Get Updates
Get notified of breaking news, exclusive insights, and must-see stories!

Gold Price: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ, ಈಗಿನ ಬೆಲೆ ಎಷ್ಟು?

ಚಿನ್ನ ಖರೀದಿ ಮಾಡಲು, ಚಿನ್ನದ ಬೆಲೆ ಕಡಿಮೆ ಆಗಲಿ ಅಂತಾ ಕಾಯುತ್ತಿದ್ದ ಜನರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಯಾಕಂದ್ರೆ ಚಿನ್ನದ ಬೆಲೆ ಕುಸಿಯುತ್ತಾ ಸಾಗಿದ್ದು, ಭರ್ಜರಿ ಇಳಿಕೆಯನ್ನ ಕಂಡಿದೆ. ಹಾಗಾದ್ರೆ ಇಂದು ಎಷ್ಟಿದೆ ಚಿನ್ನದ ಬೆಲೆ? ಚಿನ್ನ ಖರೀದಿ ಮಾಡಲು ಇದು ಸೂಕ್ತವಾದ ಸಮಯ ಆಗಿದೆಯಾ? ಚಿನ್ನದ ಬೆಲೆ ಮತ್ತಷ್ಟು ಕುಸಿತ ಕಾಣುತ್ತಾ? ಈ ಬಗ್ಗೆ ಪೂರ್ತಿ ಮಾಹಿತಿಯ ತಿಳಿಯಲು ಮುಂದೆ ಓದಿ.

ಚಿನ್ನ ಎಲ್ಲ ಶುಭ ಕಾರ್ಯಕ್ಕೂ ಬೇಕು, ಮದುವೆ ಮಾಡಿ ಅಥವಾ ಎಂಗೇಜ್‌ಮೆಂಟ್ ಮಾಡಿದ್ರು ಚಿನ್ನ ಬೇಕೆ ಬೇಕು. ಅದರಲ್ಲಿಯೂ ಚಿನ್ನಕ್ಕೆ ಭರ್ಜರಿ ಡಿಮ್ಯಾಂಡ್ ಕೂಡ ಕ್ರಿಯೇಟ್ ಆಗುತ್ತಿದ್ದು, ಚಿನ್ನದ ಬೆಲೆ ವಿಪರೀತ ಏರಿಕೆ ಕಾಣುತ್ತಿತ್ತು. ಹಿಗಿದ್ದಾಗ ಕಳೆದ ತಿಂಗಳು ಭಾರಿ ಏರಿಕೆಯನ್ನ ಕಂಡ ಚಿನ್ನದ ಬೆಲೆಯು ಇದೀಗ ಕುಸಿತದ ಹಾದಿ ಹಿಡಿದು, ಭಾರಿ ಪ್ರಮಾಣದಲ್ಲಿ ಪಾತಾಳಕ್ಕೆ ಬೀಳುತ್ತಿದೆ.

Gold Price Has Been Decreased This Much Rupees On 14th June Of 2024

ಇನ್ನೇನು 1 ಲಕ್ಷ ರೂಪಾಯಿ ತಲುಪಲಿದೆ ಎಂಬ ನಿರೀಕ್ಷೆಯಲ್ಲಿ ಇದ್ದವರಿಗೆ ಇದೀಗ ಚಿನ್ನದ ಇಳಿಕೆ ಖುಷಿ ಕೊಟ್ಟಿದೆ. ಆದರೆ ಚಿನ್ನದ ಬೆಲೆ ಇಳಿಕೆಯಿಂದ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ, ಒಂದಷ್ಟು ಬೇಸರ ಆಗಿದೆ ಅಷ್ಟೇ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ ದಾಖಲಾಗುತ್ತೆ ಎಂಬ ಮಾತುಗಳು ಕೂಡ ಈಗ ಕೇಳಿಬಂದಿವೆ. ಹಾಗಾದ್ರೆ ಇವತ್ತು ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಚಿನ್ನದ ಬೆಲೆ ಈಗ ಎಷ್ಟು?

22 ಕ್ಯಾರೆಟ್ ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಭಾರಿ ಕುಸಿತವನ್ನು ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 5,780 ರೂಪಾಯಿ ಕುಸಿತ ಕಂಡಿದೆ. ಇನ್ನುಳಿದಂತೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 578 ರೂಪಾಯಿ ಕಡಿತವಾಗಿದ್ದು. ಆಭರಣ ಚಿನ್ನದ ಬೆಲೆ ಕುಸಿತದ ನಂತರ 10 ಗ್ರಾಂಗೆ 65,358 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ, ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 6,300 ರೂಪಾಯಿ ಕುಸಿತ ಕಂಡಿದೆ.

ಚಿನ್ನಕ್ಕೆ ಭರ್ಜರಿ ರೇಟ್ ಗುರೂ!

ಈ ಮೂಲಕ ಈಗ 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 7,13,000 ರೂಪಾಯಿ ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. ಇದರ ಜೊತೆ ಬೆಳ್ಳಿ ಬೆಲೆಯಲ್ಲಿ ಕೂಡ ಇಳಿಕೆ ಕಂಡಬರುತ್ತಿದ್ದು ಮುಂದಿನ ಕೆಲ ದಿನಗಳ ಕಾಲ ಇದೇ ರೀತಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ. ಅದರಲ್ಲೂ ಚಿನ್ನ ಖರೀದಿ ಮಾಡುವುದಕ್ಕೆ ಇಷ್ಟು ದಿನಗಳ ಕಾಲ ಕಾದು ಕುಳಿತಿದ್ದ ಆಭರಣ ಪ್ರಿಯ ಮಹಿಳೆಯರಿಗೆ ಇದೀಗ ಭರ್ಜರಿ ಸುದ್ದಿ ಸಿಕ್ಕಂತಾಗಿದೆ.

ಹೂಡಿಕೆ ಮಾಡುವವರಿಗೆ ಟೆನ್ಷನ್?

ಚಿನ್ನದ ಬೆಲೆ ಮತ್ತೊಮ್ಮೆ ಭಾರಿ ಕುಸಿತ ಕಂಡಿದ್ದು, ಈ ಮೂಲಕ ಚಿನ್ನ ಕೊಳ್ಳಲು ಸುವರ್ಣಾವಕಾಶ ಒದಗಿ ಬಂದಿದೆ. ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಪಾತಾಳ ಸೇರುತ್ತಿದೆ ಹೀಗಿದ್ದಾಗ ನಿನ್ನೆ ಕೂಡ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದ್ದು, ಒಂದೇ ದಿನ ಚಿನ್ನದ ಬೆಲೆ ಬರೋಬ್ಬರಿ 2,700 ರೂಪಾಯಿ ಕುಸಿತ ಕಂಡಿದೆ. 15 ವರ್ಷಗಳಿಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆ ಸಾಕಷ್ಟು ಬದಲಾವಣೆ ಕಂಡಿದೆ. ಮುಂದಿನ ದಿನಗಳಲ್ಲಿ, ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ ಎನ್ನಲಾಗಿತ್ತು. ಹೀಗಿದ್ದರೂ, ಚಿನ್ನದ ಬೆಲೆ ಕುಸಿತದ ಕಡೆಗೆ ಮುಖ ಮಾಡುತ್ತಿರುವುದು ಹೂಡಿಕೆ ಮಾಡುವವರಿಗೆ ಟೆನ್ಷನ್ ಕೂಡ ಕೊಡುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+