Today Gold Rate: ಚಿನ್ನ ಖರೀದಿದಾರರಿಗೆ ನೆಮ್ಮದಿಯ ಸುದ್ದಿ, ಚಿನ್ನದ ದರ ದಿಢೀರ್ ಇಳಿಕೆ!
ಒಂದೆಡೆ ಭಾರತ-ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿರುವುದರ ನಡುವೆ ಚಿನ್ನ ಖರೀದಿದಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ನಾಲ್ಕೈದು ನಿರಂತರವಾಗಿ ಚಿನ್ನದ ದರ ಏರಿಕೆ ಕಂಡಿದ್ದರಿಂದ ಆಭರಣಪ್ರಿಯರು ಶಾಕ್‌ಗೆ ಒಳಗಾಗಿದ್ದರು. ಇದೀಗ ಚಿನ್ನದ ದರವು ದಿಢೀರನೆ ಭಾರೀ ಇಳಿಕೆ ಕಂಡಿದೆ. ನಿರಂತರ ದರ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಇದೀಗ ನಿಟ್ಟುಸಿರುಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರಗಳ ಮಾಹಿತಿ ಇಲ್ಲಿದೆ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂ.ಗೆ 9,835 ರೂಪಾಯಿ ಇದ್ದು ಗ್ರಾಂ ಮೇಲೆ 125 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ ಚಿನ್ನವು ಗ್ರಾಂಗೆ 9,015 ರೂಪಾಯಿ ಆಗಿದ್ದು, 115 ರೂ. ಕುಸಿತ ಕಂಡಿದೆ. 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ 7,376 ರೂಪಾಯಿಗೆ ಕಡಿಮೆಯಾಗಿದ್ದು, 94 ರೂಪಾಯಿ ತಗ್ಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,015 ರೂ.ಆಗಿದೆ, ನಿನ್ನೆ ಈ ದರ 9,130 ರೂಪಾಯಿ ಇತ್ತು. ಇಂದು 115 ರೂಪಾಯಿ ಕಡಿಮೆಯಾಗಿದೆ. 8 ಗ್ರಾಂ ಚಿನ್ನದ ದರ 72,120 ರೂಪಾಯಿಗೆ ಇಳಿದಿದೆ. 10 ಗ್ರಾಂ ಚಿನ್ನದ ದರ 90,150 ರೂಪಾಯಿ, 100 ಗ್ರಾಂ ಚಿನ್ನದ ದರವು 9,13,000 ರೂ.ಗಳಿಂದ 9,01,500 ರೂ.ಗೆ ತಗ್ಗಿದೆ. ಒಟ್ಟಾರೆ 11,500 ರೂಪಾಯಿವರೆಗೆ ದರ ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ 9,835 ರೂಪಾಯಿ, 8 ಗ್ರಾಂ.ಗೆ 78,680 ರೂಪಾಯಿ, 10 ಗ್ರಾಂ.ಗೆ 98,350 ರೂಪಾಯಿ, 100 ಗ್ರಾಂ.ಗೆ 9,83,500 ಆಗಿದ್ದು, ಬರೋಬ್ಬರಿ 12,500 ರೂಪಾಯಿ ತಗ್ಗಿದೆ. 18 ಕ್ಯಾರೆಟ್ ಚಿನ್ನದ ದರವು ಗ್ರಾಂ.ಗೆ 7,376 ರೂಪಾಯಿ, 8 ಗ್ರಾಂ ಚಿನ್ನದ ದರ 59,008, 10 ಗ್ರಾಂ ಚಿನ್ನದ ದರವು 73,760 ರೂಪಾಯಿ ಹಾಗೂ 100 ಗ್ರಾಂ ಚಿನ್ನ 7,37,600 ರೂಪಾಯಿಗೆ ಕುಸಿದಿದೆ.

ಮೇ ತಿಂಗಳ ಚಿನ್ನದ ದರಪಟ್ಟಿ (ಪ್ರತಿ ಗ್ರಾಂ.ಗೆ)
ದಿನಾಂಕ: 22 ಕ್ಯಾರೆಟ್ ಚಿನ್ನ ; 24 ಕ್ಯಾರೆಟ್ ಚಿನ್ನ
ಮೇ 9: ₹9,015 ; ₹9,835
ಮೇ 8: ₹9,130 ; ₹9,960
ಮೇ 7: ₹9,075 ; ₹9,900
ಮೇ 6: ₹9,025 ; ₹9,846
ಮೇ 5: ₹8,775 ; ₹9,573
ಮೇ 4: ₹8,755 ; ₹9,551
ಮೇ 3: ₹8,755 ; ₹9,551
ಮೇ 2: ₹8,755 ; ₹9,551
ಮೇ 1: ₹8,775 ; ₹9,573
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ದರವು ಪ್ರತಿ ಗ್ರಾಂಗೆ 99 ರೂಪಾಯಿ ಮತ್ತು ಪ್ರತಿ ಕಿಲೋಗ್ರಾಂಗೆ 99,000 ರೂಪಾಯಿ ಆಗಿದೆ. ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ 2,712 ರೂಪಾಯಿ ಹಾಗೂ 10 ಗ್ರಾಂ.ಗೆ 27,120 ರೂಪಾಯಿ ಆಗಿದೆ.












Click it and Unblock the Notifications