Gold Price: ಚಿನ್ನದ ಬೆಲೆ 4,000 ರೂಪಾಯಿ ಕುಸಿತ, ಬಂಗಾರದ ಬೆಲೆ ಇಂದು ಎಷ್ಟಿದೆ? ಬೆಳ್ಳಿ ಬೆಲೆ ಕಥೆ ಏನಾಯ್ತು?
ಚಿನ್ನದ ಬೆಲೆಯು ಸತತವಾಗಿ ಕುಸಿತ ಕಾಣುತ್ತಿದ್ದು, ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಬಂಗಾರದ ಬೆಲೆಯ ಇಳಿಕೆಯಿಂದ ಚಿನ್ನ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಯಾಕೆ ಅಂದ್ರೆ ಇದು ಮದುವೆ & ನಿಶ್ಚಿತಾರ್ಥಗಳು ನಡೆಯುವ ಸಮಯ. ಹೀಗೆ ಶುಭ ಕಾರ್ಯಗಳು ನಡೆಯುವ ಸಮಯದಲ್ಲೇ ಚಿನ್ನ & ಬೆಳ್ಳಿ ಖರೀದಿ ಮಾಡುವ ಮಧ್ಯಮ ವರ್ಗದ ಜನ ಜಾಸ್ತಿ ಇದ್ದಾರೆ. ಹೀಗಿದ್ದಾಗ ಚಿನ್ನದ ಬೆಲೆ ಸತತವಾಗಿ ಕುಸಿತ ಕಾಣುತ್ತಿದ್ದು, ಇಂದು ಕೂಡ ಕುಸಿದು ಬಿದ್ದಿದೆ ಬಂಗಾರದ ಬೆಲೆ.
ಭಾರತದಲ್ಲಿ ಚಿನ್ನದ ಬೆಲೆ ಕಳೆದ 5 ರಿಂದ 6 ತಿಂಗಳಲ್ಲಿ ಸಾಕಷ್ಟು ಏರಿಕೆಯನ್ನು ಕಂಡಿತ್ತು. ಹೀಗಿದ್ದಾಗ ದಿಢೀರ್ ಲೋಕಸಭೆ ಚುನಾವಣೆ ಮುಕ್ತಾಯವಾದ ನಂತರ ಇಳಿಕೆ ಕಾಣುತ್ತಿದ್ದು, ಬಂಗಾರ ಮಾರುಕಟ್ಟೆಯಲ್ಲಿ ಸತತವಾಗಿ ಕುಸಿತ ಕಾಣುತ್ತಿದ್ದು ಹೂಡಿಕೆದಾರರಿಗು ಹೊಸ ಆತಂಕ ಶುರುವಾಗಿದೆ. ಚಿನ್ನ ಕೂಡ ಆರ್ಥಿಕತೆ ಒಂದು ಭಾಗ ಆಗಿದೆ. ಹೀಗಿದ್ದಾಗಲೇ ಚಿನ್ನದ ಬೆಲೆಯಲ್ಲಿ ಸತತ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡಿದೆ. ಅದರಲ್ಲೂ ಕಳೆದ ಒಂದು ವಾರ ಚಿನ್ನದ ಬೆಲೆ ಪದೇ ಪದೇ ಕುಸಿತ ಕಾಣುತ್ತಿದೆ. ಹಾಗೇ ಇಂದು ಕೂಡ ಚಿನ್ನದ ರೇಟ್ ಭಾರಿ ಇಳಿಕೆ ಕಂಡಿದೆ. ಹಾಗಾದ್ರೆ ಇದೀಗ ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ ಭಾರಿ ಕುಸಿತ!
ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಕುಸಿತ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 4,000 ರೂಪಾಯಿ ಇಳಿಕೆ ಕಂಡಿದೆ. ಹೀಗಾಗಿ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 400 ರೂ. ಕಡಿತವಾಗಿದೆ. ಆಭರಣ ಚಿನ್ನ ಬೆಲೆ ಕುಸಿತದ ನಂತರ, ಪ್ರತಿ 10 ಗ್ರಾಂಗೆ 63,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು ಕೂಡ ಇದೀಗ ಕುಸಿದು ಬಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 4,400 ರೂಪಾಯಿ ಇಳಿಕೆ ಕಂಡಿದೆ.
ಮುಂದಿನ ಪರಿಸ್ಥಿತಿ ಏನು?
24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 69,270 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. 18 ಕ್ಯಾರೆಟ್ ಚಿನ್ನದಲ್ಲಿ ಇದೀಗ ಪ್ರತಿ 100 ಗ್ರಾಂಗೆ 3,200 ಕುಸಿತ ಆಗಿದೆ. ಹೀಗಾಗಿ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 51,960 ರೂಪಾಯಿ ಆಗಿದೆ. ಇದರ ಜೊತೆ ಬೆಳ್ಳಿ ಬೆಲೆ ಕೂಡ ಇಳಿಕೆ ಕಂಡು ಬರುತ್ತಿದ್ದು ಮುಂದಿನ ಕೆಲವು ದಿನಗಳ ಕಾಲ ಇದೆ ರೀತಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ. ಬೆಳ್ಳಿಯ ಬೆಲೆ 6,500 ರೂಪಾಯಿ ಪ್ರತಿ ಕೆಜಿಗೆ ಕುಸಿತ ಕಂಡಿದ್ದು, 81,000 ರೂಪಾಯಿಗೆ ಬೆಳ್ಳಿ ಪ್ರತಿ ಕೆಜಿಗೆ ಮಾರಾಟ ಆಗ್ತಿದೆ. ಈ ಮೂಲಕ ಚಿನ್ನದ ಬೆಲೆ ಕುಸಿತ ಕಾಣುತ್ತಿರುವುದು ಸಂಚಲನ ಸೃಷ್ಟಿಸಿದೆ.
ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!
15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಮತ್ತೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗೆ, ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದ್ದು ಚಿನ್ನ ಬೆಲೆ ಈ ವರ್ಷದ ಅಂತ್ಯಕ್ಕೆ 1 ಲಕ್ಷ ರೂಪಾಯಿ ಆಸುಪಾಸಿಗೆ ಬರಬಹುದು ಎನ್ನಲಾಗಿತ್ತು. ಆದರೆ ಈಗ ನೋಡಿದರೆ ಚಿನ್ನದ ಬೆಲೆಯಲ್ಲಿ ಕುಸಿತ ಆರಂಭ ಆಗಿದೆ.












Click it and Unblock the Notifications