Gold Good News: ಭಾರತದ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್: ದಕ್ಷಿಣ ಭಾರತದ ಈ ಭಾಗದಲ್ಲಿ ಖನಿಜ ನಿಕ್ಷೇಪ ಪತ್ತೆ, ಹೇಗೆ ಲಾಭ
Gold Good News: ಭಾರತೀಯರಿಗೆ ಚಿನ್ನ ಮತ್ತು ಬೆಳ್ಳಿಯ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ - ಏರಿಕೆಯ ಹಾವು - ಏಣಿ ಆಟವು ಮುಂದುವರಿದಿದೆ. ಅಮೆರಿಕ - ಇಸ್ರೇಲ್ Vs ಇರಾನ್ ದೇಶಗಳ ನಡುವೆ ಯುದ್ಧ ಪ್ರಾರಂಭವಾದ ಮೇಲೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಹಲವು ಏರಿಳಿತ ವರದಿಯಾಗಿದೆ. ಆದರೆ ಇದೀಗ ಕೊನೆಗೂ ಚಿನ್ನದ ವಿಷಯದಲ್ಲಿ ಭಾರತೀಯರು ಸಂತೋಷಪಡುವ ಸುದ್ದಿ ಬಂದಿದೆ.
ಇಷ್ಟು ಸುದೀರ್ಘ ವರ್ಷಗಳ ಕಾಲ ಭಾರತೀಯರು ಚಿನ್ನಕ್ಕಾಗಿ ವಿದೇಶಗಳ ಮೇಲೆ ಅಥವಾ ಆಮದಿನ ಮೇಲೆ ಅವಲಂಬನೆಯಾಗಬೇಕಾಗಿತ್ತು. ಇದೀಗ ಕೊನೆಗೂ ಭಾರತದಲ್ಲೇ ಚಿನ್ನ ಸಿಗುವ ಸಂತೋಷದ ಸುದ್ದಿ ಸಿಕ್ಕಿದೆ. ಇದರಲ್ಲಿ ಮತ್ತೊಂದು ಅಚ್ಚರಿ ಎಂದರೆ ಈಗ ದಕ್ಷಿಣ ಭಾರತದ ಮೇಲೆ ಇಡೀ ಭಾರತದ ಕಣ್ಣು ನೆಟ್ಟಿದೆ. ಅದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಭಾರತೀಯರಿಗೆ ಬಂಗಾರವೆಂದರೆ ಬಲು ಪ್ರಿಯ. ಚಿನ್ನದ ಖರೀದಿ ವಿಚಾರದಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ಗ್ರಾಹಕ / ಖರೀದಿ ಮಾಡುವ ರಾಷ್ಟ್ರವಾಗಿದೆ. ಅಮೂಲ್ಯವಾದ ಹಳದಿ ಲೋಹದ ಮೇಲಿನ ಪ್ರೀತಿಯು ವರ್ಷಗಳಿಂದ ಅಲ್ಲ; ಶತ ಮಾನಗಳಿಂದಲೂ ಮುಂದುವರಿದಿದೆ. ಸಾಂಪ್ರದಾಯಿಕ, ಮದುವೆ, ವಿಶೇಷ ಹಾಗೂ ಹೂಡಿಕೆಯ ದೃಷ್ಟಿಯಿಂದಲೂ ಭಾರತೀಯರು ಸಮಯ ಸಿಕ್ಕಾಗ ಚಿನ್ನ ಖರೀದಿ ಮಾಡುವುದು ಇದೆ. ಅವಕಾಶ ಸಿಕ್ಕಾಗ ಜನ ಚಿನ್ನದ ಮೇಲೆ ಹೂಡಿಕೆ ಮಾಡುವುದು ಮೊದಲಿನಿಂದಲೂ ರೂಢಿಸಿಕೊಂಡು ಬಂದಿರುವ ಪದ್ಧತಿ.
ಚಿನ್ನವನ್ನು ಖರೀದಿ ಮಾಡಿದರೆ ಅದು ಸಂಕಷ್ಟದ ಕಾಲದಲ್ಲಿ ನಮ್ಮ ಕೈಹಿಡಿಯುತ್ತದೆ ಎನ್ನುವ ನಂಬಿಕೆಯೂ ಭಾರತೀಯರಲ್ಲಿದೆ. ಇದೀಗ ಭಾರತೀಯರ ಶತಮಾನದಷ್ಟು ಹಳೆಯದಾದ ಕನಸು ಅಂತಿಮವಾಗಿ ನನಸಾಗುತ್ತದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ, ದೇಶದ ಮೊದಲ ದೊಡ್ಡ ಪ್ರಮಾಣದ ಖಾಸಗಿ ಚಿನ್ನದ ಗಣಿ ಮೇ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಇಲ್ಲಿನ ಜೋನ್ನಗಿರಿ ಸ್ಥಾವರದಲ್ಲಿ ವಾಣಿಜ್ಯ ಪೂರ್ವ ಕಾರ್ಯಾಚರಣೆಗಳು ನಡೆಯುತ್ತಿವೆ. ಜಿಯೋಮೈಸೋರ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಜೊನ್ನಗಿರಿ ಚಿನ್ನದ ಯೋಜನೆಯ ಸಂಸ್ಕರಣಾ ಘಟಕವು ಮೇ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ. ವರದಿಗಳ ಪ್ರಕಾರ ಇದೀಗ ಸ್ಥಾವರದಲ್ಲಿ ವಾಣಿಜ್ಯ ಪೂರ್ವ ಕಾರ್ಯಾಚರಣೆಗಳು ನಡೆಯುತ್ತಿವೆ.
ದಶಕಗಳಿಂದ ಭಾರತದ ಚಿನ್ನದ ಅನ್ವೇಷಣೆ ನಡೆಯುತ್ತಿದೆ. ಭಾರತವು ವಾರ್ಷಿಕವಾಗಿ 800 ಟನ್‌ಗಳಿಗಿಂತ ಹೆಚ್ಚು ಅಮೂಲ್ಯ ಲೋಹವನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ವಿದೇಶೀ ವಿನಿಮಯ ಮೀಸಲುಗಳನ್ನು ತಗ್ಗಿಸುತ್ತಲೇ ಇದೆ. ಮತ್ತೊಂದೆಡೆ, ದೇಶೀಯ ಉತ್ಪಾದನೆ ಕಡಿಮೆಯಾಗಿದೆ. ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿಗಳು ಪ್ರತಿ ವರ್ಷ ಸುಮಾರು 1.5 ಟನ್ ಇಳುವರಿ ನೀಡುವ ಏಕೈಕ ಪ್ರಮುಖ ಉತ್ಪಾದಕರಾಗಿ ಮುಂದುವರೆದಿದೆ.
ಭಾರತದ ಮೊದಲ ಖಾಸಗಿ ವಲಯದ ಚಿನ್ನದ ಗಣಿ
TOI ವರದಿಯ ಪ್ರಕಾರ, ಜೊನ್ನಗಿರಿ ಚಿನ್ನದ ಯೋಜನೆಯು ಕರ್ನೂಲ್‌ನ ಜೊನ್ನಗಿರಿ, ಎರ್ರಗುಡಿ ಮತ್ತು ಪಗಿದಿರಾಯ್ ಗ್ರಾಮಗಳಲ್ಲಿ ಸುಮಾರು 598 ಹೆಕ್ಟೇರ್‌ಗಳಷ್ಟು ವ್ಯಾಪಿಸಿದೆ. ಈ ಗ್ರಾಮಗಳಲ್ಲಿನ ದೃಢವಾದ ಸಂಪನ್ಮೂಲ ಅಂದಾಜುಗಳು 13.1 ಟನ್ ಚಿನ್ನದ ನಿಕ್ಷೇಪಗಳಾಗಿವೆ. ಇಲ್ಲಿ ಒಟ್ಟು 42.5 ಟನ್ ಹಳದಿ ಬಂಗಾರವನ್ನು ನಿರೀಕ್ಷಿಸಲಾಗಿದೆ. ಗಣಿ ತನ್ನ ಗರಿಷ್ಠ ಸಾಮರ್ಥ್ಯವನ್ನು ತಲುಪಿದಾಗ, ಪ್ರತಿ ವರ್ಷ ಸರಿಸುಮಾರು 1,000 ಕೆಜಿ ಶುದ್ಧ ಚಿನ್ನವನ್ನು ಹೊರತೆಗೆಯಬಹುದು ಎಂದು ಹೇಳಲಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೇ ಆರಂಭದಲ್ಲಿ ಈ ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸುವ ನಿರೀಕ್ಷೆಯಿದೆ. ಸಂಸ್ಕರಣಾ ಘಟಕವನ್ನು 13 ತಿಂಗಳಲ್ಲಿ ಕಾರ್ಯಾರಂಭ ಮಾಡಲಾಗಿದೆ ಎಂದು ಆಂಧ್ರಪ್ರದೇಶದ ಗಣಿ ಮತ್ತು ಭೂವಿಜ್ಞಾನದ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಮೀನಾ ಹೇಳಿದ್ದಾರೆ. ಭಾರತದಲ್ಲೇ ಅಪಾರ ಚಿನ್ನ ಸಿಗುವುದರಿಂದ ಮುಂದಿನ ದಿನಗಳಲ್ಲಿ ವಿದೇಶಗಳಿಂದ ಚಿನ್ನ ಆಮದು ಮಾಡಿಕೊಳ್ಳುವ ಪ್ರಮಾಣ ಅಲ್ಪ ಇಳಿಕೆಯಾಗಲಿದೆ. ಮುಂದೆ ಭಾರತೀಯರಿಗೆ ಭಾರೀ ಅನುಕೂಲವಾಗಲಿದೆ. ಅದರಲ್ಲೂ ಬಂಗಾರ ಪ್ರಿಯರಿಗೆ ಇದು ಭರ್ಜರಿ ಗುಡ್‌ನ್ಯೂಸ್ ಎಂದೇ ಹೇಳಲಾಗಿದೆ.












Click it and Unblock the Notifications