Gold Price: ಚಿನ್ನದ ದರ ದಾಖಲೆಯ ಹೆಚ್ಚಳ, 10 ಗ್ರಾಂಗೆ 1,07,807 ರೂಪಾಯಿ
Gold Price Today: ಚಿನ್ನ ಬೆಲೆಯಲ್ಲಿ ದಾಖಲೆಯ ಏರಿಕೆ ಆಗಿದೆ. ಚಿನ್ನದ ಫ್ಯೂಚರ್‌ಗಳು ನಿರಂತರ ಏರಿಕೆಯಿಂದ ಬೆಲೆಯಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಾಣವಾಗಿದೆ. ಅಕ್ಟೋಬರ್ ವಿತರಣೆಯ ಚಿನ್ನವು ಶುಕ್ರವಾರ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ನಲ್ಲಿ 10 ಗ್ರಾಂಗೆ 1,07,807 ರೂಪಾಯಿ ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಮಾತ್ರವೇ ₹6,500 ಹೆಚ್ಚಾಗಿದೆ ಎಂದು ವರದಿ ಆಗಿದೆ.
ಅಮೆರಿಕದ ಉದ್ಯೋಗ ಡೇಟಾ ಪ್ರಕಟಣೆಗೆ ಮುನ್ನ ಹೂಡಿಕೆದಾರರು ಲಾಭ ವಸೂಲಿ ಮಾಡಿಕೊಂಡಿದ್ದರೂ, ಜಾಗತಿಕ ಆರ್ಥಿಕ ಅನಿಶ್ಚಿತತೆ, ಕೇಂದ್ರ ಬ್ಯಾಂಕ್‌ಗಳ ನಿರಂತರ ಖರೀದಿ ಹಾಗೂ ಫೆಡರಲ್ ರಿಸರ್ವ್ ಬಡ್ಡಿದರ ಕಡಿತದ ನಿರೀಕ್ಷೆಗಳು ಬೆಲೆ ಏರಿಕೆಗೆ ಬಲ ತಂದಿವೆ. ಚಿನ್ನಕ್ಕೆ ಜಾಗತಿಕ ಅನಿಶ್ಚಿತತೆ ಕಾಡುತ್ತಿದೆ. ಬೇಡಿಕೆ ಹೆಚ್ಚಾಗಿ, ದರವು ಏರಿಕೆ ಆಗುತ್ತಿದೆ.

ವಿದೇಶಿ ಡಾಲರ್ ಸೂಚ್ಯಂಕ 98 ಕ್ಕಿಂತ ಹೆಚ್ಚಿದ್ದರೂ, ವ್ಯಾಪಾರ ಸುಂಕ ಹಾಗೂ ಜಿಯೋಪಾಲಿಟಿಕಲ್ ಅಸ್ಥಿರತೆ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಗಳತ್ತ ಆಕರ್ಷಿಸಿದೆ. ಇದರಿಂದ ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ. LKP ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ ಅವರ ಪ್ರಕಾರ, ರೂಪಾಯಿ 1,06,450 ಗಿಂತ ಹೆಚ್ಚಾದರೆ ಚಿನ್ನವು ಬಲಿಷ್ಠ ಹಾದಿಯಲ್ಲೇ ಸಾಗಲಿದೆ. ಅಂದರೆ ಹತ್ತು ಗ್ರಾಮಗೆ ರೂ.1,07,260 ಗೆ ಸಮೀಪಿಸುತ್ತದೆ. ಈ ಮಟ್ಟ ಮೀರಿದರೆ ಹೆಚ್ಚಳ ಸಾಧ್ಯ ಮತ್ತು ರೂ. 1,06,150ಕ್ಕಿಂತ ಕೆಳಗೆ ಇಳಿದರೆ ದುರ್ಬಲತೆಯನ್ನು ಸೂಚಿಸುತ್ತದೆ.
ಇನ್ನೂ ದೇಶೀಯ ಮಾರುಕಟ್ಟೆಯಲ್ಲಿ MCX ವ್ಯಾಪಾರ ಚಟುವಟಿಕೆ ಮತ್ತು ಹೂಡಿಕೆಯಲ್ಲಿ ಹರಿವು ಬಂಗಾರಕ್ಕೆ ಹೆಚ್ಚಿನ ಬೆಂಬಲ ನೀಡುತ್ತದೆ. ಕೇಂದ್ರ ಬ್ಯಾಂಕ್ ಬೇಡಿಕೆ, ಬಡ್ಡಿದರ ಕಡಿತದ ನಿರೀಕ್ಷೆ ಮತ್ತು ಜಾಗತಿಕ ಅಸ್ಥಿರತೆಯಿಂದ ಚಿನ್ನಕ್ಕೆ ಇನ್ನಷ್ಟು ದಾಖಲೆ ಮಟ್ಟದತ್ತ ಹೆಚ್ಚಾಗುವ ನಿರೀಕ್ಷೆಗಳು ಇವೆ ಎಂದು ಈಗಾಗಲೇ ವಿಶ್ಲೇಷಕರು ತಿಳಿಸಿದ್ದಾರೆ.
ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಚಿನ್ನ ಬೆಲೆಯ ಅಪಾರ ಪ್ರಮಾಣದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿರುವ ಸಭೆಯ ಮೇಲೆ ಹೂಡಿಕೆದಾರರ ಚಿತ್ತ ನೆಟ್ಟಿದೆ. ಯುಎಸ್ ಸುಂಕ ಹೇರಿಕೆಯ ಅನಿಶ್ಚಿತತೆಗಳ ನಡುವೆ ಬೇಡಿಕೆ ಹೆಚ್ಚಾಗಲಿದೆ.












Click it and Unblock the Notifications