Gold Price: ಆಭರಣ ಪ್ರಿಯರಿಗೆ ಭರ್ಜರಿ ಸುದ್ದಿ, ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ... ಬೆಲೆ ಎಷ್ಟಿದೆ ತಿಳಿಯಿರಿ!

ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿದೆ ಅಂತಾ ಸದಾ ಚಿಂತೆಯಲ್ಲಿದ್ದ ಜನರಿಗೆ ಇದೀಗ, ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿರುವುದು ಭಾರಿ ಖುಷಿ ನೀಡಿದೆ. ಅಂದಹಾಗೆ ಮದುವೆಯ ಸೀಸನ್ ಆರಂಭಕ್ಕೆ ಮೊದಲು ಸಾಕಷ್ಟು ಜನರು ಚಿನ್ನ ಖರೀದಿಗೆ ಆರ್ಡರ್ ನೀಡಲು ಕಾಯುತ್ತಾ ಇದ್ದರು. ಆದರೆ ಬಂಗಾರದ ಬೆಲೆ ಸತತವಾಗಿ ಏರಿಕೆ ಕಂಡಿದ್ದ ಹಿನ್ನೆಲೆ ಬೇಸರ ವ್ಯಕ್ತವಾಗಿತ್ತು. ಹೀಗಿದ್ದಾಗ ದಿಢೀರ್ ಚಿನ್ನದ ಬೆಲೆಯಲ್ಲಿ ಸತತ ಕುಸಿತ ಎದುರಾಗುತ್ತಿದೆ. ಹಾಗಾದರೆ ಇದೀಗ ಚಿನ್ನದ ಬೆಲೆ ಎಷ್ಟು ಕುಸಿತ ಕಂಡಿದೆ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಅಕ್ಟೋಬರ್ ತಿಂಗಳಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ ಬಂದಿತ್ತು, ಹೀಗೆ ಭರ್ಜರಿ ಏರಿಕೆಯ ಕಂಡಿತ್ತು ಚಿನ್ನ. ಆದ್ರೆ ಇದೀಗ ನಿಧಾನವಾಗಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. ಹೀಗಾಗಿ ಚಿನ್ನ ಖರೀದಿಗೆ ಕಾದು ಕುಳಿತಿದ್ದ ಚಿನ್ನ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಅದರಲ್ಲೂ ಇನ್ನೇನು ಶುರು ಆಗಲಿರುವ ಮದುವೆ ಸೀಸನ್‌ಗೂ ಮೊದಲು ಕಡಿಮೆ ಬೆಲೆಗೆ ಚಿನ್ನ ಖರೀದಿ ಮಾಡಲು ಇದರಿಂದ ಸುಲಭ ಆಗಲಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಬಂಗಾರದ ಜೊತೆಗೆ ಬೆಳ್ಳಿ ಬೆಲೆ ಕಥೆ ಏನಾಯ್ತು? ಮುಂದೆ ಓದಿ.

Gold Price Is Decreased On November 10th Of 2024

ಚಿನ್ನ & ಬೆಳ್ಳಿ ಬೆಲೆ ಎಷ್ಟಿದೆ?

22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 72,750 ರೂಪಾಯಿಗೆ ತಲುಪಿದೆ. ಹಾಗೇ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 79,360 ರೂಪಾಯಿ ಆಗಿದೆ. ನಿನ್ನೆ ಒಂದೇ ದಿನ 22 ಕ್ಯಾರಟ್‌ನ 100 ಗ್ರಾಂ ಚಿನ್ನದ ಬೆಲೆಯು 1,000 ರೂಪಾಯಿ & 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯು 100 ಗ್ರಾಂಗೆ 1100 ರೂಪಾಯಿ ಕುಸಿತ ಕಂಡಿತ್ತು. ಹೀಗಾಗಿ ಚಿನ್ನದ ಬೆಲೆ ಮತ್ತೊಮ್ಮೆ ಇಳಿಕೆಯನ್ನ ಕಂಡಿದೆ. ಆದರೆ ದೀಪಾವಳಿ ಹಬ್ಬದ ಸಮಯದಲ್ಲಿ ಭಾರಿ ಏರಿಕೆ ಕಂಡಿದ್ದ ಬಂಗಾರದ ಬೆಲೆ ಆಭರಣ ಪ್ರಿಯರಲ್ಲಿ ಟೆನ್ಷನ್ ತಂದಿತ್ತು. ಹಾಗಾದ್ರೆ ಇದೀಗ ಬೆಳ್ಳಿ ಬೆಲೆ ಎಷ್ಟಿದೆ? ಮುಂದೆ ಓದಿ.

ಬೆಳ್ಳಿ ಬೆಲೆ ಎಷ್ಟಿದೆ ಈಗ?

ಬಂಗಾರದ ಬೆಲೆಗಿಂತ ವೇಗವಾಗಿ ಏರಿಕೆ ಕಾಣುತ್ತಿರುವ ಬೆಳ್ಳಿ ಮುಂದಿನ ದಿನಗಳಲ್ಲಿ ಚಿನ್ನವನ್ನ ಕೂಡ ಮೀರಿಸಿ ಮುಂದೆ ನುಗ್ಗಲಿದೆ ಎನ್ನಲಾಗುತ್ತಿದೆ. ಅಂದಹಾಗೆ ಬೆಳ್ಳಿ ಬೆಲೆ ಮೊನ್ನೆ ಮೊನ್ನೆ ಬರೋಬ್ಬರಿ 1,00,000 ರೂಪಾಯಿ ಅಂದ್ರೆ ಒಂದು ಲಕ್ಷ ರೂಪಾಯಿಗೆ ತಲುಪಿ ಆಭರಣದ ಖರೀದಿಗೆ ಕಾಯುತ್ತಿದ್ದವರಿಗೆ ಆಘಾತ ನೀಡಿತ್ತು. ಆದರೆ ಇದೀಗ ಬೆಳ್ಳಿ ಬೆಲೆ ಭಾರಿ ಕುಸಿತವನ್ನ ಕಾಣುತ್ತಿರುವ ಪರಿಣಾಮ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 94,000 ರೂಪಾಯಿ ಆಗಿದ್ದು, ಹಾಗೂ ಬೆಳ್ಳಿ ಬೆಲೆ ಪ್ರತಿ 100 ಗ್ರಾಂಗೆ 9,400 ರೂಪಾಯಿ ಆಗಿದೆ.

ಚಿನ್ನದ ಬೆಲೆ ಏರಿಕೆ ಆಗಿದ್ದು ಏಕೆ?

ಯುದ್ಧ ಶುರುವಾದಾಗ ಮೊದಲು ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ ಎನ್ನಬಹುದು. ಹೀಗಾಗಿ ಯುದ್ಧ ಶುರುವಾದ ತಕ್ಷಣ ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹಣವನ್ನ ಬದಲಾಯಿಸಿ ಸಂಗ್ರಹ ಮಾಡಲು ಜನರು & ಆಡಳಿತ ನಡೆಸುವ ಸರ್ಕಾರಗಳು ಕೂಡ ಮುಂದಾಗುತ್ತವೆ.

ಹೀಗಿದ್ದಾಗ ಇಸ್ರೇಲ್ & ಇರಾನ್ ನಡುವೆ ಘೋರ ಯುದ್ಧದ ಭಯ ಆವರಿಸಿದ್ದ ಸಮಯದಲ್ಲಿ ಚಿನ್ನದ ಬೆಲೆ & ಬೆಳ್ಳಿ ಬೆಲೆ ಭಾರಿ ಏರಿಕೆ ಕಂಡಿತ್ತು, ಆ ನಂತರ ದಸರಾ & ದೀಪಾವಳಿ ಕಾರಣಕ್ಕೆ ಚಿನ್ನದ ಬೆಲೆಯು ಮೇಲೆ ಹೋಗಿತ್ತು. ಆದರೆ ಇದೀಗ ನಿಧಾನವಾಗಿ ಕುಸಿತ ಕಾಣುತ್ತಿದೆ ಚಿನ್ನ & ಬೆಳ್ಳಿ. ಹೀಗಾಗಿ ಮದುವೆಗೆ ಮೊದಲೇ ಚಿನ್ನ & ಬೆಳ್ಳಿ ಆರ್ಡರ್ ಮಾಡಲು ಜನರಿಗೆ ಕೂಡ ಸುಲಭವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+