Gold Price: ಚಿನ್ನದ ಬೆಲೆಯಲ್ಲಿ ದಿಢೀರ್ ಇಳಿಕೆ, ಈಗ ಎಷ್ಟಿದೆ ಬೆಲೆ?
ಚಿನ್ನ ಖರೀದಿ ಮಾಡಬೇಕು, ಆದರೆ ಬೆಲೆ ಏರಿಕೆ ಆಗುತ್ತಿದೆ ಅಂತಾ ಚಿಂತೆ ಮಾಡುತ್ತಿದ್ದವರಿಗೆ ಇದೀಗ ಭಾರಿ ಭರ್ಜರಿ ಸುದ್ದಿ ಸಿಗುತ್ತಿದೆ. ಸತತವಾಗಿ ಬಂಗಾರದ ಬೆಲೆ ಏರಿಕೆ ಕಂಡಿದ್ದರಿಂದ ಟೆನ್ಷನ್ ಜಾಸ್ತಿ ಆಗಿದ್ದು, ಹಾಗೇ ಮತ್ತೊಂದು ಕಡೆ ಚಿನ್ನದ ಬೆಲೆ ಇನ್ನಷ್ಟು ಜಾಸ್ತಿ ಆಗುತ್ತದೆ ಅನ್ನೋ ಭಯ ಕೂಡ ಆಭರಣ ಪ್ರಿಯರಲ್ಲಿ ಕಾಡುತ್ತಿತ್ತು. ಅದರಲ್ಲೂ ಮದುವೆ & ಶುಭಕಾರ್ಯ ನಡೆಸಲು, ಚಿನ್ನಕ್ಕೆ ಆರ್ಡರ್ ಕೊಡಲು ಕಾಯುತ್ತಿದ್ದ ಜನರಿಗೆ ಕೂಡ ಚಿನ್ನದ ಬೆಲೆಯಲ್ಲಿನ ಏರಿಕೆ ಭಾರಿ ತಲೆಬಿಸಿ ತಂದಿತ್ತು ಮಾರಾಯ್ರೆ, ಆದರೆ ಇದೀಗ ಚಿನ್ನದ ಬೆಲೆ ಕುಸಿಯುತ್ತಾ ಸಾಗಿದೆ!
ಚಿನ್ನ ಮಹಿಳೆಯರಿಗೆ ಮಾತ್ರ ಅಲ್ಲ ಹೂಡಿಕೆ ಮಾಡುವವರಿಗೆ ಕೂಡ ತುಂಬಾ ಇಷ್ಟ. ಯಾಕಂದ್ರೆ ಚಿನ್ನ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬುದು ನಂಬಿಕೆ. ಹೀಗೆಯೇ ಚಿನ್ನದ ಮೇಲೆ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಭರ್ಜರಿ ಲಾಭವೂ ಸಿಗುತ್ತಿದೆ. ಚಿನ್ನದ ಬೆಲೆ ಕೂಡ ಭಾರಿ ಏರಿಕೆ ಕಾಣುತ್ತಿತ್ತು, ಆದರೆ ಇದೀಗ ದಿಢೀರ್ ಚಿನ್ನದ ಬೆಲೆಯಲ್ಲಿ ಭಾರಿ ಭರ್ಜರಿ ಕುಸಿತ ಕಾಣುತ್ತಿದೆ. ಹಾಗಾದ್ರೆ ಇದೀಗ ಕುಸಿತ ಕಂಡ ನಂತರ ಚಿನ್ನದ ಬೆಲೆ ಎಷ್ಟಿದೆ?

16,000 ರೂಪಾಯಿ ಭರ್ಜರಿ ಕುಸಿತ!
ಬಂಗಾರದ ಬೆಲೆ ಅಂತೂ ಇಂತೂ ಇಳಿಕೆಯನ್ನ ಕಾಣುತ್ತಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿರುವುದು ಜನರಿಗೆ ಕೂಡ ಖುಷಿ ನೀಡಿದೆ. 24 ಕ್ಯಾರಟ್ ಅಪರಂಜಿ ಚಿನ್ನ ಅಥವಾ 24 ಕ್ಯಾರಟ್ ಶುದ್ಧ ಚಿನ್ನ ಇದೀಗ ಪ್ರತಿ 1 ಕೆಜಿ.ಗೆ ಬರೋಬ್ಬರಿ 16,000 ರೂಪಾಯಿ ಕುಸಿತ ಕಂಡಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ ಇದೀಗ, 7,09,000 ರೂಪಾಯಿ ಆಗಿದೆ. ಹಾಗೇ ಇದರ ಜೊತೆಗೆ 24 ಕ್ಯಾರಟ್ ಆಭರಣ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 7,73,500 ರೂಪಾಯಿ ಆಗಿದೆ.
ಬಂಗಾರ ಅಂದ್ರೆ ಭಾರತೀಯರಿಗೆ ಇಷ್ಟ!
ಚಿನ್ನ ಭಾರತೀಯರ ಪಾಲಿಗೆ ತುರ್ತು ಹಣ ಇದ್ದಂತೆ. ಯಾಕಂದ್ರೆ ಯಾವುದೇ ತುರ್ತು ಸ್ಥಿತಿ ಎದುರಾಗಿ ಪರದಾಟ ಶುರುವಾದಾಗ ಭಾರತೀಯರು ಮೊದಲು ತಮ್ಮ ಬಳಿ ಇರುವ ಚಿನ್ನ ಅಥವಾ ಬೆಳ್ಳಿ ಮೊರೆ ಹೋಗುತ್ತಾರೆ. ಯಾಕಂದ್ರೆ ತುರ್ತು ಸ್ಥಿತಿಯಲ್ಲಿ, ಎಲ್ಲಿಯೂ ಹಣ ಸಿಗದೇ ಇದ್ದರೆ ನಮ್ಮ ಬಳಿ ಇರುವ ಚಿನ್ನ & ಬೆಳ್ಳಿಗೆ ಡಿಮ್ಯಾಂಡ್ ಬರುತ್ತದೆ. ಹೀಗಾಗಿ ಬಹುತೇಕ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಮತ್ತೊಂದ್ಕಡೆ ಚಿನ್ನದ ಮೇಲೆ ಹೂಡಿಕೆ ಮಾಡುವ ಪ್ರತಿಯೊಬ್ಬರು ಲಾಭ ಪಡೆಯಲು ಹವಣಿಸುತ್ತಿದ್ದಾರೆ, ಯಾಕಂದ್ರೆ ಚಿನ್ನ ಈಗ ಅಷ್ಟು ದುಬಾರಿ ಆಗುತ್ತಿದೆ.












Click it and Unblock the Notifications