ಬಂಗಾರದ ಬೇಟೆಗೆ ಇನ್ನೊಂದು ತಿಂಗಳು ಕಾಯಿರಿ
ಮುಂಬೈ, ಜು. 27: ಬಂಗಾರದ ಬೇಟೆಗೆ ಇದು ಸಕಾಲ. ಚಿನ್ನದ ದರ ಇಳಿಕೆ ಇನ್ನು ಒಂದು ತಿಂಗಳು ಕಾಲ ಮುಂದುವರಿಯಲಿದ್ದು 10 ಗ್ರಾಂ ಚಿನ್ನ 23 ಸಾವಿರ ರು. ಗೆ ತಲುಪುವ ನಿರೀಕ್ಷೆ ಇದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಡಾಲರ್ ಮೌಲ್ಯ ಏರಿಕೆ, ಅಮೆರಿಕದ ಫೆಡರಲ್ ಬ್ಯಾಂಕ್ ನ ಬಡ್ಡಿದರದ ನಿರ್ಧಾರ ಚಿನ್ನದ ದರ ಇಳಿಕೆ ಮೇಲೆ ಗಣನೀಯ ಪರಿಣಾಮ ಬೀರಲಿದೆ. ನಿರಂತರ ಇಳಿಕೆ ಹಾದಿಯಲ್ಲಿ ಸಾಗಿದ್ದ ಚಿನ್ನ ಶನಿವಾರ ಮಾತ್ರ ಕೊಂಚ ಏರಿಕೆ ಕಂಡಿತ್ತು. ಆದರೆ ಮುಂದಿನ ದಿನಗಳಲ್ಲೂ ಇಳಿಕೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.[ನಾಲ್ಕು ಅತ್ಯುತ್ತಮ ಚಿನ್ನ ಉಳಿತಾಯ ಯೋಜನೆಗಳು]
ನಿಮ್ಮ ನಗರದ ಚಿನ್ನದ ದರ ಒಂದೇ ಕ್ಲಿಕ್ ನಲ್ಲಿ

ಜುಲೈ 29 ರ ನಂತರ ಸ್ಪಷ್ಟ ಚಿತ್ರಣ
ಫೆಡರಲ್ ಬ್ಯಾಂಕ್ ಜುಲೈ 29ರಂದು ಬಡ್ಡಿದರದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ. ಇದು ಚಿನ್ನದ ದರ ನಿರ್ಧಾರದ ಮೇಲೆ ಪರಿಣಾಮ ಬೀರಲಿದೆ. ಜತೆಗೆ ಚೀನಾ ಸಹ ತನ್ನ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ದೇಶದಲ್ಲಿರುವ ಎಲ್ಲ ಚಿನ್ನವನ್ನು ಹೊರಹಾಕುವ ಸಾಧ್ಯತೆಯಿದೆ. ಈ ಎಲ್ಲ ಸಂಗತಿಗಳು ಚಿನ್ನದ ದರ ಇಳಿಕೆ ಮಾಡಲಿವೆ.[ಭಾರತದಲ್ಲಿ ಚಿನ್ನಾಭರಣ ಖರೀದಿಗೆ 8 ಸೂತ್ರ]
ರೂಪಾಯಿ ಸಹ ಸ್ಥಿರತೆ ಕಾಯ್ದುಕೊಂಡಿದ್ದು, ಆಮದು ಮಾಡಿಕೊಳ್ಳುವ ಚಿನ್ನದ ಪ್ರಮಾಣದಲ್ಲೂ ಇಳಿಕೆಯಾಗಿದೆ. ಕೇಂದ್ರ ಸರ್ಕಾರದ ಕೆಲ ಆರ್ಥಿಕ ಸುಧಾರಣಾ ಕ್ರಮಗಳು ಚಿನ್ನದ ಬೇಡಿಕೆ ಕಡಿಮೆಯಾಗುವಂತೆ ಮಾಡಿದ್ದು ದರ ಇಳಿಕೆಯಲ್ಲಿ ಪಾತ್ರ ನಿರ್ವಹಿಸಿವೆ.
ಈ ಸಾರಿಯ ಅಕ್ಷಯ ತೃತೀಯಾ ವೇಳೆಗೂ ಚಿನ್ನದ ಬೇಡಿಕೆ ಅಷ್ಟೇನೂ ಇರಲಿಲ್ಲ. ಜನರು ಬೇರೆ ಹೂಡಿಕೆಯತ್ತ ವಿಶೇಷ ಗಮನ ಹರಿಸುತ್ತಿದ್ದು ಹಬ್ಬದ (ದೀಪಾವಳಿ) ಸಮಯ ಎದುರಾದಾಗ ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದು ನೋಡಬೇಕು.












Click it and Unblock the Notifications