Gold Price: ಚಿನ್ನದ ಬೆಲೆ ಕುಸಿತ, ಬೆಳ್ಳಿ ಕಥೆ ಏನಾಯ್ತು?
ಚಿನ್ನ & ಬೆಳ್ಳಿ ಬೆಲೆ ಮತ್ತೊಮ್ಮೆ ಏರಿಳಿತದ ಹಾದಿಗೆ ಮರಳಿದ್ದು, ಚಿನ್ನ ಖರೀದಿ ಮಾಡುವ ಜನರಿಗೆ ಇಂದು ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಯಾಕಂದ್ರೆ ನಿನ್ನೆ ಏರಿಕೆ ಕಂಡಿದ್ದ ಚಿನ್ನ, ಇಂದು ಕುಸಿತ ಕಂಡಿದ್ದು ಬಂಗಾರದ ಬೆಲೆ ಮತ್ತಷ್ಟು ಕಡಿಮೆ ಆಗಿದೆ. ಹಾಗಾದ್ರೆ ಚಿನ್ನ, ಬೆಳ್ಳಿ ಬೆಲೆ ಇಂದು ಎಷ್ಟಿದೆ? ಬೆಂಗಳೂರು & ಕರ್ನಾಟಕದಲ್ಲಿ ಚಿನ್ನ & ಬೆಳ್ಳಿ ರೇಟ್ ಎಷ್ಟು? ಪೂರ್ತಿ ಮಾಹಿತಿಗೆ ಮುಂದೆ ಓದಿ.
ಚಿನ್ನ ಮಾರುಕಟ್ಟೆಯಲ್ಲಿ ಸತತವಾಗಿ ಕುಸಿತ ಕಾಣುತ್ತಿದ್ದು, ಇದರಿಂದ ಹೂಡಿಕೆದಾರರಿಗೆ ಹೊಸ ಆತಂಕ ಶುರುವಾಗಿದೆ. ಯಾಕಂದ್ರೆ ಚಿನ್ನ ಕೂಡ ಆರ್ಥಿಕತೆಯ ಒಂದು ಭಾಗ ಆಗಿದೆ. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡಿದೆ ಅದ್ರಲ್ಲೂ ಕಳೆದ ಒಂದೆರಡು ವಾರದಿಂದ ನಿರಂತರವಾಗಿ ಚಿನ್ನ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಿದ್ದಾಗ ಮೊನ್ನೆ ಬಂಪರ್ ಆಫರ್ ಸಿಕ್ಕಿತ್ತು. ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯೂ ಆಗಿತ್ತು. ಹೀಗಿದ್ದಾಗ ಮತ್ತೆ ಚಿನ್ನದ ಬೆಲೆ ಹಿನ್ನಡೆ ಕಂಡಿದೆ. ಹಾಗಾದ್ರೆ ಚಿನ್ನದ ಬೆಲೆ ಮತ್ತೆ ಕುಸಿತ ಕಾಣುತ್ತಾ? ಮುಂದೆ ಓದಿ.

ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಹೇಗಿದೆ?
22 ಕ್ಯಾರೆಟ್ ಚಿನ್ನದ ಬೆಲೆ ಕುಸಿತ ಕಂಡಿದೆ, ಇದೇ ಚಿನ್ನವನ್ನು ಒಡವೆ ಅಥವಾ ಆಭರಣಗಳ ತಯಾರಿಕೆಗೆ ಬಳಸುತ್ತಾರೆ. ಈಗ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 100 ಗ್ರಾಂಗೆ 2,000 ರೂಪಾಯಿ ಕುಸಿತ ಕಂಡು ಹೀಗೆ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 200 ರೂಪಾಯಿ ಕಡಿತವಾಗಿದೆ. ಆಭರಣ ಚಿನ್ನ ಬೆಲೆ ಕುಸಿತದ ಬಳಿಕ ಪ್ರತಿ 10 ಗ್ರಾಂಗೆ 67,450 ರೂಪಾಯಿ ಇದ್ದು. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದು, ಚಿನ್ನ ಖರೀದಿಗೆ ಕಾಯುತ್ತಿದ್ದ ಜನರಿಗೆ ಖುಷಿ ಕೊಟ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,200 ರೂಪಾಯಿ ಕುಸಿತ ಕಂಡಿದೆ.
ಬೆಳ್ಳಿ ಬೆಲೆ ಹೇಗಿದೆ ಈಗ?
24 ಕ್ಯಾರೆಟ್ ಚಿನ್ನದ ಬೆಲೆ ಇದೀಗ 73,580 ರೂಪಾಯಿ ಆಗಿದ್ದು, 18 ಕ್ಯಾರೆಟ್‌ನ ಚಿನ್ನದ ಬೆಲೆ ಕೂಡ ಕುಸಿತ ಕಂಡಿದೆ. ಹೀಗೆ ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. ಇದರ ಜೊತೆಗೆ ಬೆಳ್ಳಿ ಬೆಲೆ ಏರಿಕೆ ಕಂಡಿದ್ದು, ಆದರೆ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಚಿನ್ನದ ಬೆಲೆ ಇಳಿಕೆ ಕಾಣುವ ನಿರೀಕ್ಷೆ ಇದೆ.
ಬೆಳ್ಳಿ ಬೆಲೆ ಸುಮಾರು 100 ರೂಪಾಯಿ ಪ್ರತಿ ಕೆಜಿಗೆ ಏರಿಕೆಯ ಕಂಡಿದ್ದು, 94,600 ರೂಪಾಯಿಗೆ ಬೆಳ್ಳಿ ಪ್ರತಿ ಕೆಜಿಗೆ ಮಾರಾಟ ಆಗುತ್ತಿದೆ. ಈ ಮೂಲಕ ಚಿನ್ನ & ಬೆಳ್ಳಿ ಬೆಲೆ ಜನರನ್ನ ಸೆಳೆಯುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಬೆಲೆ ಏರಿಳಿತ ಕಾಣಬಹುದು ಎನ್ನಲಾಗಿದ್ದು, ಇನ್ನೊಂದು ಕಡೆ ಷೇರು ಮಾರುಕಟ್ಟೆ ಕೂಡ ಇಂದು ಕುಸಿತ ಕಂಡಿದೆ.
ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆ ಏರಿಕೆ!
ಕಳೆದ 15 ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಬದಲಾವಣೆ ಆಗಿ ದೊಡ್ಡ ಮಟ್ಟದಲ್ಲಿ ಚಿನ್ನ ಏರಿಕೆ ಕಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಚಿನ್ನಕ್ಕೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆಲ್ಲಾ ಕಾರಣ ಏನೆಂದರೆ ಭೂಮಿಯ ಒಳಗೆ ಸಿಗುತ್ತಿದ್ದ ಚಿನ್ನ ಭಾಗಶಃ ಕಡಿಮೆ ಆಗುತ್ತಾ ಬರುತ್ತಿದೆ. ಹೀಗಾಗಿ ಗಣಿಗಾರಿಕೆ ನಡೆಸುವ ಸಾಧ್ಯತೆ ಕೂಡ ಕ್ಷೀಣಿಸುತ್ತಿದೆ. ಇದು ಕೂಡ ಚಿನ್ನದ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಚಿನ್ನದ ಬೆಲೆ ಈ ವರ್ಷದ ಅಂತ್ಯಕ್ಕೆ, 1 ಲಕ್ಷ ರೂಪಾಯಿ ಆಸುಪಾಸಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ತಜ್ಞರು.
5000 ವರ್ಷಗಳಿಂದ ಚಿನ್ನದ ಬಳಕೆ!
ಮನುಷ್ಯ ನಾಗರಿಕತೆ ಕಡೆಗೆ ಹೆಜ್ಜೆ ಹಾಕಿದ ನಂತರ ಚಿನ್ನವನ್ನು ಹೆಚ್ಚಾಗಿ ಬಳಸತೊಡಗಿದೆ. ಅದರಲ್ಲೂ ಚಿನ್ನದ ಬಳಕೆಗೆ ಸುಮಾರು 5000 ವರ್ಷಗಳ ಇತಿಹಾಸ ಇದೆ. ಹೀಗೆ ಚಿನ್ನವನ್ನ ಮನುಷ್ಯರು ಸಾವಿರಾರು ವರ್ಷಗಳಿಂದ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಈ ಹೊತ್ತಿಗೂ ಚಿನ್ನಕ್ಕೆ ಭಾರಿ ದೊಡ್ಡ ಗೌರವ ಮತ್ತು ಬೆಲೆ ಇದೆ. ಇತರ ಯಾವುದೇ ಲೋಹಕ್ಕೆ ಕೂಡ ಚಿನ್ನದಷ್ಟು ಮಾನ್ಯತೆ ನೀಡುವುದಿಲ್ಲ. ಆದರೆ ಚಿನ್ನಕ್ಕೆ ಮಾತ್ರ ಅತಿಹೆಚ್ಚು ಬೆಲೆಯು ಇದ್ದು, ಚಿನ್ನ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ಆಗುವುದು ಗ್ಯಾರಂಟಿ ಎನ್ನುತ್ತಾರೆ ತಜ್ಞರು.












Click it and Unblock the Notifications