Get Updates
Get notified of breaking news, exclusive insights, and must-see stories!

Gold Rate: ಬ್ಯಾಂಕ್ ಲಾಕರ್‌ಗಳಲ್ಲಿ ನಿಮ್ಮ ಚಿನ್ನ ಸುರಕ್ಷಿತವೇ? ಆರ್‌ಬಿಐನ ಈ '100 ಪಟ್ಟು' ನಿಯಮ ತಿಳಿಯಿರಿ

ಜಾಗತಿಕವಾಗಿ ಚಿನ್ನ-ಬೆಳ್ಳಿಗೆ ಇನ್ನಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಹಲವು ಕಾರಣಗಳಿಂದ ಚಿನ್ನದ ದರ ಕೈಗೆಟುಕದ ಎತ್ತರ ತಲುಪಿದೆ. ಇಂತಹ ಚಿನ್ನಾಭರಣಗಳನ್ನು ನೀವು ಹೊಂದಿದ್ದು, ಅದನ್ನು ಬ್ಯಾಂಕ್ ಸುರಕ್ಷತಾ ಲಾಕರ್‌ಗಳಲ್ಲಿ ಇಟ್ಟಿದ್ದೀರಾ?. ಅದಕ್ಕಾಗಿ ನೀವು ಪಾವತಿಸುವ ಶುಲ್ಕವು (ಬಾಡಿಗೆ) ನಿಮ್ಮ ಬೆಲೆ ಬಾಳುವ ವಸ್ತುಗಳನ್ನು ಸುರಕ್ಷತೆ ಸಾಕಾಗುತ್ತದೆಯೇ? ಈ ಬಗ್ಗೆ ಹೊಸ ಮೌಲ್ಯಮಾಪನ ಮಾಡಬೇಕಿದೆ.

ಏಕೆಂದರೆ ಬಂಗಾರದ ದರ ಏರಿಕೆ ಆಗುತ್ತಿದೆ. ಅನಿರೀಕ್ಷಿತ ಸಂದರ್ಭದಲ್ಲಿ ಲಾಕರ್‌ಗಳಿಗೆ ನೀವು ಪಾವತಿಸುವ ಬಾಡಿಗೆ ಸಾಕಾಗುವುದಿಲ್ಲ. ನೀವು ಪಾವತಿಸುವ ವಾರ್ಷಿಕ ಬಾಡಿಗೆ 100 ಪಟ್ಟು ಹಣಕ್ಕೆ ಮಾತ್ರವೇ ಬ್ಯಾಂಕ್ ಹೊಣೆಗಾರನಾಗಿರುತ್ತದೆ. ಏನಿದು? ಲಾಕರ್‌ಗಳ ಮಾರ್ಗಸೂಚಿ, ನಿಯಂತ್ರಿಸುವ ನಿಯಮಗಳೇನು, ನಿಮ್ಮ ಬೆಲೆ ಬಾಳುವ ಆಭರಣಗಳಿಗೆ ಪ್ರತ್ಯೇಕ ವಿಮೆ ಮಾಡಿಸಬಹುದೇ, ಆರ್‌ಬಿಐ ನಿಯಮ ಹೇಳುವುದೇನು? ಎಂಬೆಲ್ಲ ಮಾಹಿತಿ, ಪಾರ್ಯಾಯ ಆಯ್ಕೆಗಳ ವಿವರ ಇಲ್ಲಿದೆ, ತಪ್ಪದೇ ಓದಿ.

Gold Bank Locker Safety Alert RBI Liability Limits and Why You Need Private Insurance for Your Gold

ಬ್ಯಾಂಕ್ ಲಾಕರ್‌ಗಳಲ್ಲಿನ ಆಭರಣಗಳಿಗೆ ಹೊಣೆ ಯಾರು?

ಬ್ಯಾಂಕ್ ಸುರಕ್ಷಿತ ಲಾಕರ್‌ಗಳಲ್ಲಿ ಚಿನ್ನಾಭರಣ ಇಟ್ಟ ಬಳಿಕ ಬ್ಯಾಂಕ್‌ ಕಳತನವಾದರೆ, ಬೆಂಕಿಗೆ ಆಹುತಿಯಾದರೆ ಅಥವಾ ನೌಕರರು ವಂಚನೆಗೈದರೆ, ಇಂತಹ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ ನಿಮ್ಮ ಅತೀ ಮೌಲ್ಯದ ವಸ್ತುಗಳಿಗೆ ಯಾರು ಜವಾಬ್ದಾರರು. ಬ್ಯಾಂಕ್ ಹೊಣೆ ಹೊರುತ್ತದೆಯೇ?. ಹೌದು, ಬ್ಯಾಂಕ್ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಆದರೆ ಬೆಳೆ ಬಾಳುವ ವಸ್ತುಗಳ ಸಂಪೂರ್ಣ ಮೌಲ್ಯಕ್ಕೆ ಅಲ್ಲ. ಬದಲಾಗಿ ನೀವು ಕಟ್ಟಿರುವ ಬಾಡಿಗೆ 100 ಪಟ್ಟಿಗೆ ಮಾತ್ರವೇ ಸೀಮಿತವಾಗಿ ಹೊಣೆಗಾರಿಕೆಗೆ ವಹಿಸಿಕೊಳ್ಳುತ್ತದೆ. ಮೇಲಿನ ಯಾವುದೇ ಘಟನೆಗಳು ನಡೆದರೂ ಆಭರಣ/ವಸ್ತುಗಳು ಕಾಣೆಯಾದಲ್ಲಿ ನೀವು ಕಟ್ಟಿದ ಬಾಡಿಗೆಗೆ ಹಣದ 00 ಪಟ್ಟು ಹಣ ನಿಮಗೆ ಸಿಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟವಾಗಿ ತಿಳಿಸಿದೆ.

ಉದಾಹರಣೆಗೆ ವಾರ್ಷಿಕ ಲಾಕರ್ ಬಾಡಿಗೆ 2,000 ರೂ. ಆಗಿದ್ದರೆ, ಬ್ಯಾಂಕಿನ ಹೊಣೆಗಾರಿಕೆ 2 ಲಕ್ಷ ರೂ. ಮಾತ್ರ ಆಗಿರುತ್ತದೆ. ಪ್ರವಾಹ ಅಥವಾ ಭೂಕಂಪದಂತಹ ನೈಸರ್ಗಿಕ ವಿಕೋಪಗಳು ಘಟಿಸಿದರೆ ಬ್ಯಾಂಕುಗಳು ಶೂನ್ಯ ಹೊಣೆಗಾರಿಕೆ ಹೊಂದಿರುತ್ತವೆ. ಆದರೆ ಇಂದಿನ ಚಿನ್ನದ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ಅಷ್ಟು ಹಣದ ಹೊಣೆಗಾರಿಕೆ ಬ್ಯಾಂಕ್ ಹೊರುವುದಿಲ್ಲ. ಇಂದಿನ ಸನ್ನಿವೇಶದಲ್ಲಿ ಇಷ್ಟು ಕಡಿಮೆ ಹೊಣೆಗಾರಿಕೆಯ ಬ್ಯಾಂಕ್‌ಗಳ ಲಾಕರ್‌ನಲ್ಲಿ ಚಿನ್ನಾಭರಣ, ವಸ್ತುಗಳನ್ನು ಇಡಲು ನಿಮಗೆ ಮನಸ್ಸಾಗುತ್ತಿಲ್ಲವೇ. ಹಾಗಾದರೆ ಏನು ಮಾಡಬೇಕು ಅನ್ನುವವರಿಗೆ ಇಲ್ಲಿ ಪರ್ಯಾಯ ಮಾರ್ಗ, ಉತ್ತರ ಮುಂದಿದೆ.

ಲಾಕರ್‌ಗಳಲ್ಲಿನ ವಸ್ತುಗಳಿಗೆ ವಿಮೆ ಮಾಡಿಸಬಹುದೇ?

ಲಾಕರ್‌ಗಳಲ್ಲಿ ಠೇವಣಿ ಇಟ್ಟ ಚಿನ್ನದ ಆಭರಣಗಳಿಗೆ ವಿಮೆ ನೀಡುವುದಿಲ್ಲ. ಏಕೆಂದರೆ ಲಾಕರ್‌ನಲ್ಲಿರುವ ವಸ್ತುಗಳ ದಾಖಲೆಗಳು ಗ್ರಾಹಕರಿಗೆ ಮಾತ್ರ ತಿಳಿದಿರುತ್ತದೆ. ದಾಖಲೆ ಇಟ್ಟುಕೊಳ್ಳದ ಕಾರಣ ಅವುಗಳಿಗೆ ವಿಮೆ ನೀಡುವುದಿಲ್ಲ. ಇದೆಲ್ಲದರ ಬಗ್ಗೆ ಬ್ಯಾಂಕುಗಳು ಲಾಕರ್ ಒಪ್ಪಂದದಲ್ಲಿ ಸ್ಪಷ್ಟಪಡಿಸಬೇಕು ಎಂದು ಆರ್‌ಬಿಐ ತಿಳಿಸಿದೆ.

ಗ್ರಾಹಕರು ಲಾಕರ್‌ನಲ್ಲಿರುವ ವಸ್ತುಗಳ ಮೌಲ್ಯಕ್ಕೆ ಅನುಗುಣವಾಗಿ ವಿಮೆ ಮಾಡಿಸಬಹುದಾಗಿದೆ. ಆಭರಣಗಳಿಗೆ ಸಾಮಾನ್ಯ ವಿಮಾದಾರರಿಂದ ವಿಮೆ ಖರೀದಿಸಲು ಅವಕಾಶ ಇದೆ. ಸಾಮಾನ್ಯ ವಿಮೆಯೊಂದಿಗೆ ವ್ಯವಹರಿಸುವ ಸ್ವತಂತ್ರ ವಿಮಾ ಪಾಲಿಸಿ ಪೂರೈಕೆದಾರರ ಮೂಲಕ ಪ್ರತ್ಯೇಕ ವಿಮಾ ಪಾಲಿಸಿ ಮಾಡಿಸಬಹುದಾಗಿದೆ ಹಣಕಾಸು ಸಲಹೆಗಾರ ರೂಪ್ಯಾಪೈಸಾದ ನಿರ್ದೇಶಕ ಮುಖೇಶ್ ಪಾಂಡೆ ತಿಳಿಸಿದ್ದಾರೆ.

Gold Bank Locker Safety Alert RBI Liability Limits and Why You Need Private Insurance for Your Gold

ನೀವು ಮಾಡಿಸುವ ವಿಮೆಗಳು ಒಂದು ವೇಳೆ ಬ್ಯಾಂಕ್ ಲಾಕರ್ ಕಳ್ಳತನ, ಬೆಂಕಿ ಮತ್ತು ನೈಸರ್ಗಿಕ ವಿಕೋಪಗಳು ಆದಾಗ ಚಿನ್ನದ ವಸ್ತುಗಳಿಗೆ ಕವರೇಜ್ ಒದಗಿಸುತ್ತವೆ. "ಪ್ರಮಾಣಿತ ಗೃಹ ವಿಮಾ ಪಾಲಿಸಿಯ ಅಡಿಯಲ್ಲಿ 'ಮೌಲ್ಯಯುತ ವಸ್ತುಗಳು ಮತ್ತು ಆಭರಣ' ಆಡ್-ಆನ್ (ಕವರ್) ಖರೀದಿಸುವುದು ಉತ್ತಮ ಆಯ್ಕೆ. ಇದು ನಿಮ್ಮ ಚಿಂತೆಯನ್ನು ದೂರು ಮಾಡುತ್ತದೆ. HDFC ERGO ಮತ್ತು ಓರಿಯಂಟಲ್ ಇನ್ಶುರೆನ್ಸ್‌ನಂತಹ ಸಾಮಾನ್ಯ ವಿಮಾದಾರರು ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿ ಆಭರಣ ವಿಮೆ ಒದಗಿಸುತ್ತಾರೆ ಎಂದು ಹಣಕಾಸು ಸಲಹಾ ಸಂಸ್ಥೆಯಾದ 1 ಫೈನಾನ್ಸ್‌ನ ಉಪಾಧ್ಯಕ್ಷ ಅನುಜ್ ಮೆಹ್ತಾ ತಿಳಿಸಿದ್ದಾರೆ.

ನೈಸರ್ಗಿಕ ವಿಕೋಪಗಳಿಂದ ನಷ್ಟ ಆದ್ರೆ ಏನಾಗುತ್ತೆ?

ನೈಸರ್ಗಿಕ ವಿಕೋಪಗಳಾದ ಭೂಕಂಪ, ಪ್ರವಾಹ, ಮಿಂಚು-ಗುಡುಗು ಇಲ್ಲವೇ ಗ್ರಾಹಕರ ನಿರ್ಲಕ್ಷ್ಯದಿಂದ ಲಾಕರ್‌ನಲ್ಲಿದ್ದ ವಸ್ತುಗಳಿಗೆ ನಷ್ಟವಾದರೆ, ಅದರ ಸಂಪೂರ್ಣ ಹೊಣೆಗಾರಿಕೆ ಗ್ರಾಹಕರ ಮೇಲೆಯೇ ಎಂದು ಆರ್‌ಬಿಐ ನಿಯಮ ಹೇಳುತ್ತದೆ. ಇದನ್ನು 'ದೇವರ ಕೃತ್ಯಗಳಿಂದ' ಉಂಟಾಗುವ ನಷ್ಟವೇ ಹೊರತು ಬ್ಯಾಂಕ್‌ನಿಂದಲ್ಲ, ಹೀಗಾಗಿ ಅದಕ್ಕೆ ಬ್ಯಾಂಕ್ ಜವಾಬ್ದಾರನಲ್ಲ. ಆದರೆ ಇಂತಹ ಅಪಾಯಗಳಿಂದ ಅಗತ್ಯ ಮುನ್ನೆಚ್ಚರಿಕೆ ಬ್ಯಾಂಕ್ ವಹಿಸಲಾಗುತ್ತದೆ. ಅದೂ ಮೀರಿ ವಿಕೋಪಗಳಾದರೆ ಬ್ಯಾಂಕ್ ಹೊಣೆ ಹೊರುವುದಿಲ್ಲ ಎಂದು ನಿಯಮ ಹೇಳುತ್ತದೆ.

ಆರ್ಥಿಕ ಮೌಲ್ಯ ಬಳಕೆ ಉತ್ತಮ ಆಯ್ಕೆ

ಚಿನ್ನದ ಓವರ್‌ಡ್ರಾಫ್ಟ್ (Gold OD) ಗ್ರಾಹಕರಿಗೆ ಚಿನ್ನವನ್ನು ಸುರಕ್ಷಿತವಾಗಿ ಇಟ್ಟುಕೊಂಡೇ ಅದರ ಆರ್ಥಿಕ ಮೌಲ್ಯವನ್ನು ಬಳಸುವ ಉತ್ತಮ ಆಯ್ಕೆಯಾಗಿದೆ. ಬಳಸಿದ ಹಣದ ಮೇಲೆ ಮಾತ್ರ ಬಡ್ಡಿ ವಿಧಿಸಲಾಗುತ್ತದೆ ಮತ್ತು ಸಂಸ್ಕರಣಾ ಶುಲ್ಕ ಕಡಿಮೆಯಾಗಿದೆ. ಬಂಗಾರವನ್ನು ಓ.ಡಿಗೆ ಒತ್ತೆ ಇಟ್ಟಾಗ ಬ್ಯಾಂಕ್ ಪಾಲಕನಾಗಿ ಕಾರ್ಯ ನಿರ್ವಹಿಸುತ್ತದೆ. ಶೇಕಡಾ 100ರಷ್ಟು ಹೊಣೆಗಾರಿಕೆ ವಹಿಸುತ್ತದೆ. ಲಾಕರ್‌ನ ಸೀಮಿತ ಜವಾಬ್ದಾರಿಗಿಂತ ಇದು ಹೆಚ್ಚು ಸುರಕ್ಷಿತವಾಗಿದೆ. ಈ ಮಾರ್ಗವನ್ನು ಗ್ರಾಹಕರು ಕಂಡುಕೊಳ್ಳಬಹುದಾಗಿದೆ.

ಎಚ್ಚರಿಕೆಗಳು ಏನು?

ಗ್ರಾಹಕರು ಚಿನ್ನವನ್ನು ಓ.ಡಿ ಇಟ್ಟ ಸಂದರ್ಭದಲ್ಲಿ ಅಗತ್ಯ ಅನ್ನಿಸಿದಾಗ ತಕ್ಷಣಕ್ಕೆ ಹಿಂಪಡೆಯಲು ಆಗದಿರಬಹುದು. ಆದ್ದರಿಂದ, ನಿಯಮಿತವಾಗಿ ಧರಿಸುವ ಆಭರಣಗಳಿಗೆ ಇದು ಸೂಕ್ತವಲ್ಲ. ಕುಟುಂಬದ ಪರಂಪರಾಗತ ಆಭರಣಗಳಿಗೆ ಇದು ಅನ್ವಯವಾಗುತ್ತದೆ. ಬಲವಾದ ವಿಮಾ ಪಾಲಿಸಿಯೊಂದಿಗೆ ಉನ್ನತ ದರ್ಜೆಯ ಎಲೆಕ್ಟ್ರಾನಿಕ್ ಹೋಮ್ ಸೇಫ್ ಅಥವಾ ಬ್ಯಾಂಕ್ ಲಾಕರ್‌ಗಳು ಹೆಚ್ಚು ಪ್ರಾಯೋಗಿಕ ಪರ್ಯಾಯ ಮಾರ್ಗಗಳಾಗಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+