ಚಿನ್ನ ಬೆಲೆ 3,300 ರೂಪಾಯಿ ದಿಢೀರ್ ಏರಿಕೆ, ಇಂದು ಚಿನ್ನ ಬೆಲೆ ಎಷ್ಟಿದೆ... Gold Price
ಚಿನ್ನ.. ಚಿನ್ನ.. ಅಂತಾ ಬಂಗಾರ ಖರೀದಿ ಮಾಡಲು ಕಾಯುತ್ತಿದ್ದ ಮಹಿಳೆಯರಿಗೆ ಭಾರಿ ದೊಡ್ಡ ಆಘಾತ ಎದುರಾಗುತ್ತಿದೆ. 18 ವರ್ಷಗಳ ಹಿಂದೆ ಕೇವಲ 10,000 ರೂಪಾಯಿ ಇದ್ದ ಚಿನ್ನದ ಬೆಲೆ ಇದೀಗ ಬರೋಬ್ಬರಿ 1 ಲಕ್ಷ ರೂಪಾಯಿ ಮುಟ್ಟಿತ್ತು. ಹೀಗಿದ್ದಾಗ ಚಿನ್ನ ಬೆಲೆ ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿರುವ ಖುಷಿಯಲ್ಲಿ ಜನ ಇದ್ದರು, ಹೀಗಿದ್ದಾಗಲೇ ದಿಢೀರ್ ಚಿನ್ನ ಬೆಲೆ 3,300 ರೂಪಾಯಿ ಏರಿಕೆ ಕಂಡಿದೆ...
ಚಿನ್ನದ ಬೆಲೆ ಏರಿಕೆ ಪರಿಸ್ಥಿತಿ ನೋಡಿ, ಮತ್ತಷ್ಟು ದಿನ ಇದೇ ರೀತಿ ಚಿನ್ನ ಏರಿಕೆ ಕಂಡರೆ ಪರಿಸ್ಥಿತಿ ಹೇಗೆ? ಅಂತಾ ಚಿಂತೆ ಮಾಡುತ್ತಿದ್ದರು ಪ್ರಜೆಗಳು. ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದ ಕಾರಣ, ಬಡವರು & ಮಧ್ಯಮ ವರ್ಗದ ಜನರು ಮದುವೆ ಹಾಗೂ ಶುಭಕಾರ್ಯ ಮುಂದಕ್ಕೆ ಹಾಕುವ ಪರಿಸ್ಥಿತಿ ಕೂಡ ಬಂದಿತ್ತು. ಚಿನ್ನ ಬೆಲೆ ಯಾವಾಗ 1 ಲಕ್ಷ ರೂಪಾಯಿ ತಲುಪಿತ್ತೋ ಆಗಲೇ ಭಯ ಕೂಡ ಜಾಸ್ತಿ ಆಗಿತ್ತು. ಆದರೆ ಕಳೆದ ಕೆಲವು ದಿನದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕೂಡ ಕಾಣುತ್ತಾ ಬಂದಿತ್ತು, ಹೀಗಿದ್ದಾಲೇ ಮತ್ತೆ ಚಿನ್ನ ಬೆಲೆ ಏರಿಕೆ ಜನರಿಗೆ ಆಘಾತ ಕೊಟ್ಟಿದೆ!

ಚಿನ್ನ ಬೆಲೆ 3,300 ರೂಪಾಯಿ ದಿಢೀರ್...
ಪ್ರಪಂಚದ ಮೂಲೆ ಮೂಲೆಯಲ್ಲೂ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ, ಚಿನ್ನದ ಬೆಲೆಯಲ್ಲಿ ಈ ರೀತಿ ಏರಿಕೆ ಆಗುತ್ತಿರುವುದು ಆಭರಣ ಪ್ರಿಯರಿಗೆ ಒಂದು ರೀತಿಯಲ್ಲಿ ಆಘಾತ ನೀಡುತ್ತಿದೆ. ಈ ಸಮಯದಲ್ಲೇ ಮತ್ತೊಂದು ಕಡೆ ಚಿನ್ನದ ಬೆಲೆ ಇನ್ನೇನು 1 ಲಕ್ಷ 30 ಸಾವಿರ ರೂಪಾಯಿ ಪ್ರತಿ 10 ಗ್ರಾಂ ಆಗಲಿದೆ ಎಂಬ ಮಾಹಿತಿ ಓಡಾಡುತ್ತಿದೆ. ಹೀಗಿದ್ದಾಗಲೇ ದಿಢೀರ್ ಚಿನ್ನ ಬೆಲೆ 3,300 ರೂಪಾಯಿ ಏರಿಕೆ ಕಂಡಿದೆ...
ಚಿನ್ನದ ಬೆಲೆ ಇದೀಗ ಎಷ್ಟಿದೆ?
ಶುದ್ಧ ಚಿನ್ನ ಎಂದು ಕರೆಯಲಾಗುವ 24 ಕ್ಯಾರೆಟ್ ಚಿನ್ನ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 3,300 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ, ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 9,76,400 ರೂಪಾಯಿ ಆಗಿದೆ. ಜೊತೆಗೆ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 97,640 ರೂಪಾಯಿಗೆ ಏರಿಕೆ ಆಗಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ, ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 3,000 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 300 ರೂಪಾಯಿ ಏರಿಕೆಯಾಗಿದೆ. ಆಭರಣ ಚಿನ್ನ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 89,500 ರೂಪಾಯಿಗೆ ಮಾರಾಟ ಆಗುತ್ತಿದೆ.












Click it and Unblock the Notifications