Gold Price Today: ಚಿನ್ನಾಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ, ಚಿನ್ನದ ಬೆಲೆ 27000 ರೂ. ಭರ್ಜರಿ ಏರಿಕೆ
ಬೆಂಗಳೂರು, ಡಿಸೆಂಬರ್ 27: ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಬೇಡಿಕೆ ಹೆಚ್ಚಿದಂತೆ ಬಂಗಾರ ಮತ್ತು ಬೆಳ್ಳಿಯ ಬೆಲೆಯು ಏರಿಕೆ ಆಗುತ್ತಿದ್ದು, ಗ್ರಾಹಕರಿಗೆ ಹೊಸ ವರ್ಷಕ್ಕೆ ಚಿನ್ನದ ಬೆಲೆಯು ಶಾಕ್ ನೀಡಿದೆ. ಚಿನ್ನದ ಬೆಲೆಯಲ್ಲಿ ಇಂದು ಶುಕ್ರವಾರ (ಡಿಸೆಂಬರ್ 27) ಭರ್ಜರಿ ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,150 ರೂ. ಹಾಗೂ 24 ಕ್ಯಾರಟ್ ಚಿನ್ನಕ್ಕೆ 7,800 ರೂಪಾಯಿ ಇದೆ.
ಚಿನ್ನ ಬೆಲೆಯಲ್ಲಿ ಹೊಯ್ದಾಟ ನೆನ್ನೆವರೆಗೂ ಮುಂದುವರಿದಿತ್ತು. ಇಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನೆನ್ನೆವರೆಗೂ ಕೊಂಚ ಹೆಚ್ಚಾಗಿದ್ದ ಬಂಗಾರದ ದರ ಇಂದು ಗಗನಕ್ಕೇರಿದೆ. ಇದು ಮದುವೆ, ಇನ್ನಿತರ ಸಮಾರಂಭಗಳನ್ನು ಹಮ್ಮಿಕೊಂಡು ಚಿನ್ನ ಖರೀದಿಸಲು ಇಚ್ಛಿಸಿದ್ದವರಿಗೆ ಆಘಾತ ನೀಡಿದೆ.

ಹೌದು, ಹೊಸ ವರ್ಷಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಬಹುದು. ಆಗ ಚಿನ್ನದ ಖರೀದಿಸಿದರಾಯಿತು ಎಂದುಕೊಂಡವರಿಗೆ ಬಂಗಾರದ ದರ ಶಾಕ್ ನೀಡಿದೆ. ಪ್ರತಿ ಗ್ರಾಂ ಗೆ 27 ರೂಪಾಯಿಯಂತೆ, 10 ಗ್ರಾಂ ಚಿನ್ನಕ್ಕೆ 270 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 2700 ರೂಪಾಯಿ ಏರಿಕೆ ಆಗಿದೆ.
ದೇಶದಲ್ಲಿ ಒಂದು ಕೆ.ಜಿ. ಚಿನ್ನಕ್ಕೆ ಡಿಸೆಂಬರ್ 27ರಂದು ಬರೊಬ್ಬರಿ 27000 ರೂಪಾಯಿ ಏರಿಕೆ ಆಗಿದೆ. ಈ ಏರಿಕೆ 24 ಕ್ಯಾರಟ್ ಚಿನ್ನಕ್ಕೆ ಸಂಬಂಧಿಸಿದ್ದಾಗಿದೆ. ಇನ್ನೂ 22 ಕ್ಯಾರಟ್ ಚಿನ್ನಕ್ಕೆ 25000 ರೂಪಾಯಿ ಹೆಚ್ಚಳವಾಗಿದೆ. ಇದು ಸಹ ಪ್ರತಿ ಗ್ರಾಂ ಚಿನ್ನದ ಲೆಕ್ಕದಲ್ಲಿ ನೋಡುವುದಾದರೆ 25 ರೂಪಾಯಿ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಡಿಸೆಂಬರ್ 26ರಂದು 10 ಗ್ರಾಂ ಚಿನ್ನಕ್ಕೆ 77, 730 ರೂಪಾಯಿ ಇತ್ತು. ಇಂದು ಅದರ ಬೆಲೆ 78000 ರೂಪಾಯಿಗೆ ಏರಿಕೆ ಆಗಿದೆ. ಬೆಂಗಳೂರು, ಚೆನ್ನ, ದೆಹಲಿ, ಕೊಚ್ಚಿ, ಕೇರಳ ಸೇರಿದಂತೆ ದೇಶದ ಮಹಾನಗರಗಳಲ್ಲಿ ಚಿನ್ನದ ಬೆಲೆಯು ಏರಿಕೆ ಆಗಿದೆ. ಆದರೆ ಗ್ರಾಹಕರು ಖರೀದಿಸುವಾಗಿ ವೇಸ್ಟೇಜ್, ಇತರ ಶುಲ್ಕ ಹೇರುವ ಕಾರಣ ಆಯಾ ಪ್ರದೇಶಗಳಲ್ಲಿ ಬೆಲೆಯಲ್ಲಿ ಕೊಂಚ ವ್ಯತ್ಯಾಸ ಆಗಬಹುದು. ಇದನ್ನು ಗಮನಿಸಿ ಗ್ರಾಹಕರು ಅಗತ್ಯ ಚಿನ್ನ ಖರೀದಿಸಿದರೆ ಒಳಿತು.
ಇನ್ನು ಬೆಳ್ಳಿಯ ಬೆಲೆ ನೋಡುವುದಾದರೆ, ಒಂದು ಗ್ರಾಂ ಬೆಳ್ಳಿಯ ಬೆಲೆ 92 ರೂಪಾಯಿ ಇದೆ. ಹತ್ತು ಗ್ರಾಂ ಬೆಳ್ಳಿಗೆ 9200 ರೂಪಾಯಿ ಇದ್ದು, ಒಂದು ಕೆ.ಜಿ. ಚಿನ್ನಕ್ಕೆ 92500 ರೂಪಾಯಿ ಇದೆ. ಈ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಸ್ಥಿರವಾಗಿದೆ.












Click it and Unblock the Notifications