಹಬ್ಬಗಳು ಕೂಡ ಮುಕ್ತಾಯ ಆಗಲಿರುವ ಹಿನ್ನೆಲೆ ಚಿನ್ನ ಕುಸಿಯುವ ಸಾಧ್ಯತೆ ದಟ್ಟವಾಗಿದೆ.

ಶುಭಕಾರ್ಯ ನಡೆಯಲು ಚಿನ್ನ ಅತ್ಯಗತ್ಯ!

ಚಿನ್ನ.. ಚಿನ್ನ.. ಚಿನ್ನ.. ಮಹಿಳೆಯರಿಗೆ ಈ ವಸ್ತುವಿನ ಮೇಲೆ ಸಾಕಷ್ಟು ಪ್ರೀತಿ ಇರುತ್ತದೆ. ಚಿನ್ನದ ಬಗ್ಗೆ ಹೇಳುತ್ತಾ ಹೋದರೆ ಒಂದು ಪುಸ್ತಕ ಬರೆಯಬಹುದು. ಯಾಕಂದ್ರೆ ಈ ಅಮೂಲ್ಯ ವಸ್ತು ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಸಾಕಷ್ಟು ರೀತಿಯ ಆಧಾರವಾಗಿದೆ. ಸಾವಿರಾರು ವರ್ಷಗಳಿಂದ ಕೂಡ ಮನುಷ್ಯರ ಜೀವನದಲ್ಲಿ ಚಿನ್ನ ಬೆರೆತು ಹೋಗಿದೆ. ಈ ಪೈಕಿ ಭಾರತೀಯ ಸಂಪ್ರದಾಯ ಪ್ರಕಾರ, ಯಾವುದೇ ರೀತಿಯ ಶುಭಕಾರ್ಯ ನಡೆಯಲು ಚಿನ್ನ ಅತ್ಯಗತ್ಯ. ಚಿನ್ನ ಇಲ್ಲದೆ ಶುಭಕಾರ್ಯ ನಡೆಯುವುದಿಲ್ಲ ಎನ್ನಬಹುದು. ಈ ಸಮಯದಲ್ಲೇ, ಹಬ್ಬಗಳು ಕೂಡ ಬಂದಿದ್ದು ಚಿನ್ನದ ಬೆಲೆಯಲ್ಲಿ ಕುಸಿತ ಕಾಣಲಿ ಅಂತಾ ಮಧ್ಯಮ ವರ್ಗದ ಚಿನ್ನ ಪ್ರಿಯರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+