ಮಾರ್ಚ್ 17ರಂದು ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ
ಬೆಂಗಳೂರು, ಮಾರ್ಚ್ 17: ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಬುಧವಾರ ಸ್ಥಿರವಾಗಿದೆ. ಎಂಸಿಎಕ್ಸ್‌ನಲ್ಲಿ ಹಳದಿ ಲೋಹದ ಬೆಲೆ ಮಂಗಳವಾರದ ಸ್ಥಿತಿಯಲ್ಲಿಯೇ ಮುಂದುವರಿದೆ. ಎಂಸಿಎಕ್ಸ್‌ನಲ್ಲಿ ಮಂಗಳವಾರ ಪ್ರತಿ ಹತ್ತು ಗ್ರಾಂ ಚಿನ್ನದ ದರ 300 ರೂಪಾಯಿಯಷ್ಟು ಇಳಿಕೆಯಾಗಿತ್ತು. ಕೆಲವು ನಗರಗಳಲ್ಲಿ ಹೊರತುಪಡಿಸಿ ವಿವಿಧ ನಗರಗಳಲ್ಲಿ 10 ರೂಪಾಯಿಯಿಂದ 300 ರೂಪಾಯಿಯವರೆಗೂ ಬದಲಾವಣೆಗಳಾಗಿತ್ತು.
ಎಂಸಿಎಕ್ಸ್‌ನಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಎರಡರಲ್ಲಿಯೂ ಸ್ಥಿರತೆ ಕಾಯ್ದುಕೊಳ್ಳಲಾಗಿದ್ದು, ಬದಲಾವಣೆಯಾಗಿಲ್ಲ. 22 ಕ್ಯಾರಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 43,840 ರೂ. ಇದೆ. 24 ಕ್ಯಾರಟ್ ಚಿನ್ನದ ಹತ್ತು ಗ್ರಾಂ.ಗೆ 44,480 ರೂಪಾಯಿ ದರವಿದೆ. ಆದರೆ ಇದು ಎಲ್ಲ ನಗರಗಳಿಗೂ ಅನ್ವಯಿಸುವುದಿಲ್ಲ. ಕೆಲವು ನಗರಗಳಲ್ಲಿ ಚಿನ್ನದ ದರ ಸೋಮವಾರದ ಮಟ್ಟವನ್ನೇ ಕಾಯ್ದುಕೊಂಡಿದೆ. ಇನ್ನು ಕೆಲವು ನಗರಗಳಲ್ಲಿ ಮತ್ತಷ್ಟು ಇಳಿಕೆಯಾಗಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆಯು 100 ಗ್ರಾಂಗೆ 4,38,400 ಹಾಗೂ 4,48,400 ರೂ ದರವಿದೆ. ಇದು ದೇಶದ ಒಟ್ಟಾರೆ ಚಿನ್ನದ ಬೆಲೆಯಾಗಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ಚಿನ್ನದ ಮೇಲಿನ ತೆರಿಗೆ ವಿಭಿನ್ನವಾಗಿರುವುದರಿಂದ ಪ್ರಮುಖ ನಗರಗಳಲ್ಲಿ ಅದರ ದರದಲ್ಲಿ ವ್ಯತ್ಯಾಸವಿದೆ.

ದೆಹಲಿಯಲ್ಲಿ ದರ
ಹಳದಿ ಲೋಹದ ಬೆಲೆ ದೆಹಲಿಯಲ್ಲಿ ಹತ್ತು ರೂಪಾಯಿಯಷ್ಟು ಅಲ್ಪ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 44,160 ರೂ ದಿಂದ 44,150ಕ್ಕೆ ಇಳಿಕೆಯಾಗಿ ಮತ್ತೆ 44,160ಕ್ಕೆ ತಲುಪಿತ್ತು. ಅದು ಬುಧವಾರ 44,150 ರೂ.ಗೆ ಇಳಿಕೆಯಾಗಿದೆ. ಹಾಗೆಯೇ 24 ಕ್ಯಾರಟ್ ಚಿನ್ನ ಬೆಲೆ ಗ್ರಾಂಗೆ ಕೂಡ 10 ರೂಪಾಯಿಯಂತೆ ಅಗ್ಗವಾಗಿದ್ದು, ಪ್ರತಿ 10 ಗ್ರಾಂ ಚಿನ್ನದ ದರ 48,170 ರೂಪಾಯಿಯಿಂದ 48,160 ರೂಪಾಯಿಗೆ ತಲುಪಿದೆ.

ಬೆಂಗಳೂರಲ್ಲಿ ಚಿನ್ನದ ದರ
ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಸೋಮವಾರ ಬೆಳಗಿನ ಅವಧಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. 22 ಕ್ಯಾರಟ್ ಚಿನ್ನದ ಬೆಲೆ 42,010 ರೂ.ನಲ್ಲಿ ಸ್ಥಿರವಾಗಿದೆ. ಹಾಗೆಯೇ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ ಕೂಡ ಬದಲಾವಣೆ ಕಂಡಿಲ್ಲ. ಅದು ಶುದ್ಧ ಚಿನ್ನದ ದರ 45,830 ರೂಪಾಯಿಯಷ್ಟಿದೆ. ಎರಡು ದಿನಗಳಿಂದ ಬೆಂಗಳೂರಿನಲ್ಲಿ ಹಳದಿ ಲೋಹದ ಬೆಲೆ ಸ್ಥಿರವಾಗಿದೆ.

ಚೆನ್ನೈನಲ್ಲಿ ಬೆಲೆ ಎಷ್ಟು?
ಚೆನ್ನೈನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಪುನಃ 10 ರೂಪಾಯಿಯಷ್ಟು ಕಡಿಮೆಯಾಗಿದೆ. ಮಂಗಳವಾರ 42,270 ರೂಪಾಯಿ ದರವಿದ್ದ 10 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಬೆಲೆ ಬುಧವಾರ 42,260 ರೂಪಾಯಿಗೆ ಇಳಿದಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ 46,110 ರೂ ದಿಂದ 46,100 ರೂ.ಗೆ ತಗ್ಗಿದೆ.

ಮುಂಬೈನಲ್ಲಿ ಚಿನ್ನದ ದರ
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ಸ್ಥಿರವಾಗಿದ್ದು 43,840ಕ್ಕೆ ರೂ ದರದಲ್ಲಿದೆ. 24 ಕ್ಯಾರಟ್ ಚಿನ್ನದ ಬೆಲೆ 44,840 ರೂ.ದಲ್ಲಿದೆ. ಕೇರಳದಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಸ್ಥಿರತೆ ಇದೆ. 22 ಕ್ಯಾರೆಟ್ ಚಿನ್ನಕ್ಕೆ 42,010 ರೂ ದರವಿದ್ದರೆ, 24 ಕ್ಯಾರಟ್ ಹಳದಿ ಲೋಹ 45,830 ರೂಗೆ ಮಾರಾಟವಾಗುತ್ತಿದೆ.

ದೇಶದಲ್ಲಿ ಬೆಳ್ಳಿ ಬೆಲೆ
ಬೆಳ್ಳಿ ದರದಲ್ಲಿಯೂ ದೇಶದ ವಿವಿಧ ನಗರಗಳಲ್ಲಿ ಏರಿಳಿತ ಕಂಡಿದೆ, ಇನ್ನು ಕೆಲವು ಕಡೆ ಸ್ಥಿರವಾಗಿದೆ. ಎಂಸಿಎಕ್ಸ್‌ನಲ್ಲಿ 600 ರೂಪಾಯಿಯಷ್ಟು ಪ್ರತಿ ಕೆಜಿ ಬೆಳ್ಳಿ ದರ ಇಳಿಕೆಯಾಗಿದೆ. ಪ್ರಸ್ತುತ ಒಂದು ಕೆಜಿ ಬೆಳ್ಳಿಗೆ 67,000 ರೂ ದರವಿದೆ. ಬೆಂಗಳೂರಿನಲ್ಲಿ ಸತತ ಎರಡನೆಯ ದಿನ ಏರಿಕೆ ಕಂಡಿದೆ. ನಗರದಲ್ಲಿ ಬೆಳ್ಳಿ ದರ ಒಂದು ಕೆಜಿಗೆ 200 ರೂಪಾಯಿ ಹೆಚ್ಚಳವಾಗಿದ್ದು, 67,600 ರೂಪಾಯಿಯಿಂದ 67,800 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿಗೆ 600 ರೂಪಾಯಿ ಇಳಿಕೆಯಾಗಿದ್ದು 67,600 ರೂ. ದಿಂದ 67,000 ರೂ.ಗೆ ಅಗ್ಗವಾಗಿದೆ. ಚೆನ್ನೈನಲ್ಲಿ 71,600 ರೂ ಮತ್ತು ಮುಂಬೈನಲ್ಲಿ 67,000 ರೂಪಾಯಿ ದರವಿದೆ.
* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 9 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.












Click it and Unblock the Notifications