Gold Price on Sept 22: ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಹೆಚ್ಚಳ, ಇಂದಿನ ದರಪಟ್ಟಿ ಹೀಗಿದೆ
ಚಿನ್ನದ ಬೆಲೆಯಲ್ಲಿ ನಾಲ್ಕು ದಿನಗಳಿಂದ ಏರಿಕೆ ಆಗಿದ್ದು, ಇಂದು ಸೆಪ್ಟಂಬರ್ 22ರಂದು ಸೋಮವಾರ ಸಹ ಮತ್ತು ಗರಿಷ್ಠ ಬೆಲೆಗೆ ಏರಿಕೆ ಆಗಿದೆ. ವಿಶ್ವದ ದೊಡ್ಡ ದೇಶ ವಿದೇಶಿ ಸುಂಕ ನೀತಿ ಕಾರಣದಿಂದಾಗಿ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನ ಬೆಳ್ಳಿ ದರದಲ್ಲಿ ಏರಿಕೆ ಕ್ರಮ ಮುಂದುವರಿದಿದೆ. ಕಳೆದೊಂದು ವಾರದಲ್ಲಿ ಎರಡು ಬಾರಿ ಮಾತ್ರವೇ ಬಂಗಾರದ ದರ ಕುಸಿತ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.
ರಾಷ್ಟ್ರಗಳ ಮಧ್ಯದ ಹೋರಾಟ ಬೆನ್ನಲ್ಲೆ ಅಮೆರಿಕೆ ಕೈಗೊಂಡ ಸುಂಕ ಹೇರಿಕೆ ನೀತಿ ಹಾಗೂ ಇತರ ನಿರ್ಧಾರಗಳಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ದರ ಹೆಚ್ಚಾಯಿತು. ಭಾರತದಲ್ಲಿ ಚಿನ್ನದ ದರ ಒಂದು ಲಕ್ಷ ರೂಪಾಯಿ ಮೇಲೆಯೇ ಇದೆ. ಹಬ್ಬದ ದಿನಗಳು ಎದುರಾದ ಹಿನ್ನೆಲೆಯಲ್ಲಿ ಚಿನ್ನ ಖರೀದಿದಾರರಿಗೆ ಆಘಾತ ಉಂಟಾಗಿದೆ. ಹೀಗಿದ್ದರು ಬೇಡಿಕೆ ಹೆಚ್ಚುತ್ತಲೆ ಇದೆ. ಬೆಂಗಳೂರು, ಕರ್ನಾಟಕ ಸೇರಿದಂತೆ ಭಾರತದಲ್ಲಿ ಹೆಚ್ಚಳಗೊಂಡ ಚಿನ್ನದ ದರಪಟ್ಟಿ ವಿವರ ಹೀಗಿದೆ.

24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆಯು 1,12,150 ರೂಪಾಯಿಯಿಂದ ₹1,12,580ಗೆ ಹೆಚ್ಚಾಗಿದೆ. ಒಟ್ಟು 430 ರೂಪಾಯಿ ಏರಿಕೆ ಆಗಿದೆ. ಇದೇ ಚಿನ್ನದ 100 ಗ್ರಾಂ ದರಕ್ಕೆ ಬರೋಬ್ಬರಿ 4,300 ರೂಪಾಯಿ ಏರಿಕೆ ಕಂಡಿದೆ. ಈ ಚಿನ್ನ ಆಭರಣ ತಯಾರಿಕೆಗೆ ಬಳಕೆ ತೀರಾ ಕಡಿಮೆ.
ಇನ್ನೂ 22 ಕ್ಯಾರಟ್ ಚಿನ್ನದ ದರದಲ್ಲಿ ಸಹ ಮಹತ್ವದ ಬದಲಾವಣೆ ಆಗಿದೆ. 10 ಗ್ರಾಂ ಚಿನ್ನವು ಇಂದು 1,03,200 ರೂಪಾಯಿಗೆ ಹೆಚ್ಚಾಗಿದೆ. ನನ್ನೆ ಇದರ ದರವು 1,02,800 ರೂಪಾಯಿಗೆ ಇತ್ತು, ಒಂದೇ ದಿನಕ್ಕೆ 400 ರೂಪಾಯಿ ಏರಿಕೆ ಕಂಡಿದೆ ಎಂದು ಗೋಲ್ಡ್ ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ಚಿನ್ನಕ್ಕೆ 1,12,332 ರೂಪಾಯಿ ಹಾಗೂ 22 ಕ್ಯಾರಟ್ ಬಂಗಾರಕ್ಕೆ 1,02,982 ರೂಪಾಯಿ ದರವಿದೆ. ಬೆಳ್ಳಿ ದರದಲ್ಲೂ ಇಂದು ಹೆಚ್ಚಳವಾಗಿದೆ. ಒಂದೇ ದಿನಕ್ಕೆ 100 ಗ್ರಾಂ ಬೆಳ್ಳಿ ದರವು 500 ರೂಪಾಯಿ ಹೆಚ್ಚಾಗಿದ್ದು, ನೆನ್ನೆಗಿಂತ (₹13,360) ಇಂದು ಅಧಿಕ ₹13,860 ಬೆಲೆಗೆ ಬೆಳ್ಳಿ ಮಾರಾಟವಾಗಿದೆ. ಇನ್ನೂ 01 ಕೆಜಿ ಬೆಳ್ಳಿಯ ದರವು 5,000 ರೂಪಾಯಿ ಹೆಚ್ಚಾಗಿದ್ದು, ಇಂದು ಕೆಜಿ ಬೆಳ್ಳಿಗೆ 1,38,600 ರೂಪಾಯಿ ಇದೆ.
ನಗರವಾರು 22ಕೆ ಚಿನ್ನದ (10gm) ಬೆಲೆಪಟ್ಟಿ
* ಬೆಂಗಳೂರು (ಜಯನಗರ, ರಾಜಾಜಿನಗರ) 102,800 ರೂಪಾಯಿ
* ದೆಹಲಿ : 1,03,350 ರೂಪಾಯಿ
* ಜೈಪುರ : 1,03,350 ರೂಪಾಯಿ
* ಅಹಮದಾಬಾದ್: 1,03,250 ರೂಪಾಯಿ
* ಪುಣೆ : 1,03,250 ರೂಪಾಯಿ
* ಚೆನ್ನೈ :1,03,663.22 ರೂಪಾಯಿ












Click it and Unblock the Notifications